ಸಿಇಟಿ ಫಲಿತಾಂಶ: ದಿಶಾ ಪಿಯು ಕಾಲೇಜು ಸಾಧನೆ

| Published : Jun 03 2024, 12:31 AM IST

ಸಾರಾಂಶ

ಕಲಬುರಗಿ ನಗರದ ದಿಶಾ ಕಾಲೇಜು ವಿದ್ಯಾರ್ಥಿಗಳು ಬಿ.ಎಸ್ಸಿ. ಅಗ್ರಿಯಲ್ಲಿ ರಾಜ್ಯಕ್ಕೆ ೯೪ನೇ ರ್‍ಯಾಂಕ್, ಇಂಜಿನಿಯರಿಂಗ್ ೪೩೮ನೇ ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರದ ದಿಶಾ ಕಾಲೇಜು ವಿದ್ಯಾರ್ಥಿಗಳು ಬಿ.ಎಸ್ಸಿ. ಅಗ್ರಿಯಲ್ಲಿ ರಾಜ್ಯಕ್ಕೆ ೯೪ನೇ ರ್‍ಯಾಂಕ್, ಇಂಜಿನಿಯರಿಂಗ್ ೪೩೮ನೇ ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.೨೦೨೩-೨೦೨೪ನೇ ಸಾಲಿನ ಕರ್ನಾಟಕ ವಿವಿಧ ವೃತ್ತಿಪರ ಕೋರ್ಸ್‌ಗಳಾದ ಇಂಜಿನೀಯರಿಂಗ್, ಬಿ.ಎಸ್ಸಿ ಅಗ್ರಿಕಲ್ಚರ್, ವೆಟರನರಿ ಸೈನ್ಸ್ ಮತ್ತು ಫಾರ್ಮಸಿ ಕೋರ್ಸ್‌ ಪ್ರವೇಶಕ್ಕೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ದಿಶಾ ಕಾಲೇಜಿನ ವಿದ್ಯಾರ್ಥಿಗಳು ಅತುತ್ತಮ ರ್‍ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಕಾಲೇಜು ವಿದ್ಯಾರ್ಥಿಗಳಾದ ರಾಜಕುಮಾರ ಸಿ. (ಅಗ್ರಿಕಲ್ಚರ್-೯೪), ಎಂ.ಬಿಲ್ಲಾಡ್ (ಅಗ್ರಿಕಲ್ಚರ್-೧೧೫), ಇಂಜಿನೀಯರಿಂಗ-೪೩೮, ಪ್ರತೀಕ (ವೆಟರನರಿ-೨೬೧, ರೇವತಿ ಜಿ. (ಅಗ್ರಿಕಲ್ಚರ್-೩೭೬), ಕಾರ್ತಿಕ ಎಸ್. (ಅಗ್ರಿಕಲ್ಚರ್-೩೮೨), ಶರಣಕುಮಾರ ಬಿ. (ಅಗ್ರಿಕಲ್ಚರ್-೯೪೪), ಪ್ರಶಾಂತ ಎಸ್ (ಇಂಜಿನೀಯರಿಂಗ್- ೯೪೬), ಸುಗೂರೇಶ ಮಲ್ಲಪ್ಪಾ (ಅಗ್ರಿಕಲ್ಚರ್-೯೬೨), ಅನ್ನಪೂರ್ಣಾ ಎಸ್. (ಅಗ್ರಿಕಲ್ಚರ್-೧೩೭೫), ಐಶ್ವರ್ಯ ಎಚ್. (ಅಗ್ರಿಕಲ್ಚರ್-೧೩೯೧), ಅಭಿಷೇಕ್ ನಾಗರಾಜ (ಅಗ್ರಿಕಲ್ಚರ್-೧೪೬೧), ಸೂರ್ಯಕಾಂತ ಐ. (ಅಗ್ರಿಕಲ್ಚರ್-೧೬೯೬), ಆದಿತ್ಯ ನಾಗಶೆಟ್ಟಿ, (ಅಗ್ರಿಕಲ್ಚರ್-೧೭೫೮), ಮಹೇಶ ಎಸ್. (ಅಗ್ರಿಕಲ್ಚರ್-೨೧೯೫), ಕೌಸ್ತೂಭ ಎಚ್. (ಇಂಜಿನೀಯರಿಂಗ್-೨೨೫೩), ಸುಹಾಸಿನಿ ಎಸ್. (ಅಗ್ರಿಕಲ್ಚರ್-೨೫೩೬), ದಿನೇಶ (ನ್ಯಾಚುರೋಪಥಿ-ಯೋಗ ವಿಜ್ಞಾನ-೨೭೫೬), ನೇಹಾ ಜೆ. (ಅಗ್ರಿಕಲ್ಚರ್-೨೭೮೧), ಸಾಯಿಕುಮಾರ ಎಸ್. (ಅಗ್ರಿಕಲ್ಚರ್-೩೮೨೩), ಗುರಪ್ಪಾ ಎಸ್. (ಅಗ್ರಿಕಲ್ಚರ್-೫೭೩೨), ರಶ್ಮಿ ಈ. (ಅಗ್ರಿಕಲ್ಚರ್-೫೯೦೮), ಕೃತಿ ಎ. (ಇಂಜಿನೀಯರಿಂಗ್-೬೪೪೭), ಶುಭಂ ಪಾಟೀಲ್ (ಇಂಜಿನೀಯರಿಂಗ್-೬೮೧೧), ರಾಜಶ್ರೀ ಪಿ. (ಅಗ್ರಿಕಲ್ಚರ್-೬೯೮೪), ಮಲ್ಲಿಕಾರ್ಜುನ ಬಿ. (ಇಂಜಿನೀಯರಿಂಗ್-೭೨೭೪), ಅಶ್ವಿನಿ ಎಸ್. (ಅಗ್ರಿಕಲ್ಚರ್-೭೬೩೨), ರಾಜಕುಮಾರ ಎಸ್. (ಅಗ್ರಿಕಲ್ಚರ್-೭೮೩೪), ಸಿಂಧು ಎಂ. (ಅಗ್ರಿಕಲ್ಚರ್-೮೧೪೪), ಭವಾನಿ ಆರ್. (ಅಗ್ರಿಕಲ್ಚರ್-೯೪೦೩), ಕಮಲಾಕ್ಷಿ ಎಸ್. (ವೆಟರ್‌ನರಿ-೯೪೮೨), ದರ್ಶನ ವಿ. (ಅಗ್ರಿಕಲ್ಚರ್-೮೧೪೪) ಅಂಕದೊಂದಿಗೆ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಚೇರಮನ್‌ ಶಿವಾನಂದ ಖಜುರ್ಗಿ, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತ ಪಡಿಸಿ, ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ.