ಮೆಟ್ರೋ ಕಾಮಗಾರಿಗೆ ಕೇಂದ್ರದಿಂದ ₹20 ಸಾವಿರ ಕೋಟಿ ಅನುದಾನ

| Published : Aug 12 2025, 12:30 AM IST

ಸಾರಾಂಶ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಜತೆಗೆ ಉಳಿದಿದ್ದನ್ನು ಸಾಲ ಸೇರಿದಂತೆ ಇತರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ನರೇಂದ್ರ ಮೋದಿ ಅವರು ವೇದಿಕೆ ಮೇಲೆ ಇದಕ್ಕೆ ಉತ್ತರ ಕೊಟ್ಟು ಸಣ್ಣವರಾಗಲಿಲ್ಲ. ಇದು ರಾಜಕೀಯ ವೇದಿಕೆಯೂ ಅಲ್ಲ. ಸರ್ಕಾರದ ಹಣವಲ್ಲ, ಜನರ ಹಣ ಎಂದಷ್ಟೇ ಹೇಳಿದ್ದಾರೆ. ಪಕ್ಷದ ಸೈನಿಕರಾದ ನಾವೆಲ್ಲ ಇದಕ್ಕೆ ಉತ್ತರ ಕೊಡುತ್ತೇವೆ.

ಹುಬ್ಬಳ್ಳಿ: ಬೆಂಗಳೂರು ಮೆಟ್ರೋಕ್ಕೆ ರಾಜ್ಯ ಸರ್ಕಾರ ಶೇ. ೮೭.೩೭ರಷ್ಟು ಅನುದಾನ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಇದು ಸು‍ಳ್ಳು. ಮೆಟ್ರೋ ಕಾಮಗಾರಿ ವಿವಿಧ ಹಂತದಲ್ಲಿ ಕೇಂದ್ರ ಸರ್ಕಾರ ₹೨೦ ಸಾವಿರ ಕೋಟಿ ನೀಡಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೊಡಿಗೇರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಜತೆಗೆ ಉಳಿದಿದ್ದನ್ನು ಸಾಲ ಸೇರಿದಂತೆ ಇತರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ನರೇಂದ್ರ ಮೋದಿ ಅವರು ವೇದಿಕೆ ಮೇಲೆ ಇದಕ್ಕೆ ಉತ್ತರ ಕೊಟ್ಟು ಸಣ್ಣವರಾಗಲಿಲ್ಲ. ಇದು ರಾಜಕೀಯ ವೇದಿಕೆಯೂ ಅಲ್ಲ. ಸರ್ಕಾರದ ಹಣವಲ್ಲ, ಜನರ ಹಣ ಎಂದಷ್ಟೇ ಹೇಳಿದ್ದಾರೆ. ಪಕ್ಷದ ಸೈನಿಕರಾದ ನಾವೆಲ್ಲ ಇದಕ್ಕೆ ಉತ್ತರ ಕೊಡುತ್ತೇವೆ ಎಂದರು.

ಕರ್ನಾಟಕದ ಬೆಂಗಳೂರು ಮೆಟ್ರೋಗೆ ೨೦೨೧-೨೨ರಲ್ಲಿ ₹೩೬೨೨.೮೬, ೨೦೨೨-೨೩ರಲ್ಲಿ ₹೪೦೪೧.೬೧, ೨೦೨೩-೨೪ರಲ್ಲಿ ₹೩೬೧೭.೧೬, ೨೦೨೪-೨೫ರಲ್ಲಿ ೪೬೧೪.೫೮ ಕೋಟಿ ಅನುದಾನ ಕೊಡಲಾಗಿದೆ ಎಂದು ವಿವರಿಸಿದರು.

ಧರ್ಮಸ್ಥಳದಲ್ಲಿ ಎಸ್ಐಟಿ ನಡೆಸುತ್ತಿರುವ ತನಿಖೆ ಕುರಿತು ಸರ್ಕಾರಕ್ಕೇ ಸ್ಪಷ್ಟತೆ ಇಲ್ಲ. ತನಿಖೆ ಹಿಂದೆ ಯಾರ ಒತ್ತಡವಿದೆ? ಇದಕ್ಕೆ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಸೀಮಾ ಲದ್ವಾ, ವಸಂತ ನಾಡಜೋಶಿ, ಗುರು ಪಾಟೀಲ, ರಾಜು ಕೋರ್ಯಾಣಮಠ ಸುದ್ದಿಗೋಷ್ಠಿಯಲ್ಲಿದ್ದರು.