ಕಲ್ಲಂಗೆರೆ ದೇವಸ್ಥಾನದಲ್ಲಿ ಚಂಡಿಕಾ ಹೋಮ

| Published : Oct 13 2025, 02:00 AM IST

ಸಾರಾಂಶ

ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಶ್ರೀ ಮಹಿಷಾಸುರ ಮರ್ದಿನಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ಅರ್ಚನೆ ಬಣ್ಣ ಬಣ್ಣದ ಹೂವು ತೋಮಾಲೆಗಳಿಂದ ವಿಶೇಷವಾಗಿ ಅಲಂಕಾರಮಾಡಿದರು. ಅರಸೀಕೆರೆ ತಾಲೂಕಿನ ಕಸಬಾ ಹೋಬಳಿ ಕೆಲ್ಲಂಗೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿನಾರಾಯಣ ಸ್ವಾಮಿ ದೇವಾಲಯದಲ್ಲಿ ಅಶ್ವಯುಜ ಮಾಸದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಇಂದು ಚಂಡಿಕಾ ಹೋಮ ವೈಭವದಿಂದ ನಡೆಯಿತು.

ಹಾರನಹಳ್ಳಿ: ಅರಸೀಕೆರೆ ತಾಲೂಕಿನ ಕಸಬಾ ಹೋಬಳಿ ಕೆಲ್ಲಂಗೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿನಾರಾಯಣ ಸ್ವಾಮಿ ದೇವಾಲಯದಲ್ಲಿ ಅಶ್ವಯುಜ ಮಾಸದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಇಂದು ಚಂಡಿಕಾ ಹೋಮ ವೈಭವದಿಂದ ನಡೆಯಿತು.

ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಶ್ರೀ ಮಹಿಷಾಸುರ ಮರ್ದಿನಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ಅರ್ಚನೆ ಬಣ್ಣ ಬಣ್ಣದ ಹೂವು ತೋಮಾಲೆಗಳಿಂದ ವಿಶೇಷವಾಗಿ ಅಲಂಕಾರಮಾಡಿದರು.

ಪುರೋಹಿತರು ಅಗ್ನಿ ಮಂಥನ ಮಾಡುವ ಮೂಲಕ ಚಂಡಿಕಾಹೋಮಕ್ಕೆ ಚಾಲನೆ ನೀಡಿದರು. ಏಳುನೂರು ಸಪ್ತಶತಿ ಶ್ಲೋಕಗಳಿಂದ ಪರಮಾನದಿಂದ ಹವಿಸ್ಸು ನೀಡಿದರು. ಹಾಸನದ ವೇದ ಬ್ರಹ್ಮ ಶ್ರೀ ಎಂ ಎ ಕೃಷ್ಣಮೂರ್ತಿ ಘನಪಾಠಿಗಳ ಆಚಾರ್ಯತ್ವದಲ್ಲಿ ಮಹಾ ಚಂಡಿಕಾಯಾಗ ನಡೆಯಿತು. ಮಹಾಗಣಪತಿ ಹೋಮ, ಲಕ್ಷ್ಮೀನಾರಾಯಣ ಹೃದಯ ಹೋಮ ನಡೆಯಿತು ಚಂಡಿಕಾಯಾಗದಲ್ಲಿ ಮಂಗಳ ದ್ರವ್ಯ ಗಳಿಂದ ಮಹಾಪೂರ್ಣಾಹುತಿ ನಡೆಯಿತು. ಚಂಡಿಕಾ ಹೋಮದ ಅಂಗವಾಗಿ ಸುಮಂಗಲಿ ಪೂಜೆ ಕನ್ನಿಕಾ ಪೂಜೆ ನಡೆಯಿತು ಲಕ್ಷ್ಮೀ ನಾರಯಣ ವತಿಯಿಂದ ಚಂಡಿಕಾಹೋಮಸ ಸೇವೆ ಮಾಡಿಸಿದ್ದರು. ಕಾರ್ಯಕ್ರಮದಲ್ಲಿ ಲಕ್ಮೀನಾರಯಣ ದೇವಾಲಯದ ಭಕ್ತರು ಭಾಗವಹಿಸಿದ್ದರು.