ಸಾರಾಂಶ
ದೇವಸ್ಥಾನದಲ್ಲಿ ಬೆಳಗ್ಗೆ ಉಷಾಕಾಲ ಪೂಜೆ, ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ, ನಿತ್ಯ ಬಲಿ, ಅನ್ನಸಂತರ್ಪಣೆ, ರಾತ್ರಿ ದೇವರ ಬಲಿ ಹೊರಟು ಚಂದ್ರಮಂಡಲ ಉತ್ಸವ, ರಥಬೀದಿ ಕಟ್ಟೆ ಪೂಜೆ, ಪ್ರಸಾದ ವಿತರಣೆ, ಮಹಾಪೂಜೆ ಮುಂತಾದ ಧಾರ್ಮಿಕ ಕಾರ್ಯಗಳು ನಡೆದವು. ದೇವಸ್ಥಾನಕ್ಕೆ ಚಂದ್ರಮಂಡಲ ರಥ ಹಾಗೂ ಪಲ್ಲಕ್ಕಿಯನ್ನು ಸಮರ್ಪಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಆಧ್ಯಾತ್ಮಿಕತೆ ನಮ್ಮ ದೇಶದ ಆತ್ಮ. ಆಧ್ಯಾತ್ಮಿಕವಾಗಿ ಜೀವನಕ್ಕೆ ಮಾರ್ಗದರ್ಶನ ನೀಡುವ ಆದರ್ಶಗಳ ಪುಣ್ಯಭೂಮಿ ಈ ಭಾರತ. ಹಾಗಾಗಿ ನಮಗೆ ನಮ್ಮ ಸಂಸ್ಕøತಿ ಸಂಸ್ಕಾರದ ಮೇಲೆ ಅಭಿಮಾನವಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು. ಅವರು ಶುಕ್ರವಾರ ರಾತ್ರಿ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅತಿಥಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಾದ ತಿಂಗಳಲ್ಲೇ ನಾಳ ದೇವಸ್ಥಾನಕ್ಕೆ ಚಂದ್ರಮಂಡಲ ರಥ ಸಮರ್ಪಣೆಯಾಗಿದ್ದು ಭವ್ಯ ಕ್ಷಣವಾಗಿದೆ. ದೇವಸ್ಥಾನಕ್ಕೆ ಬರುವಾಗ ಚಪ್ಪಲಿ ಹೊರಗಿಟ್ಟು ಬರುವಂತೆ ಮನಸ್ಸಿನಿಂದ ರಾಜಕೀಯವನ್ನು ಹೊರಗಿಟ್ಟು ಸ್ವಚ್ಛವಾಗಿ ಬರಬೇಕು. ಸ್ಪರ್ಧೆಯಲ್ಲಿ ಗೆದ್ದ ಸಂಪೂರ್ಣ ಹಣವನ್ನು ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸಿರುವುದು ದೇವಸ್ಥಾನದ ಭಜನಾ ಮಂಡಳಿಯ ಮಾದರಿ ಕಾರ್ಯ. ಮುಂದಿನ ಬ್ರಹ್ಮಕಲಶೋತ್ಸವ ಸಂದರ್ಭದಲ್ಲೂ ಎಲ್ಲರ ಸಹಕಾರ ಇರಲಿ ಎಂದರು. ಸಭೆಯನ್ನು ಉದ್ದೇಶಿಸಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮೈಸೂರಿನ ಉದ್ಯಮಿ ಹೇಮಂತ್ ಕುಮಾರ್ ಗೇರುಕಟ್ಟೆ, ಬೆಂಗಳೂರಿನ ಉದ್ಯಮಿ ಕಿರಣ್ ಚಂದ್ರ ಹಲೇಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ಯೋಜನಾಧಿಕಾರಿ ಸುರೇಂದ್ರ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ ಸ್ವಾಗತಿಸಿದರು. ವೇದಿಕೆಯಲ್ಲಿ ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಕಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಮೆದಿನ, ಕಳಿಯ ಪ್ಯಾಕ್ಸ್ ಅಧ್ಯಕ್ಷ ವಸಂತ ಮಜಲು, ಓಡೀಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಬದಿನಡೆ – ಮಂಜಲಡ್ಡ ಪರಿವಾರ ದೈವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುವರ್ಣೇಂದ್ರ ಜೈನ್ ಕಳಿಯಬೀಡು, ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ, ಭಜನಾ ಮಂಡಳಿ ಅಧ್ಯಕ್ಷ ಉಮೆಶ್ ಶೆಟ್ಟಿ ಸಂಬೊಳ್ಯ, ಮಾತೃ ಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಂ. ಜನಾರ್ದನ ಪೂಜಾರಿ, ದಿನೇಶ್ ಗೌಡ ಕೆ ಕಲಾಯಿತೊಟ್ಟು, ಅಂಬಾ ಬಿ ಆಳ್ವಾ, ವಿಜಯ ಎಚ್. ಪ್ರಸಾದ್, ಉಮೇಶ್ ಕೆ. ಕೇಲ್ದಡ್ಕ, ರಾಜೇಶ್ ಶೆಟ್ಟಿ ಅಡ್ಡಕೊಡಂಗೆ ಇದ್ದರು. ಗೌರವ: ರಥ ನಿರ್ಮಾಣಕ್ಕೆ ಮರ ನೀಡಿದ ಆನಂದ ಶೆಟ್ಟಿ ಐಸಿರಿ, ಗಣಪತಿ ಭಟ್, ಅಂಬಿಕೆ, ಮೋಹನ್, ರಥದ ಕೆತ್ತನೆ ಕಾರ್ಯ ಮಾಡಿದ ಶಶಿಧರ ಬೆಳಾಲು, ವಸಂತ ಆಚಾರ್ಯ, ಸದಾಶಿವ ಹಾಗೂ ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಕೆತ್ತನೆ ಕಾರ್ಯದಲ್ಲಿ ಪಾಲ್ಗೊಂಡ ಶಿಲ್ಪಿ ಸ್ಥಳೀಯ ನಿವಾಸಿ ಜಯಚಂದ್ರ ಆಚಾರ್ಯರನ್ನು ಗೌರವಿಸಲಾಯಿತು. ಎಸ್.ಕೆ.ಡಿ.ಆರ್.ಡಿ.ಪಿ. ವತಿಯಿಂದ ಯೋಜನಾಧಿಕಾರಿ ಸುರೇಂದ್ರರವರು ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ 2.50 ಲಕ್ಷ ರುಪಾಯಿಯ ಚೆಕ್ ಹಸ್ತಾಂತರಿಸಿದರು. ಸತೀಶ್ ಭಂಡಾರಿ ಪ್ರಾರ್ಥನೆ ನೆರವೇರಿಸಿದರು. ಉಪನ್ಯಾಸಕ, ಕಳಿಯ ಪ್ಯಾಕ್ಸ್ ನ ನಿರ್ದೇಶಕ ಕೇಶವ ಬಂಗೇರ ನಿರೂಪಿಸಿದರು. ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ವಂದಿಸಿದರು.ದೇವಸ್ಥಾನದಲ್ಲಿ ಬೆಳಗ್ಗೆ ಉಷಾಕಾಲ ಪೂಜೆ, ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ, ನಿತ್ಯ ಬಲಿ, ಅನ್ನಸಂತರ್ಪಣೆ, ರಾತ್ರಿ ದೇವರ ಬಲಿ ಹೊರಟು ಚಂದ್ರಮಂಡಲ ಉತ್ಸವ, ರಥಬೀದಿ ಕಟ್ಟೆ ಪೂಜೆ, ಪ್ರಸಾದ ವಿತರಣೆ, ಮಹಾಪೂಜೆ, ನಿತ್ಯ ಬಲಿ, ದೀಪದ ಬಲಿ ಮುಂತಾದ ಧಾರ್ಮಿಕ ಕಾರ್ಯಗಳು ನಡೆದವು. ಇದೇ ವೇಳೆ ದೇವಸ್ಥಾನಕ್ಕೆ ಚಂದ್ರಮಂಡಲ ರಥ ಹಾಗೂ ಪಲ್ಲಕ್ಕಿಯನ್ನು ಸಮರ್ಪಿಸಲಾಯಿತು.