ವಿದ್ಯುತ್‌ ಇಲಾಖೆಯನ್ನು ಖಾಸಗಿಕರಣ ಮಾಡುವುದು ಕೇವಲ ನೌಕರರ ಮೇಲೆ ಮಾತ್ರ ಪ್ರಭಾವ ಬಿರುವುದಿಲ್ಲ. ಸಮಾಜದ ಮೇಲೂ ಪರಿಣಾಮ ಉಂಟು ಮಾಡುತ್ತದೆ. ಸರ್ಕಾರದಿಂದ ದೊರೆಯುತ್ತಿರುವ ಭಾಗ್ಯಜ್ಯೋತಿ, ಗೃಹಜ್ಯೋತಿ, ಭಾಗ್ಯ ಕುಟೀರದಂತಹ ಯೋಜನೆಗಳು ರದ್ದಾಗುತ್ತದೆ.

ಕನ್ನಡಪ್ರಭ ವಾರ್ತೆ ಬನ್ನೂರು

ವಿದ್ಯುತ್‌ ಇಲಾಖೆಯನ್ನು ಖಾಸಗಿಕರಣಗೊಳಿಸಲು ಮುಂದಾಗಿರುವ ಸರ್ಕಾರದ ನಿಲುವನ್ನು ಖಂಡಿಸಿ ಪಟ್ಟಣದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನೌಕರರ ಸಂಘದ ಒಕ್ಕೂಟದ ವತಿಯಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಚೇರಿಯ ಮುಂಭಾಗ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ಮಾಡಿದರು.

ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ವಿದ್ಯುತ್‌ ಇಲಾಖೆಯನ್ನು ಖಾಸಗಿಕರಣ ಮಾಡುವುದು ಕೇವಲ ನೌಕರರ ಮೇಲೆ ಮಾತ್ರ ಪ್ರಭಾವ ಬಿರುವುದಿಲ್ಲ. ಸಮಾಜದ ಮೇಲೂ ಪರಿಣಾಮ ಉಂಟು ಮಾಡುತ್ತದೆ. ಸರ್ಕಾರದಿಂದ ದೊರೆಯುತ್ತಿರುವ ಭಾಗ್ಯಜ್ಯೋತಿ, ಗೃಹಜ್ಯೋತಿ, ಭಾಗ್ಯ ಕುಟೀರದಂತಹ ಯೋಜನೆಗಳು ರದ್ದಾಗುತ್ತದೆ. ಉದ್ಯೋಗದ ಮೇಲೂ ಹೊಡೆತ ಬೀಳಲಿದ್ದು, ಸರ್ಕಾರಿ ನೌಕರಿ ಪಡೆಯುವಯುವಕ ಕನಸು ಕನಸಾಗಿಯೇ ಉಳಿಯುತ್ತದೆ ಎಂದರು.

ಜೊತೆಗೆ ರೈತರ ಪಂಪ್‌ ಸೆಟ್‌ ಗಳಿಗೆ ನೀಡುತ್ತಿರುವ ವಿದ್ಯುತ್‌ ನ್ನು ಕಡಿತಗೊಳಿಸಿ, ಮೀಟರ್ ಅಳವಡಿಸುವ ವ್ಯವಸ್ಥೆಯನ್ನು ಜಾರಿಗೆ ಮಾಡಿ, ರೈತರ ಮೇಲೂ ವಿದ್ಯುತ್ ಬರೆಯನ್ನು ಎಳೆಯುತ್ತಾರೆ. ಇದರಿಂದ ಯಾವುದೇ ಕಾರಣಕ್ಕೂ ವಿದ್ಯುತ್‌ ಇಲಾಖೆಯನ್ನು ಖಾಸಗಿಕರಣ ಮಾಡದೇ ಸರ್ಕಾರಿ ಸೌಮ್ಯದಲ್ಲಿಯೇ ಮುಂದುವರೆಸಬೇಕೆಂದು ಅವರು ಆಗ್ರಹಿಸಿದರು.

ರೈತ ಮುಖಂಡ ನಾರಾಯಣ್ ಮಾತನಾಡಿ, ಸರ್ಕಾರದ ಸೌಮ್ಯದಲ್ಲಿರುವ ವಿದ್ಯುತ್‌ ಇಲಾಖೆಯ ಸಮಸ್ಯೆಯನ್ನು ಸರ್ಕಾರವೇ ಬಗೆಹರಿಸಲು ಆಗುತ್ತಿಲ್ಲ. ಒಂದು ವೇಳೆ ಖಾಸಗಿಗೆ ವಹಿಸಿದರೆ ಸಮಸ್ಯೆಗಳು ಬೃಹತ್ತಾಗಿ ಬೆಳೆಯುತ್ತದೆಯೇ ವಿನಃ ವಿದ್ಯುತ್ ಸಮಸ್ಯೆಗಳು ಬಗೆಹರಿಯಲ್ಲ, ಸಾರ್ವಜನಿಕರು, ರೈತಾಪಿ ವರ್ಗದವರು ಸೇರಿದಂತೆ ಸಮಸ್ತ ವರ್ಗಕ್ಕೂ ವಿದ್ಯುತ್‌ಇಲಾಖೆಯನ್ನು ಖಾಸಗಿ ಕಂಪನಿಗೆ ವಹಿಸಿದರೆ ಸಮಸ್ಯೆತಪ್ಪಿದಲ್ಲ. ಕೂಡಲೇ ಸರ್ಕಾರಎಚ್ಚೆತ್ತುದಲಿತರ ಪರವಗಿ, ಹಿಂದೂಳಿದ ವರ್ಗದ ಪರವಾಗಿ ಸರ್ಕಾರದ ನಿಲುವನ್ನುಖಂಡಿಸುತ್ತಿರುವುದಾಗಿ ತಿಳಿಸಿದರು.

ಎಇಇ ಹರ್ಷನ್, ಎಇ ಸಂದೇಶ್‌ಗೌಡ, ಜೆಇ ಯೋಗೇಶ್, ಎಇ ಧನುಷ್, ಕಾರ್ಯದರ್ಶಿ ಧನ್‌ರಾಜ್, ಹರ್ಷಿತ್, ಜಯಶೀಲಾ, ಅರುಣ್‌ಕುಮಾರ್, ಗಂಗಾಧರ್, ಪರಸಪ್ಪ, ಶಿವರಾಮೇಗೌಡ, ರಮೇಶ್ ಸೇರಿದಂತೆರೈತಾಪಿ ವರ್ಗದವರು, ವಿದ್ಯುತ್‌ ಗುತ್ತಿಗೆದಾರರು, ಗ್ರಾಮ ವಿದ್ಯುತ್ ಪ್ರತಿನಿಧಿಗಳು ಸೇರಿದಂತೆ ಸಂಘ ಸಂಸ್ಥೆಯ ಮುಖಂಡರು ಇದ್ದರು.