ಸಾರಾಂಶ
ದೇಶದ 10ನೇ ಪೊಲೀಸ್ ಠಾಣೆ ಎಂಬ ಹೆಗ್ಗಳಿಕೆ ಕೇಂದ್ರ ಗೃಹ ಇಲಾಖೆ ನೀಡುವ ಅತ್ಯುತ್ತಮ ಪೊಲೀಸ್ ಠಾಣೆ ವಾರ್ಷಿಕ ಪ್ರಶಸ್ತಿಗೆ ದೇಶದ ಪ್ರತಿ ರಾಜ್ಯದಿಂದ ಮೂರು ಪೊಲೀಸ್ ಠಾಣೆಗಳನ್ನು ಆಯ್ಕೆ ಮಾಡಲಾಗುತ್ತದೆ, ರಾಜ್ಯದ 906 ಪೊಲೀಸ್ ಠಾಣೆಗಳ ಪೈಕಿ ರಾಯಚೂರು ಜಿಲ್ಲೆಯ ಕವಿತಾಳ, ಬಳಗಾನೂರು ಮತ್ತು ಬಳ್ಳಾರಿ ಜಿಲ್ಲೆಯ ಸಿರಿಗೇರಿ ಪೊಲೀಸ್ ಠಾಣೆಗಳು ಆಯ್ಕೆಯಾಗಿವೆ ಎಂದು ಗೃಹ ಮಂತ್ರಲಾಯದ ಅಧಿಕಾರಿ ಸೈಯದ್ ಮಹ್ಮದ್ ಹುಸೇನ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕವಿತಾಳ
ದೇಶದ 10ನೇ ಪೊಲೀಸ್ ಠಾಣೆ ಎಂಬ ಹೆಗ್ಗಳಿಕೆ ಕೇಂದ್ರ ಗೃಹ ಇಲಾಖೆ ನೀಡುವ ಅತ್ಯುತ್ತಮ ಪೊಲೀಸ್ ಠಾಣೆ ವಾರ್ಷಿಕ ಪ್ರಶಸ್ತಿಗೆ ದೇಶದ ಪ್ರತಿ ರಾಜ್ಯದಿಂದ ಮೂರು ಪೊಲೀಸ್ ಠಾಣೆಗಳನ್ನು ಆಯ್ಕೆ ಮಾಡಲಾಗುತ್ತದೆ, ರಾಜ್ಯದ 906 ಪೊಲೀಸ್ ಠಾಣೆಗಳ ಪೈಕಿ ರಾಯಚೂರು ಜಿಲ್ಲೆಯ ಕವಿತಾಳ, ಬಳಗಾನೂರು ಮತ್ತು ಬಳ್ಳಾರಿ ಜಿಲ್ಲೆಯ ಸಿರಿಗೇರಿ ಪೊಲೀಸ್ ಠಾಣೆಗಳು ಆಯ್ಕೆಯಾಗಿವೆ ಎಂದು ಗೃಹ ಮಂತ್ರಲಾಯದ ಅಧಿಕಾರಿ ಸೈಯದ್ ಮಹ್ಮದ್ ಹುಸೇನ್ ತಿಳಿಸಿದರು.ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು ಮತ್ತು ಅಂಗಡಿಗಳಿಗೆ ಭೇಟಿ ನೀಡಿ ವ್ಯಾಪಾರ ಸ್ಥರು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದರು.
ಸಿಬ್ಬಂದಿ ಕಾರ್ಯ ಸಂಚಾರಿ ವ್ಯವಸ್ಥೆ, ಅಪರಾಧ ತಡೆ, ಕಟ್ಟಡದ ಸ್ವಚ್ಛತೆ, ಮಹಿಳಾ ಅಪಾರದ ತಡೆ, ಬಾಲ್ಯವಿವಾಹ ತಡೆ ಸೇರಿದಂತೆ ಸಾರ್ವಜನಿಕರ ಸಮಸ್ಯೆಗೆ ಸಿಬ್ಬಂದಿ ಸ್ಪಂದನೆ ಸೇರಿದಂತೆ ವಿವಿಧ ಹಂತದಲ್ಲಿ ಪರಶೀಲಿಸಿ ದೇಶದ 10 ಸ್ಥಾನಕ್ಕೆ ಹೀಗೆ ಠಾಣೆಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಡಿಎಸ್‌ಪಿ ವೆಂಕಟೇಶ್, ಸಿ ಪಿ ಐ ಎಂ ಶಶಿಕಾಂತ್, ಠಾಣೆಯ ಪಿ ಎಸ್ ಐ ಗುರುಚಂದ್ರ ಯಾದವ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.