ಕುಮಾರಸ್ವಾಮಿಗೆ ಆರೋಪ ಮಾಡುವ ಚಾಳಿ: ರೆಡ್ಡಿ

| Published : May 22 2024, 12:54 AM IST

ಸಾರಾಂಶ

ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಕೇಂದ್ರ ಸರ್ಕಾರ ಫೋನ್ ಟ್ಯಾಪಿಂಗ್ ಮಾಡುತ್ತಿದೆ ಅಂತ ಆರೋಪ ಮಾಡಿದ್ದರು. ಈಗ ನಾವು ಅಧಿಕಾರದಲ್ಲಿದ್ದೇವೆ ನಮ್ಮ ಮೇಲೂ ಅರೋಪ ಮಾಡುತ್ತಿದ್ದಾರೆ. ಅವರು ಆರೋಪ ಮಾಡುವುದನ್ನೇ ಚಾಳಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.

ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಕೇಂದ್ರ ಸರ್ಕಾರ ಫೋನ್ ಟ್ಯಾಪಿಂಗ್ ಮಾಡುತ್ತಿದೆ ಅಂತ ಆರೋಪ ಮಾಡಿದ್ದರು. ಈಗ ನಾವು ಅಧಿಕಾರದಲ್ಲಿದ್ದೇವೆ ನಮ್ಮ ಮೇಲೂ ಅರೋಪ ಮಾಡುತ್ತಿದ್ದಾರೆ. ಅವರು ಆರೋಪ ಮಾಡುವುದನ್ನೇ ಚಾಳಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಫೋನ್ ಟ್ಯಾಪಿಂಗ್ ಮಾಡುವ ಅವಶ್ಯಕತೆ ಇಲ್ಲ. ಕುಮಾರಸ್ವಾಮಿಯವರು ಸುಳ್ಳು ಆರೋಪ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.

ಸಂಸದ ಪ್ರಜ್ವಲ್ ರೇವಣ್ಣ ಕೇಸ್ ವಿಚಾರದಲ್ಲಿ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರಕ್ಕೂ ಪ್ರಜ್ವಲ್ ರೇವಣ್ಣ ಕೇಸ್ ಗೂ ಯಾವುದೇ ಸಂಬಂಧ ಇಲ್ಲ. ಅದನ್ನು ಯಾರು ರೆಕಾರ್ಡ್ ಮಾಡಿ ಇಟ್ಟುಕೊಳ್ಳಿ ಅಂತ ಹೇಳಿದ್ದರು. ಯಾರು ತಪ್ಪಿತಸ್ಥರು ಅಂತ ತನಿಖೆಯಲ್ಲಿ ಗೊತ್ತಾಗುತ್ತೆ. ಆದರೆ ರೆಕಾರ್ಡ್ ಏಕೆ ಮಾಡಿಕೊಳ್ಳಬೇಕಾಗಿತ್ತು. ಅವರು ರೆಕಾರ್ಡ್ ಮಾಡಿಕೊಂಡಿದ್ದರಿಂದ ರಾಜ್ಯಕ್ಕೂ ಕೆಟ್ಟ ಹೆಸರು ಬಂದಿದೆ ಎಂದು ಹೇಳಿದರು.

ವಿರೋಧ ಪಕ್ಷದವರಿಗೆ ಕಣ್ಣು ಕಾಣಿಸಲ್ಲ, ಕಿವೀನೂ ಕೆಳಿಸಲ್ಲ. ಅವರಿಗೆ ಬಾಯಿ ಇದೆ. ಹೀಗಾಗಿ ಸುಮ್ನೆ ಮಾತನಾಡುತ್ತಾರೆ ಅಷ್ಟೇ. ಬಿಜೆಪಿ ಅಧಿಕಾರದಲ್ಲಿದ್ದಾಗ ಸ್ವಜನ ಪಕ್ಷಪಾತ ಇತ್ತು. ಎಲ್ಲಾ ನೇಮಕಾತಿಯಲ್ಲೂ ಜನರಿಗೆ ಮೋಸ ಮಾಡಿದರು.

ಅಕ್ರಮ, ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು. ಅವರ ಕಾಲದಲ್ಲಿ ಲಾ ಅಂಡ್ ಆರ್ಡರ್ ಕೂಡಾ ಸರಿ ಇರಲಿಲ್ಲ. ಪೊಲೀಸ್ ನೈತಿಕಗಿರಿಯನ್ನು ಬಿಜೆಪಿ ಅವರೆ ಮಾಡುತ್ತಿದ್ರು. ನಾಲ್ಕು ವರ್ಷ ಹಲಾಲ್, ಹಿಜಾಬ್ ಅಂದುಕೊಂಡೆ ಕಾಲ ಕಳೆದರು.

ನಾವು ನುಡಿದಂತೆ ನಡೆದಿದ್ದೇವೆ. ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ನಮ್ಮ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಬಿಜೆಪಿ‌ ಅವರಿಗೆ ಹೇಳಲು ಏನೂ ಇಲ್ಲ. ಹಾಗಾಗಿ ಅವರ ಹೇಳಿಕೆಗಳಿಗೆ ಮಹತ್ವ ಕೊಡಬೇಕಾಗಿಲ್ಲ ಎಂದು ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.

21ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ.