ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿಶ್ವ ಹಾಲು ದಿನದ ಅಂಗವಾಗಿ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದಿಂದ ನಗರದಲ್ಲಿರುವ ಜಿಲ್ಲಾ ಅಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿರುವ ಒಳ ರೋಗಿಗಳಿಗೆ ನಂದಿನಿ ಹಾಲಿನ ಪ್ಯಾಕೆಟ್‌ಗಳನ್ನು ನಿರ್ದೇಶಕ ಎಚ್.ಎಸ್. ಬಸವರಾಜು, ಸದಾಶಿವ ಮೂರ್ತಿ, ಕಮರವಾಡಿ ರೇವಣ್ಣ ಅವರು ವಿತರಿಸಿದರು.ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಿಭಾಗದ ತಾಯಿ ಮತ್ತು ಮಕ್ಕಳ ಅಸ್ಪತ್ರೆಗೆಯಲ್ಲಿ ವಿವಿಧ ವಾರ್ಡ್‌ಗಳಿಗೆ ತೆರಳಿ ನಂದಿನಿ ಟೆಟ್ರಾ ಹಾಲಿನ ಪ್ಯಾಕೆಟ್ ಹಾಗೂ ಸುವಾಸಿತ ಹಾಲಿನ ಬಾಟಲಿಗಳನ್ನು ನಿರ್ದೇಶಕರು ನೀಡಿ, ವಿಶ್ವ ಹಾಲು ದಿನದ ಶುಭ ಕೋರಿದರು. ತಾಯಂದರಿಗೆ ಹಾಲಿನ ಮಹತ್ವ ಮತ್ತು ನಂದಿನಿ ಹಾಲನ್ನೇ ಬಳಸಿ ಎಂದು ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು, ಚಾಮರಾಜನಗರ ಹಾಲು ಒಕ್ಕೂಟ ಪ್ರತಿ ವರ್ಷ ವಿಶ್ವ ಹಾಲು ದಿನದಂದು ಶಾಲಾ ಮಕ್ಕಳಿಗೆ ಹಾಲು ವಿತರಣೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿರುವ ತಾಯಿ ಮತ್ತು ಮಕ್ಕಳಿಗೆ ಹಾಲು ವಿತರಣೆ ಮಾಡುತ್ತಾ ಬಂದಿದೆ. ರೈತರ ಸಂಸ್ಥೆಯಾಗಿರುವ ಚಾಮುಲ್ ಬೆಳವಣಿಗೆಯಿಂದ ಜಿಲ್ಲೆಯ ಅಭಿವೃದ್ಧಿಯಾಗುತ್ತದೆ. ಗುಣಮಟ್ಟದ ಹಾಲು ಗ್ರಾಹಕರಿಗೆ ದೊರೆಯುವ ಜೊತೆಗೆ ಇದರ ಸಂಪೂರ್ಣ ಲಾಭ ನಮ್ಮ ಜಿಲ್ಲೆಯ ರೈತರಿಗೆ ಸೇರುತ್ತದೆ. ಹೀಗಾಗಿ ಪ್ರತಿಯೊಬ್ಬರು ನಂದಿನಿ ಹಾಲು ಬಳಸಿ ಎಂದು ಮನವಿ ಮಾಡಿದರು.ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್ ಮಾತನಾಡಿ, ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದಿಂದ ಜಿಲ್ಲಾ ಆಸ್ಪತ್ರೆಯ ಒಳ ರೋಗಿಗಳಿಗೆ ಹಾಲು ವಿತರಣೆ ಮಾಡಲಾಗುತ್ತಿದೆ. ಹಾಲು ಸಂಪೂರ್ಣ ಆಹಾರವಾಗಿದೆ. ಹಾಲು ಸೇವಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ. ಪ್ರಸ್ತುತ ಕೆಎಂಎಫ್‌ನಲ್ಲಿ ೧.೧೨ ಕೋಟಿ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಇದರಲ್ಲಿ ೧೫೦ಕ್ಕೂ ಹೆಚ್ಚು ಹಾಲಿನ ಉತ್ಪನ್ನಗಳನ್ನು ತಯಾರು ಮಾಡುತ್ತಿದ್ದೇವೆ. ಅಲ್ಲದೇ, ಕರ್ನಾಟಕ ಮತ್ತು ಹೊರ ರಾಜ್ಯಗಳಿಗೆ ನಂದಿನಿ ಹಾಲು, ಮೊಸರು ಸರಬರಾಜು ಮಾಡಲಾಗುತ್ತದೆ. ಗ್ರಾಹಕರಿಗೆ ಆರೋಗ್ಯಕರವಾದ ಮತ್ತು ಉತ್ಕೃಷ್ಟವಾದ ನಂದಿನಿ ಉತ್ಪನ್ನಗಳನ್ನು ನೀಡುತ್ತಿದ್ದೇವೆ. ರೈತರ ಸಂಸ್ಥೆಯಾಗಿರುವ ಚಾಮುಲ್‌ಗೆ ಹೆಚ್ಚಿನ ಸಹಕಾರ ನೀಡಬೇಕು ಎಂದರು.ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕರಾದ ಸದಾಶಿವಮೂರ್ತಿ, ರೇವಣ್ಣ, ಜಿಲ್ಲಾ ಸರ್ಜನ್ ಚಿನ್ನಬೋವಿ, ಆಸ್ಪತ್ರೆಯ ಹೆರಿಗೆ ವಿಭಾಗದ ಮುಖ್ಯಸ್ಥ ಡಾ. ಪ್ರದೀಪ್, ಚಾಮುಲ್ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಎ. ಶಿವಕುಮಾರ್, ಶೇಖರಣೆ ವಿಭಾಗ ಉಪ ವ್ಯವಸ್ಥಾಪಕ ಡಾ. ಅಮರ್, ಮಾರುಕಟ್ಟೆ ವಿಭಾಗದ ಪಿ. ನೂತನ್, ಆರ್. ನವೀನ್ ಕುಮಾರ್, ವಿಸ್ತರಣಾಧಿಕಾರಿಗಳು, ನಂದಿನಿ ಅಧಿಕೃತ ಮಾರಾಟಗಾರರು ಇತರರು ಇದ್ದರು.---1ಸಿಎಚ್ಎನ್13ಚಾಮರಾಜನಗರ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳು ವಿಭಾಗದಲ್ಲಿ ನಂದಿನಿ ಹಾಲು ಮತ್ತು ಕ್ಷೀರೋತ್ಪನ್ನಗಳನ್ನು ವಿತರಿಸಲಾಯಿತು.