ಶ್ರೀ ಮಂಜುನಾಥಸ್ವಾಮಿ ಹಾಗೂ ನವನಾಗನಾಥಸ್ವಾಮಿ ದೇವಾಲಯದಲ್ಲಿ ಚಂಪಾ ಷಷ್ಠಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸಮೀಪದ ಸಿದ್ಧಲಿಂಗರಪುರದ ಅರಿಶಿನಗುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥಸ್ವಾಮಿ ಹಾಗೂ ನವನಾಗನಾಥಸ್ವಾಮಿ ದೇವಾಲಯದಲ್ಲಿ ಚಂಪಾ ಷಷ್ಠಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಗ್ಗೆ ಗಣಪತಿಹೋಮದೊಂದಿಗೆ ಪೂಜೆಗಳು ಆರಂಭವಾಯಿತು. ನಂತರ ಶ್ರೀ ಮಂಜುನಾಥಸ್ವಾಮಿ ದೇವಾಲಯದಲ್ಲಿ ರುದ್ರಾಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ ನೆರವೇರಿಸಲಾಯಿತು. ಕ್ಷೇತ್ರದಲ್ಲಿರುವ ನವನಾಗನಾಥ ದೇವಾಲಯದಲ್ಲಿ ನಾಗದೇವರಿಗೆ ಜಲಾಭಿಷೇಕ, ಎಳನೀರು ಅಭಿಷೇಕ, ಹಾಲಿನ ಅಭಿಷೇಕ, ಅರಿಶಿಣ ಅಭಿಷೇಕ, ತಂಬಿಲ ಸೇವೆಗಳನ್ನು ಕ್ಷೇತ್ರದ ಪ್ರಧಾನ ಅರ್ಚಕ ಜಗದೀಶ ಉಡುಪ ಅವರು ನೆರವೇರಿಸಿದರು. ನಂತರ ನಾಗದೇವರಿಗೆ ಬೆಳ್ಳಿಯ ಬಿಂಬವನ್ನು ಭಕ್ತಾದಿಗಳು ಸಮರ್ಪಿಸಿದರು.ಮಹಾಮಂಗಳಾರತಿಯ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭ ಅರ್ಚಕ ವಾದಿರಾಜ್ ಭಟ್, ದೇವಾಲಯ ಸಮಿತಿ ಅಧ್ಯಕ್ಷ ಮೋಹನ್ , ಮಣಿಸ್ವಾಮಿ ಸಹಕರಿಸಿದರು. ದೇವಾಲಯ ಸಮಿತಿಯ ಪದಾಧಿಕಾರಿಗಳು ಪೂಜಾ ಕಾರ್ಯದಲ್ಲಿ ನೆರವಾದರು.