ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸೌದೆ ಒಲೆಯಲ್ಲಿ ಅಡುಗೆ ಮಾಡಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹೇಳಿ ಸೌದೆ ಒಲೆಗಳನ್ನು ತೆಗೆಸಿ ಗ್ಯಾಸ್ ಸಂಪರ್ಕ ಕಲ್ಪಿಸಿದ್ದ ಕೇಂದ್ರ ಸರ್ಕಾರ ಈಗ ಗ್ಯಾಸ್ ಸಮರ್ಪಕವಾಗಿ ಸರಬರಾಜು ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಟೀಕಿಸಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯುದ್ಧದ ನೆಪ ಹೇಳಿ ಎಲ್‌ಪಿಜಿ ಸರಬರಾಜು ಮಾಡದಿರುವುದರಿಂದ ಅನೇಕ ಕುಟುಂಬಗಳು ಎಲ್‌ಪಿಜಿ ಸಿಗದೆ ಅತಂತ್ರರಾಗಿದ್ದಾರೆ. ಒಂದು ಕಡೆ ಅಡುಗೆ ಅನಿಲ ಸುಗುತ್ತಿಲ್ಲ, ಮತ್ತೊಂದು ಕಡೆ ಆಟೋಗಳಿಗೆ ಎಲ್‌ಪಿಜಿ ಸಿಗದೆ ಚಾಲಕರು ಜೀವನ ನಡೆಸಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಇದಕ್ಕೆ ನೇರ ಕಾರಣ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಿಟ್ಟಿಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಅದು ಬಿಟ್ಟು ಯುದ್ಧದ ನೆಪ ಹೇಳಿ ತಪ್ಪಿಸಿಕೊಳ್ಳುವುದು ಸರಿಯಿಲ್ಲ. ವಾಣಿಜ್ಯ ಸಿಲಿಂಡರ್ ಸಿಗದೆ ನನ್ನ ಒಡೆತನದ ಹೋಟೆಲ್ ಸೇರಿದಂತೆ ಅನೇಕ ಹೋಟೆಲ್‌ಗಳು ಮುಚ್ಚಲಾಗಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲದ ರಾಮಯ್ಯ ಎಂದು ಟೀಕಿಸುವರು. ಆದರೆ ೧೪ ವರ್ಷಗಳಲ್ಲಿ ೨೧೮ ಲಕ್ಷ ಕೋಟಿ ಕೇಂದ್ರ ಸರ್ಕಾರ ಸಾಲ ಮಾಡಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಡಾಲರ್ ಮುಂದೆ ರುಪಾಯಿ ಕುಸಿದಿದೆ. ಹೀಗೆ ಹೋದರೆ ಇಂಡೋನೇಷ್ಯ ಹಾಗೂ ಪಾಕಿಸ್ತಾನಕ್ಕಿಂತಲೂ ನಮ್ಮ ದೇಶದ ಆರ್ಥಿಕ ಸ್ಥಿತಿ ಕೆಡಲಿದೆ. ಇದನ್ನು ಯುವಕರು ಅರ್ಥೈಸಿಕೊಳ್ಳಲದೆ ಇನ್ನೂ ಮೋದಿ ಗುಂಗಿನಲ್ಲೆ ಇದ್ದಾರೆಂದು ವಿಷಾದ ವ್ಯಕ್ತಪಡಿಸಿದರು.

ಈ ವೇಳೆ ಗ್ರೇಡ್ ೨ ತಹಸೀಲ್ದಾರ್ ಗಾಯತ್ರಿ, ನಗರಸಭೆಯ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮುನಿರಾಜು, ಸಮಾಜ ಸೇವಕ ಎ.ಬಾಬು ಇತರರು ಇದ್ದರು.