ತಾಯಿ ಶಾರದಮ್ಮ ಗೋವಿಂದ ಭಟ್ ಅವರ 91ನೇ ಜನ್ಮದಿನಾಚರಣೆ ಅಂಗವಾಗಿ ಮೂಲ್ಕಿಯ ಸಿಎಸ್‌ಐ ಬಾಲಿಕಾಶ್ರಮದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಸಂಯೋಜನೆಯಲ್ಲಿ ನಡೆದ ‘ಅಮ್ಮನ ಆಸರೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ

ಮೂಲ್ಕಿ: ಅಮ್ಮನ ತ್ಯಾಗಮಯಿ ಋಣವನ್ನು ನಮ್ಮ ಆತ್ಮಸ್ಥೈರ್ಯವನ್ನಾಗಿ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು. ನೋವನ್ನು ಪಡೆದು ಪ್ರೀತಿಯನ್ನು ಹಂಚುವ ಅಮ್ಮನ ಅಸರೆಯನ್ನು ವಿಶ್ವಾಸಕ್ಕೆ ಪರಿವರ್ತಿಸಿಕೊಳ್ಳುವುದೇ ಮಾನವನ ಧರ್ಮವಾಗಬೇಕು. ಉಸಿರಿನ ಕೊನೆಯವರೆಗೂ ತಾಯಿಯನ್ನು ಸಾಕಿ, ಸಲಹುವುದು ಮಕ್ಕಳ ಕರ್ತವ್ಯ ಎಂದು ಆಧ್ಯಾತ್ಮಿಕ ವಿಶ್ವ ಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ತಮ್ಮ ತಾಯಿ ಶಾರದಮ್ಮ ಗೋವಿಂದ ಭಟ್ ಅವರ 91ನೇ ಜನ್ಮದಿನಾಚರಣೆ ಅಂಗವಾಗಿ ಮೂಲ್ಕಿಯ ಸಿಎಸ್‌ಐ ಬಾಲಿಕಾಶ್ರಮದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಸಂಯೋಜನೆಯಲ್ಲಿ ನಡೆದ ‘ಅಮ್ಮನ ಆಸರೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಯುವ ಉದ್ಯಮಿ ರಾಹುಲ್ ಚಂದ್ರಶೇಖರ್ ಅವರು ‘ಅಮ್ಮನ ಆಸರೆ’ ಸರಣಿ ಕಾರ್ಯಕ್ರಮವನ್ನು ಸಂಯೋಜಿಸಿದ್ದು, ಬಾಲಿಕಾಶ್ರಮದ ಎಲ್ಲ ಮಕ್ಕಳಿಗೆ ದೈನಂದಿನ ವಸ್ತುಗಳನ್ನು ವಿತರಿಸಿ, ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ಸೂಕ್ತ ಸ್ಪಂದನೆಯನ್ನು ಸೇವಾಶ್ರಮದ ಮೂಲಕ ನಡೆಸುವ ಭರವಸೆ ನೀಡಿದರು. ಶಾರದಮ್ಮ ಗೋವಿಂದ ಭಟ್, ಸೇವಾಶ್ರಮದ ನಿರ್ದೇಶಕಿ ರಜನಿ ಸಿ. ಭಟ್, ರಾಘವ ಸೂರ್ಯ, ನ್ಯಾಯವಾದಿ ರೋಶನಿ ಚಂದ್ರಶೇಖರ್‌, ಆಶ್ರಮದ ಸಂಚಾಲಕ ಪುನೀತ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ಆಶ್ರಮದ ವಕ್ತಾರ ನರೇಂದ್ರ ಕೆರೆಕಾಡು ನಿರೂಪಿಸಿದರು.

ಮಕ್ಕಳ ಜೊತೆ ಶಾರದಮ್ಮ ಸಂಭ್ರಮ...

ಈ ಸಂದರ್ಭ ಶ್ರೀ ಚಂದ್ರಶೇಖರ ಸ್ವಾಮೀಜಿ ತಮ್ಮ ತಾಯಿ ಶಾರದಮ್ಮ ಗೋವಿಂದ ಭಟ್ ಜೊತೆ ಆಶ್ರಮದ ಮಕ್ಕಳಿಗೆ ಬದುಕಿನ ನೀತಿ ಪಾಠ ಹೇಳಿದರು. ಭವಿಷ್ಯದಲ್ಲಿ ಉತ್ತಮ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಜೀವನ ನಿರ್ವಹಿಸಲು ಸಲಹೆ ನೀಡಿದರು. ಮಕ್ಕಳ ಜೊತೆಗೆ ಸಂವಾದ ನಡೆಸಿ, ತಮ್ಮ ಅನುಭವವನ್ನು ಹಂಚಿಕೊಂಡರು.