ಚಾಮರಾಜನಗರ ಜಿಲ್ಲೆಯು ಸದಾ ಅರಳುತ್ತಿರುವ ಸೀಮೆ: ಚಿಂತಕ ಡಾ.ಎಸ್.ತುಕಾರಾಂ

| Published : Nov 24 2024, 01:50 AM IST

ಸಾರಾಂಶ

ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತ ಮಹೇಶ್ ಹರವೆ ಅವರು ಆತ್ಮಶೋಧನೆ ಜತೆಗೆ ಇನ್ನೊಂದು ಆತ್ಮದ ಜೊತೆ ಆಪ್ತವಾಗಿ ಮಾತನಾಡುವ ಯೋಗ್ಯತೆ ಇರುವ ಒಬ್ಬ ಯೋಗಿ ಎಂದು ಬೆಂಗಳೂರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸಂಸ್ಕೃತ ಚಿಂತಕ, ಸಲಹೆಗಾರ ಎಸ್.ತುಕಾರಾಂ ಅಭಿಪ್ರಾಯಪಟ್ಟರು. ಚಾಮರಾಜನಗರದಲ್ಲಿ ಮಹೇಶ್‌ ಹರಿವೆ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸ್ಥಳೀಯ ಪರಂಪರೆಗೆ ಹೆಚ್ಚು ಒಲಿಯುತ್ತಾರೆ ಮಹೇಶ್ । ಮಹೇಶ್‌ ಹರವೆಗೆ ಅಭಿನಂದನಾ ಸಮಾರಂಭ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತ ಮಹೇಶ್ ಹರವೆ ಅವರು ಆತ್ಮಶೋಧನೆ ಜತೆಗೆ ಇನ್ನೊಂದು ಆತ್ಮದ ಜೊತೆ ಆಪ್ತವಾಗಿ ಮಾತನಾಡುವ ಯೋಗ್ಯತೆ ಇರುವ ಒಬ್ಬ ಯೋಗಿ ಎಂದು ಬೆಂಗಳೂರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸಂಸ್ಕೃತ ಚಿಂತಕ, ಸಲಹೆಗಾರ ಎಸ್.ತುಕಾರಾಂ ಅಭಿಪ್ರಾಯಪಟ್ಟರು

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಚೇತನಕಲಾವಾಹಿನಿ, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಜಿಲ್ಲಾ ಪದವಿಪೂರ್ವ ಕನ್ನಡ ಉಪನ್ಯಾಸಕರ ಸಂಘ, ಪದವಿ ಶಿಕ್ಷಣ ಇಲಾಖೆ ಜಂಟಿಯಾಗಿ ಆಯೋಜಿಸಿದ ಮಹೇಶ್ ಹರವೆ ಅವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮಹೇಶ್ ಹರವೆ ಅವರಿಗೆ ಸಾಹಿತ್ಯಶ್ರೀ ಪ್ರಶಸ್ತಿ ಒಲಿದು ಬಂದಿದೆ. ಕನ್ನಡನಾಡಿನಲ್ಲಿ ಜಿಲ್ಲೆಗೆ ಒಂದು ವಿಶೇಷತೆ ಇದೆ. ಈ ಜಿಲ್ಲೆಯನ್ನು ಜಾನಪದ ನಾಡೋಜ ಸೀಮೆ ಎಂದು ಕರೆಯಬೇಕೆನ್ನುಸುತ್ತದೆ. ಈ ಜಾನಪದ ಸೀಮೆಯಿಂದ ಕರ್ನಾಟಕ ನೆಲೆಯೂ ಕಲಿಯಬೇಕು. ಭಾರತವೂ ಕಲಿಯಬೇಕಿದೆ ಎಂದು ಹೇಳಿದರು.

ಕನ್ನಡ ಭೌತಿಕ ವಲಯದಲ್ಲಿ ಮಹೇಶ್‌ ಹರವೆ ಅವರ ಆಸಕ್ತಿಗಳು ‌ ವಿಶಿಷ್ಟವಾದವು. ಚಾಮರಾಜನಗರ ಸೀಮೆ ಸದಾ ಅರಳುತ್ತಲೆ ಇರುವ ಸೀಮೆ. ಮಹೇಶ್ ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಕವಿ ಸಮೃದ್ಧಿ, ಸಾಮಾಜಿಕ ವಾತ್ಸಲ್ಯಇದೆ. ಸಾಂಸ್ಕೃತಿಕ ಸಂಯಮ, ಸಮಾನತೆ ಇದೆ. ಅವರ ಸೃಜನಶೀಲ ಮನಸ್ಸು. ಸ್ಥಳೀಯ ಪರಂಪರೆಗೆ ಹೆಚ್ಚು ಒಲಿಯುತ್ತಾರೆ. ಬರೆಯುವುದು, ಬೆರೆಯುವುದು. ಬರೆದು ಮಾತನಾಡುವುದು. ಬರೆದವವರಿಗೆ ಬರೆಯುವಂತೆ ಪ್ರೇರೆಪಿಸುವುದು ಇವರ ವಿಶೇಷತೆಯಾಗಿದೆ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಅಧ್ಯಾಪಕಿ ಡಾ. ಟಿ.ಪದ್ಮಶ್ರೀ ಮಾತನಾಡಿ, ನಾಡಿನ ಎಲ್ಲ ಜನಪರ ಚಳವಳಿ ಜೊತೆಗೆ ಒಡನಾಟವನ್ನಿಟ್ಟಿಕೊಂಡಿರುವಂತಹ ಮಹೇಶ್ ಅವರಿಗೆ ಅ ಚಳವಳಿಯ ಮೇಲೆ ಅಷ್ಟೆ ಪ್ರೀತಿ, ಕಾಳಜಿ ಇತ್ತು. ಅವರೊಂದು ಅಸಕ್ತಿ ಕ್ಷೇತ್ರ ಎಂದರೆ ವೈಚಾರಿಕವಾದ, ವೈಜ್ಞಾನಿಕವಾದ ಶ್ರಮನ ಪರಂಪರೆ, ಜನಪದ ಪರಂಪರೆ ಮೇಲೆ ಹೆಚ್ಚಿನ ಅಶಕ್ತಿ ಅದರ ಮೇಲೆ ಮಾತನಾಡುವುದು, ಬರೆಯುವುದು. ಅದರ ಬಗ್ಗೆ ಚರ್ಚೆ ಮಾಡುವಂತಹದ್ದು ಎಲ್ಲೂ ಇಲ್ಲದ ಪ್ರೀತಿ ಎಂದರು.

ಬುದ್ಧ ಗುರುವಿನ ತತ್ವದಡಿಯಲ್ಲಿ ಪ್ರಭಾವಿತರಾಗಿದ್ದ ಅವರಲ್ಲಿ ಕಾಡುಹರಟೆಗೆ ಜಾಗ ಇರಲಿಲ್ಲ. ಜ್ಞಾನ ಮಾರ್ಗವನ್ನು ಸಂಪಾದಿಸಿದ್ದಕ್ಕಾಗಿ ಸನ್ಮಾನಿಸುತ್ತಿದ್ದೇವೆ. ತುಂಬಾ ಸಂಕೋಚದ, ಸರಳವಾದ ಯಾವಾಗಲೂ ತೆರೆಯ ಹಿಂದೆ ನಿಲ್ಲಲು ಬಯಸುವಂತಹ ವ್ಯಕ್ತಿತ್ವ ಮಹೇಶ ಅವರದ್ದು, ಅವರು ಜ್ಞಾನಮಾರ್ಗ ಅನುಸರಿಸಿ ಪಡೆದ ದೊಡ್ಡ ವಿದ್ವತ್. ಅದು ನಿಜವಾಗಿಯೂ ಅವರಿಗೆ ಸಲ್ಲುತ್ತಿರುವ ಅಭಿನಂದನೆ ಅವರ ಘನತೆಗೆ ಸಲ್ಲಲೇಬೇಕಾದ ಪ್ರಶಸ್ತಿ ಇದಾಗಿದೆ ಎಂದು ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಮಂಜುನಾಥಪ್ರಸನ್ನ ಮಾತನಾಡಿ, ಮಹೇಶ್ ಹರವೆ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯಶ್ರೀ ಪ್ರಶಸ್ತಿ ಲಬಿಸುವ ಮೂಲಕ ಅವರಿಗೆ ಗೌರವ ಸಿಕ್ಕಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಅವರಿಗೆ ಪ್ರಶಸ್ತಿಕೊಟ್ಟು ಸಾಹಿತ್ಯ ಅಕಾಡೆಮಿಗೂ ಒಂದು ಗೌರವ ಬಂದಿದೆ ಎಂದು ಭಾವಿಸಿದ್ದೇನೆ ಎಂದರು.

ಅಭಿನಂದನೆ ಸ್ವೀಕರಿಸಿದ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರಾದ ಮಹೇಶ್ ಹರವೆ ಮಾತನಾಡಿ, ಚೇತನ ಕಲಾವಾಹಿನಿ, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಜಿಲ್ಲಾ ಪದವಿಪೂರ್ವ ಕನ್ನಡ ಉಪನ್ಯಾಸಕ ಸಂಘ, ಪದವಿಪೂರ್ವ ಶಿಕ್ಷಣ ಇಲಾಖೆ ತಮ್ಮ ಅಭಿನಂದಿಸಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ನನಗೆ ನೀಡಿರುವ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಸದಾ ನನ್ನ ಏಳಿಗೆಗೆ ಬಯಸಿದ ನನ್ನ ಊರು. ಸ್ನೇಹಿತರಿಗೆ ಜಿಲ್ಲೆಗೆ ಸಮರ್ಪಿಸುತ್ತೇನೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ಮುನಿರಾಜು, ಪ್ರಾಂಶುಪಾಲ ಸಿ.ಲಿಂಗಯ್ಯ ಮಾತನಾಡಿದರು.

ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸೋಮಣ್ಣ, ಖಜಾಂಚಿ ಸ್ವಾಮಿ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಮಹದೇವಪ್ರಭು, ಕಾರ್ಯದರ್ಶಿ ಎಂ.ಕೃಷ್ಣಮೂರ್ತಿ, ಕಲಾವಾಹಿನಿ ಅಧ್ಯಕ್ಷ ರಾಜಪ್ಪ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಜೆ.ಬಿ.ರಾಜೇಶ್, ಇತರರು ಹಾಜರಿದ್ದರು.