ಮೂಲ್ಕಿ: ಯುವಜನಾಂಗ ಸಮಾಜದ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಧ್ಯಾತ್ಮಿಕ ವಿಶ್ವಗುರು, ಅಂತರಾಷ್ಟ್ರೀಯ ವಾಸ್ತು ತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಮೂಲ್ಕಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಸಮಾಜ ಸೇವಕ, ಸಂಘಟಕ, ಕಾರ್ಯಕ್ರಮ ನಿರೂಪಕ ಕಿನ್ನಿಗೋಳಿ ರೋಟರಿ ಕ್ಲಬ್ಬಿನ ಅಧ್ಯಕ್ಷ ಸಾಯಿನಾಥ ಶೆಟ್ಟಿಯವರನ್ನು ತಮ್ಮ ಆಶ್ರಮದ ವತಿಯಿಂದಗೌರವಿಸಿ ಮಾತನಾಡಿದರು. ಶ್ರದ್ಧಾವಂತರು ಯಾವ ಕಾಲಕ್ಕೂ ಜ್ಞಾನಿಗಳು ಅನುಭವಿಗಳು, ಅವರು ಕರ್ಮದ ಫಲವನ್ನು ಬಯಸದೆ ಅನುಭವ ಮಾರ್ಗದಲ್ಲಿ ನಿರತರಾಗಿ ದೋಷ ದೂರವಾದ ಪದವಿಗೆ ಭಾಜನರಾಗುತ್ತಾರೆ. ಈ ಮಾತಿನಲ್ಲಿ ವಿಶ್ವಾಸವಿಟ್ಟು ಸಮಾಜದೊಂದಿಗೆ ಸ್ಪಂದಿಸಿ ಮುಂದುವರಿದಾಗ ವ್ಯಕ್ತಿತ್ವಕ್ಕೆ ಗರಿತ್ವ ಮೂಡುತ್ತದೆ, ವಿಷಮ ಸಂದರ್ಭದಲ್ಲಿ, ವಿಭಿನ್ನ ಪ್ರಸಂಗದಲ್ಲಿ ಎದೆಗುಂದದೆ ಸಮಾಜಮುಖಿ ಚಿಂತನಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು.ತನ್ನನ್ನು ತಾನು ಸಮಾಜಕ್ಕೆ ಅರ್ಪಣಾ ಮನೋಭಾವದಿಂದ ಅರ್ಪಿಸಿ ಮುಂದುವರಿದಾಗ ಬಾಳು ಹಸನಾಗುತ್ತದೆಯೆಂದು ಹೇಳಿದರು. ಈ ಸಂದರ್ಭ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕರಾದ ರಜನಿ ಸಿ ಭಟ್, ರಾಹುಲ್ ಚಂದ್ರಶೇಖರ್, ಸಂಚಾಲಕ ಪುನೀತ್ ಕೃಷ್ಣ, ಮೂಲ್ಕಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ್ ಸುವರ್ಣ,ಭದ್ರತಾ ಸಿಬ್ಬಂದಿ ಪ್ರದೀಪ್ ಗೌಡ, ರಾಜು, ಕಿರಣ್ ಒಡೆಯರ್ ಮತ್ತಿತರರು ಉಪಸ್ಥಿತರಿದ್ದರು. ಪುನೀತ್ ಕೃಷ್ಣ ಸ್ವಾಗತಿಸಿ, ನಿರೂಪಿಸಿದರು, ಪ್ರಕಾಶ್ ಸುವರ್ಣ ವಂದಿಸಿದರು.ಯುವಕರು ಸಮಾಜಮುಖಿಯಾದಲ್ಲಿ ವ್ಯಕ್ತಿತ್ವಕ್ಕೆ ಮೆರುಗು: ಶ್ರೀ ಚಂದ್ರಶೇಖರ ಸ್ವಾಮೀಜಿ
ಯುವಜನಾಂಗ ಸಮಾಜದ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಧ್ಯಾತ್ಮಿಕ ವಿಶ್ವಗುರು, ಅಂತರಾಷ್ಟ್ರೀಯ ವಾಸ್ತು ತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.