ಪಾವಗಡ: ಚಂಪಕ ಷಷ್ಟಿಅಂಗವಾಗಿ ಬುಧವಾರ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ಇಲ್ಲಿನ ನಾಗಲಮಡಿಕೆ ಗ್ರಾಮದ ಶ್ರೀ ಸುಬ್ರಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪಾವಗಡ: ಚಂಪಕ ಷಷ್ಟಿಅಂಗವಾಗಿ ಬುಧವಾರ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ಇಲ್ಲಿನ ನಾಗಲಮಡಿಕೆ ಗ್ರಾಮದ ಶ್ರೀ ಸುಬ್ರಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಂತ್ಯ ಸುಬ್ರಹ್ಮಣ್ಯ ಸ್ವಾಮಿ ನೆಲೆಸಿದ್ದು, ಸ್ವಾಮಿಗೆ ಲಕ್ಷಾಂತರ ಖ್ಯೆಯ ಭಕ್ತರಿದ್ದಾರೆ. ಚಂಪಾ ಷಷ್ಟಿಯ ಪ್ರಯುಕ್ತ, ಉಪವಾಸ ಹಾಗೂ ಭಕ್ತಿ,ನಿಷ್ಟೆಯಿಂದ ಅಪಾರ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ಉತ್ತರ ಪಿನಾಕಿನಿ ನದಿಯಲ್ಲಿ ಸ್ನಾನ ಮಾಡುವ ಮೂಲಕ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ಕಷ್ಟ ನಿವಾರಿಸುವಂತೆ ವಿಶೇಷ ಪೂಜೆ ಸಲ್ಲಿಸಿ, ಉಪವಾಸ ಬಿಟ್ಟರು. ಡಿ.14 ರಂದು ನಡೆಯುವ ದೊಡ್ಡ ಶ್ರೀ ಸುಬ್ರಮಣ್ಯ ಸ್ವಾಮಿ ಬ್ರಹ್ಮ ರಥೋತ್ಸವ ವೇಳೆ ಕರ್ನಾಟಕ ಆಂಧ್ರ ಸೇರಿದಂತೆ ವಿವಿಧ ರಾಜ್ಯ ಹಾಗೂ ನಗರ ಪ್ರದೇಶಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವುದು ವಿಶೇಷವಾಗಿದೆ.