ಬೇಸಿಗೆ ಹಾಗೂ ಶಾಲಾ ಕಾಲೇಜುಗಳ ರಜಾ ಕಾಲವಾಗಿರುವುದರಿಂದ ಪ್ರತಿನಿತ್ಯ ಅಧಿಕ ಭಕ್ತರು ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವರ ದರ್ಶನ ಪಡೆದು ಹರಕೆ ತೀರಿಸಲು ಭಕ್ತರು ಹಣ್ಣುತುಪ್ಪ ಮಾಡಿಸುತ್ತಾರೆ. ಅಲ್ಲದೇ ಇಲ್ಲಿಯ ಚತುರ್ಯಗಮೂರ್ತಿ, ರಾಮೇಶ್ವರಸ್ವಾಮಿ, ಶ್ರೀ ವಾಸಾಂಜನೇಯ, ಅಗಸ್ತೇಶ್ವರ, ಪಟ್ಟಾಭಿರಾಮ, ರಾಘವೇಂದ್ರಮಠ, ವರದಾನ ಬಸವೇಶ್ವರ ಸೇರಿದಂತೆ ವಿವಿಧ ದೇವಾಲಯಗಳಿಗೆ ಹೆಚ್ಚು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ. ಈ ಸಂದರ್ಭದಲ್ಲಿ ದೇವಾಲಯದಲ್ಲಿ ನಡೆದ ಚಂಡಿಕಾಹೋಮ ಪೂಜಾ ಕಾರ್ಯ ಭಕ್ತರಿಗೆ ವರವಾಗಿ ಪರಿಣಮಿಸಿತು.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ರಾಮನಾಥಪುರದ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಸಭಾಂಗಣದಲ್ಲಿ ವೇ. ಶ್ರೀಶಾಚಾರ್‌ ಅವರ ನೇತೃತ್ವದಲ್ಲಿ ಚಂಡಿಕಾಹೋಮ ನಡೆಯಿತು. ದೇವಾಲಯದಲ್ಲಿ ಬೆಳಿಗ್ಗೆ ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ಅಮ್ಮನವರನ್ನು ಪ್ರತಿಷ್ಠಾಪಿಸಿ, ಚಂಡಿಕಾಹೋಮ, ಮಹಾಮಂಗಳಾರತಿ, ನಂತರ ಪ್ರಸಾದದ ವ್ಯವಸ್ಥೆ ನಡೆಯಿತು. ಲೋಕಕಲ್ಯಾಣಕ್ಕಾಗಿ ಜರುಗಿದ ಚಂಡಿಕಾಹೋಮ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಜನರು ಭಕ್ತಿಭಾವ ಮೆರೆದರು. ಬೇಸಿಗೆ ಹಾಗೂ ಶಾಲಾ ಕಾಲೇಜುಗಳ ರಜಾ ಕಾಲವಾಗಿರುವುದರಿಂದ ಪ್ರತಿನಿತ್ಯ ಅಧಿಕ ಭಕ್ತರು ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವರ ದರ್ಶನ ಪಡೆದು ಹರಕೆ ತೀರಿಸಲು ಭಕ್ತರು ಹಣ್ಣುತುಪ್ಪ ಮಾಡಿಸುತ್ತಾರೆ. ಅಲ್ಲದೇ ಇಲ್ಲಿಯ ಚತುರ್ಯಗಮೂರ್ತಿ, ರಾಮೇಶ್ವರಸ್ವಾಮಿ, ಶ್ರೀ ವಾಸಾಂಜನೇಯ, ಅಗಸ್ತೇಶ್ವರ, ಪಟ್ಟಾಭಿರಾಮ, ರಾಘವೇಂದ್ರಮಠ, ವರದಾನ ಬಸವೇಶ್ವರ ಸೇರಿದಂತೆ ವಿವಿಧ ದೇವಾಲಯಗಳಿಗೆ ಹೆಚ್ಚು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ. ಈ ಸಂದರ್ಭದಲ್ಲಿ ದೇವಾಲಯದಲ್ಲಿ ನಡೆದ ಚಂಡಿಕಾಹೋಮ ಪೂಜಾ ಕಾರ್ಯ ಭಕ್ತರಿಗೆ ವರವಾಗಿ ಪರಿಣಮಿಸಿತು.