ಕೇರಳಾದ ಪಟ್ಟಣಂತಿಟ್ಟದಲ್ಲಿ ನಡೆದ ಹೈದರಾಬಾದ್ ವಲಯದ ಸುಬ್ರತೋ ಕಪ್ ಪ್ರಾದೇಶಿಕ ಫುಟ್ಬಾಲ್ ಪಂದ್ಯಾವಳಿಯಲ್ಲಿ ಚಾಮರಾಜನಗರ ಜೆಎನ್‌ವಿ (ಜವಾಹರ್ ನವೋದಯ ವಿದ್ಯಾಲಯ) ತಂಡ ಕಾಸರಗೋಡು ಜೆಎನ್‌ವಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕೇರಳದಲ್ಲಿ ನಡೆದ ಹೈದರಾಬಾದ್ ವಲಯದಲ್ಲಿ ಕಾಸರಗೋಡು ತಂಡವನ್ನು ಮಣಿಸಿ ರಾಷ್ಟ್ರೀಯ ಸುತ್ತಿಗೆ ಆಯ್ಕೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಕೇರಳಾದ ಪಟ್ಟಣಂತಿಟ್ಟದಲ್ಲಿ ನಡೆದ ಹೈದರಾಬಾದ್ ವಲಯದ ಸುಬ್ರತೋ ಕಪ್ ಪ್ರಾದೇಶಿಕ ಫುಟ್ಬಾಲ್ ಪಂದ್ಯಾವಳಿಯಲ್ಲಿ ಚಾಮರಾಜನಗರ ಜೆಎನ್‌ವಿ (ಜವಾಹರ್ ನವೋದಯ ವಿದ್ಯಾಲಯ) ತಂಡ ಕಾಸರಗೋಡು ಜೆಎನ್‌ವಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಹೈದರಾಬಾದ್ ವಲಯದ ಸುಬ್ರತೋ ಕಪ್ ಪ್ರಾದೇಶಿಕ ಫುಟ್ಬಾಲ್ ಪಂದ್ಯಾವಳಿಯಲ್ಲಿ ಚಾಮರಾಜನಗರ ಜೆಎನ್‌ವಿ ತಂಡ ಮೊದಲ ಪಂದ್ಯದಲ್ಲಿ ತ್ರಿಶೂರ್ ತಂಡದ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದರೆ.
ಎರಡನೇ ಪಂದ್ಯದಲ್ಲಿ ಕೊಲ್ಲಂ ತಂಡದ ವಿರುದ್ಧ 0-0 ಗೋಲುಗಳಿಂದ ಡ್ರಾ ಮಾಡಿಕೊಂಡು ಸೆಮಿಫೈನಲ್ ತಲುಪಿತು. ಬಳಿಕ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಎರ್ನಾಕುಲಂ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.ಫೈನಲ್ ಪಂದ್ಯದಲ್ಲಿ ಕಾಸರಗೋಡು ಜೆಎನ್‌ವಿ ತಂಡದ ವಿರುದ್ಧದ ಹೋರಾಡಿದ ಚಾಮರಾಜನಗರ ಜೆಎನ್‌ವಿ ತಂಡ ಹೋರಾಟ ನಡೆಸಿ 0-0 ಗೋಲುಗಳ ಮೂಲಕ ಸಮಬಲ ಸಾಧಿಸಿದವು. ಬಳಿಕ ನೀಡಲಾದ ಹೆಚ್ಚುವರಿ ಸಮಯದಲ್ಲೂ ಪಂದ್ಯ ಟೈ ಆಗಿ ಕೊನೆಗೊಂಡಿತು. ಕೊನೆಗೆ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಚಾಮರಾಜನಗರ ಜೆಎನ್‌ವಿ ತಂಡವು ಕಾಸರಗೋಡು ಜೆಎನ್‌ವಿ ತಂಡವನ್ನು 5-4 ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.ಚಾಮರಾಜನಗರ ಜೆಎನ್‌ವಿ ತಂಡ ಪ್ರಾದೇಶಿಕ ಮಟ್ಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಜು 22, 23 ಮತ್ತು 24ರಂದು ಜಾರ್ಖಂಡ್‌ನ ದುಮ್ಕಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ (ನ್ಯಾಷನಲ್ಸ್) ಪಂದ್ಯಾವಳಿಗೆ ಪ್ರವೇಶ ಪಡೆಯಿತು.
ರಾಷ್ಟ್ರಮಟ್ಟದ ಪಂದ್ಯಾವಳಿಗೆ ಪ್ರವೇಶ ಪಡೆದಿರುವ ಚಾಮರಾಜನಗರ ಜೆಎನ್‌ವಿ ತಂಡ ಆಟಗಾರರನ್ನು ವಿದ್ಯಾಲಯದ ಪ್ರಭಾರ ಪ್ರಾಂಶುಪಾಲ ಎಸ್.ಎ. ರೆಹಮಾನ್, ತರಬೇತುದಾರ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಎಂ. ಕೌಶಿಕ್, ತಂಡದ ವ್ಯವಸ್ಥಾಪಕ ಹರಿ ರಾಘವನ್ ಅಭಿನಂದಿಸಿದ್ದಾರೆ.--15ಸಿಎಚ್ಎನ್54
ಕೇರಳದ ಪಟ್ಟಣತಿಟ್ಟದಲ್ಲಿ ನಡೆದ ಸುಬ್ರತೋ ಕಪ್‌ನಲ್ಲಿ ಜಯ ಸಾಧಿಸಿದ ಚಾಮರಾಜನಗರ ಜೆಎನ್‌ವಿ ತಂಡ.