ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಿದರೆ ಸಂಘದ ಪ್ರಗತಿಯಾಗಲಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ಹೇಳಿದರು.ತಾಲೂಕಿನ ಸೋಮಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೩-೨4ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ೨೦೨೩-೨೪ ನೇ ಸಾಲಿನಲ್ಲಿ ಸೋಮಹಳ್ಳಿ ಡೇರಿ ೪.೫೪ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು. ಸಂಘದ ಹಾಲು ಉತ್ಪಾದಕರು ಒಕ್ಕೂಟದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರಿಗೆ ನಿವೃತ್ತಿ ನಿಧಿ ಸ್ಥಾಪಿಸಲಾಗಿದೆ ಎಂದರು. ಸಂಘದ ಆಡಳಿತಾಧಿಕಾರಿ, ವಿಸ್ತರಣಾಧಿಕಾರಿ ಆರ್. ರಂಜಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಎಸ್. ಶಿವನಾಗಪ್ಪರನ್ನು ಸನ್ಮಾನಿಸಿದರು.
ಬಹುಮಾನ: ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಹಾಗೂ ಅತಿ ಹೆಚ್ಚು ಪಶು ಆಹಾರ ಖರೀದಿ ಮಾಡಿದ ಸಂಘದ ಸದಸ್ಯರಿಗೆ ಬಹುಮಾನ ನೀಡಲಾಯಿತು.ಸಭೆಯಲ್ಲಿ ಎಸ್.ಎಸ್.ಮಧುಶಂಕರ್, ಎಸ್.ಪಿ. ಕುಮಾರಸ್ವಾಮಿ, ಎಸ್.ಎಂ. ಸದಾಶಿವಪ್ಪ, ಶಂಕ್ರಪ್ಪ, ಎಸ್. ಮಹದೇವಪ್ಪ, ಎಸ್.ಪಿ. ಸೋಮಶೇಖರ್, ಎಸ್. ನಾಗರಾಜು, ಬಸವಣ್ಣ, ಗೌಡಿಕೆ ಎಸ್.ಜಿ. ಸದಾನಂದ ಸ್ವಾಮಿ, ಯು.ಎಂ.ಮಲ್ಲೇಶ್, ಪಟೇಲ್ ಕೆ.ಸುಬ್ಬಣ್ಣ, ಎಸ್. ನಾಗಭೂಷಣ್, ಎಸ್.ಆರ್. ಮೂರ್ತಿ, ಸ್ವಾಮಿ, ಕೊಂಡೇಗೌಡ, ಮಹಾದೇವಮ್ಮ, ಸಂಘದ ಮುಖ್ಯ ಕಾರ್ಯ ನಿರ್ವಾಹಕ ಮಲ್ಲೇಶ್, ಹಾಲು ಪರೀಕ್ಷಕ ಗುರುಸ್ವಾಮಿ ಉಪಸ್ಥಿತರಿದ್ದರು.