ಮುಖ್ಯಾಧಿಕಾರಿ ವಿರುದ್ಧ ಕೆರಳಿದ ಅಧ್ಯಕ್ಷೆ, ಸದಸ್ಯರು

| Published : Jan 28 2025, 12:47 AM IST

ಮುಖ್ಯಾಧಿಕಾರಿ ವಿರುದ್ಧ ಕೆರಳಿದ ಅಧ್ಯಕ್ಷೆ, ಸದಸ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ ಜನರು ಮೂಲಸೌಲಭ್ಯಗಳ ಕೊರತೆಯಿಂದ ಕಂಗಾಲಾಗಿ ಹೋಗಿದ್ದಾರೆ. ಕುಡಿಯುವ ನೀರಿನ ಅಭಾವ, ಸ್ವಚ್ಛತೆ, ಉತಾರ ಪೂರೈಕೆಯಲ್ಲಿ ವಿಳಂಬ, ಆಶ್ರಯ ಮನೆಗಳ ಜಿಪಿಎಸ್, ರಸ್ತೆ ಸಂಪತ್ತಿನ ದುಸ್ಥಿತಿ, ಮತ್ತು ಕಸದ ನಿರ್ವಹಣೆಯಲ್ಲಿ ಉಂಟಾಗಿರುವ ಲೋಪಗಳು ಬಗ್ಗೆ ಜನರು ನಮ್ಮನ್ನು ಪ್ರಶ್ನೆ ಮಾಡುತಿದ್ದಾರೆ. ನಾವು ಏನು ಉತ್ತರ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ವಿರುದ್ದ ಅಧ್ಯಕ್ಷೆ ಹಾಗೂ ಸದಸ್ಯರೇ ಕೆರಳಿ ಕೆಂಡವಾದ ಘಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ನಾಲತವಾಡ

ಜನರು ಮೂಲಸೌಲಭ್ಯಗಳ ಕೊರತೆಯಿಂದ ಕಂಗಾಲಾಗಿ ಹೋಗಿದ್ದಾರೆ. ಕುಡಿಯುವ ನೀರಿನ ಅಭಾವ, ಸ್ವಚ್ಛತೆ, ಉತಾರ ಪೂರೈಕೆಯಲ್ಲಿ ವಿಳಂಬ, ಆಶ್ರಯ ಮನೆಗಳ ಜಿಪಿಎಸ್, ರಸ್ತೆ ಸಂಪತ್ತಿನ ದುಸ್ಥಿತಿ, ಮತ್ತು ಕಸದ ನಿರ್ವಹಣೆಯಲ್ಲಿ ಉಂಟಾಗಿರುವ ಲೋಪಗಳು ಬಗ್ಗೆ ಜನರು ನಮ್ಮನ್ನು ಪ್ರಶ್ನೆ ಮಾಡುತಿದ್ದಾರೆ. ನಾವು ಏನು ಉತ್ತರ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ವಿರುದ್ದ ಅಧ್ಯಕ್ಷೆ ಹಾಗೂ ಸದಸ್ಯರೇ ಕೆರಳಿ ಕೆಂಡವಾದ ಘಟನೆ ನಡೆಯಿತು.

ಗಣರಾಜ್ಯೋತ್ಸವದ ಧ್ವಜಾರೋಹಣದ ಬಳಿಕ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ದ ಅಸಮಾಧಾನ ಹೊರಹಾಕಿದ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಪ.ಪಂ ಅಧಿಕಾರಿಗಳು ಎಲ್ಲವುಗಳ ಬಗ್ಗೆ ಏಕ ಪಕ್ಷಿಯವಾಗಿ ನಿರ್ಣಯ ತೆಗೆದುಕೊಳ್ಳುವುದಾದರೆ ನಾವು ಜನರಿಗೆ ಏನು ಹೇಳಬೇಕು. ಪಟ್ಟಣದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದ್ದು, ಫಾಗಿಂಗ್ ಮಾಡುವಂತೆ ತಿಳಿಸಿದ್ದರೂ ಮಾಡಿಲ್ಲ. ಯಂತ್ರ ಕೆಟ್ಟಿದೆ ಎಂದು ಹೇಳುತ್ತ 2 ತಿಂಗಳಾಯಿತು, ಅದನ್ನು ದುರಸ್ತಿ ಯಾಕೆ ಮಾಡಿಸಿಲ್ಲ ಎಂದು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.ನಾವು ಚುನಾಯಿತರಾಗಿ ಎರಡು ವರ್ಷಗಳಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ನಿಗದಿಗಾಗಿಯೇ ಒಂದು ವರ್ಷ ಕಳೆದುಕೊಂಡಿದ್ದೇವೆ, ಅಧಿಕಾರಿಗಳು ಜನರ ಸಮಸ್ಯ ಪರಿಹರಿಸುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಸಾರ್ವಜನಿಕರು ನಮ್ಮನ್ನು ಪ್ರಶ್ನೆ ಮಾಡುತಿದ್ದಾರೆ. ನಮ್ಮ ಪರಿಸ್ಥಿತಿ ಹೇಗಾಗಿದೆ ಅಂದರೆ ಕೇವಲ ಸಭೆ ಸಮಾರಂಭದಲ್ಲಿ ಉಪಹಾರಕ್ಕೆ ಮಾತ್ರ ಸೀಮಿತವಾದಂತಾಗಿದೆ ಎಂದು ಅಳಿಲು ತೋಡಿಕೊಂಡರು.ಇನ್ನು, ಪ.ಪಂ ಮುಖ್ಯಾಧಿಕಾರಿ ಸಮೇತ ಸಿಬ್ಬಂದಿ ಕೂಡ ನಮ್ಮ ಮಾತು ಕೇಳುತ್ತಿಲ್ಲ. ಇನ್ನು ಜನಸಾಮಾನ್ಯರ ಮಾತು ಏನು ಕೇಳುತ್ತಿರಿ. ಎಲ್ಲಾ ಸಿಬ್ಬಂದಿಗಳ ಹಾಜರಿ ಪುಸ್ತಕ ಪ್ರಸ್ತುತ ಪಡಿಸಿ ಎಂದು ಅಧ್ಯಕ್ಷೆ ವಿಜಯಲಕ್ಷ್ಮೀ ಇಲಕಲ್‌ ಮುಖ್ಯಾಧಿಕಾರಿಗೆ ಹೇಳಿದರು. ಹಾಜರಿ ಪುಸ್ತಕದಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಿರಿಯ ಆರೋಗ್ಯ ನಿರೀಕ್ಷಕ ಸತತ ಗೈರಾಗಿದ್ದರು ಅವನ ವಿರುದ್ದ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಮುಖ್ಯಾಧಿಕಾರಿಗಳಿಗೆ ಪ್ರಶ್ನಿಸಿದರು. ಆಗ ಮುಖ್ಯಾಧಿಕಾರಿ ಈಗಾಗಲೆ ನೋಟಿಸ್ ನೀಡಿದ್ದಾಗಿ ತಿಳಿಸಿದ್ದು, ಆಗ ನೋಟಿಸ್‌ ಪ್ರತಿ ನೀಡುವಂತೆ ಕೇಳಿದ್ದರೂ ಆತ ಹಾಜರುಪಡಿಸಲಿಲ್ಲ. ಬೇಜವಾಬ್ದಾರಿ ಸಿಬ್ಬಂದಿ ವಿರುದ್ದ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಅಧ್ಯಕ್ಷೆ ಎಚ್ಚರಿಕೆಯನ್ನು ನೀಡಿದರು.ಇನ್ನು, ಪಟ್ಟಣದಲ್ಲಿ ಎಸ್.ಎಫ್.ಸಿ ವಿಷೇಶ ಅನುದಾನದಲ್ಲಿ ನಿರ್ಮಾಣ ಮಾಡುತ್ತಿರುವ ಸಿ.ಸಿ.ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ್ದಾಗಿದ್ದು, ಮುಖ್ಯಾಧಿಕಾರಿ ಕಾಮಗಾರಿ ಪ್ರಾರಂಭ ಮಾಡುವಾಗ ನಮ್ಮ ಗಮನಕ್ಕೆ ತರುವದಿಲ್ಲ. ಯಾವ ವಾರ್ಡಿನಲ್ಲಿ ಏನು ಕೆಲಸ ಮಾಡುತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಕಾಮಗಾರಿ ಸಂದರ್ಭದಲ್ಲಿ ಜೆಇ ಕೂಡ ಇರುವದಿಲ್ಲ, ಸಂಪೂರ್ಣ ಕಳಪೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನ ಬಿಲ್‌ ಮಾಡದಂತೆ ಸದಸ್ಯರು ಮುಖ್ಯಾಧಿಕಾರಿ ಮತ್ತು ಅಧ್ಯಕ್ಷೆಗೆ ತಿಳಿಸಿದರು.ಕೋಟ್:1

ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಹೆಚ್ಚುತ್ತಿವೆ. ಅಭಿವೃದ್ಧಿ ಪಥದತ್ತ ಪಟ್ಟಣವನ್ನು ತೆಗೆದುಕೊಂಡು ಹೋಗಬೇಕೆಂಬ ಆಸೆಯಿಂದ ಅಧ್ಯಕ್ಷೆಯಾಗಿದ್ದೆ. ನನಗೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಸಾಥ ನೀಡುತಿಲ್ಲ, ಮೂಲಭೂತ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿ ಎಂದು ಎಚ್ಚರಿಕೆ ನೀಡಿದರು ಕೂಡ ಪ್ರಯೋಜನವಾಗುತ್ತಿಲ್ಲ. ಕೇವಲ ಅವರ ಖರ್ಚುಗಳನ್ನು ಮಾತ್ರ ತೆಗೆದುಕೊಂಡು ಅಧಿಕಾರ ನಡೆಸುತಿದ್ದಾರೆ. ಈ ಬಗ್ಗೆ ಶಾಸಕರಿಗೆ ದೂರು ನೀಡಲು ತಿರ್ಮಾನಿಸಿದ್ದೇವೆ.ವಿಜಯಲಲಕ್ಷ್ಮೀ ಇಲಕಲ್,ಪ.ಪಂ ಅಧ್ಯಕ್ಷೆಕೋಟ:2

ಸದಸ್ಯರು ಕೇವಲ ಉಪಹಾರಕ್ಕೆ ಮಾತ್ರ ಸೀಮಿತವಾಗಿದಂತಾಗಿದೆ, ಸಾಮಾನ್ಯ ಸಭೆಯಲ್ಲಿ ಚರ್ಚೆಯಾದ ಸಮಸ್ಯೆಗಳನ್ನು ಇಲ್ಲಿಯವರೆಗೆ ನಿವಾರಣೆಯಾಗಿಲ್ಲ, ಜನ ಸಾಮಾನ್ಯರಿಗೆ ಏನು ಉತ್ತರ ನೀಡಬೇಕು. ಇದೇ ರೀತಿ ಮುಂದುವರೆದರೆ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುತ್ತೇವೆ.

ಡಾ.ಎಸ್.ಬಿ.ಗಂಗನಗೌಡರ, 13ನೇ ವಾರ್ಡ ಸದಸ್ಯ