ಬಿಜೆಪಿಯಿಂದ ಸಂವಿಧಾನ ಬದಲಿಸುವ ಹುನ್ನಾರ-ಸಚಿವ ಕೃಷ್ಣ ಬೈರೇಗೌಡ

| Published : Apr 30 2024, 02:01 AM IST

ಬಿಜೆಪಿಯಿಂದ ಸಂವಿಧಾನ ಬದಲಿಸುವ ಹುನ್ನಾರ-ಸಚಿವ ಕೃಷ್ಣ ಬೈರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯವರು ಸಂವಿಧಾನ ಬದಲಿಸುವ ಹುನ್ನಾರ ನಡೆದಿದ್ದು, ಅದಕ್ಕಾಗಿಯೇ ನರೇಂದ್ರ ಮೋದಿ ಅವರು ೪೦೦ ಸೀಟು ಕೇಳುತ್ತಿದ್ದಾರೆ. ಅವರು ಅಧಿಕಾರಕ್ಕೆ ಬಂದರೆ ಬಡವರಿಗೆ, ಮಹಿಳೆಯರಿಗೆ ಇರುವ ಸಾಮಾನ್ಯ ಹಕ್ಕು ತೆಗೆದು ಹಾಕುವುದೇ ಅವರ ಗುರಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು.

ಹಾವೇರಿ: ಬಿಜೆಪಿಯವರು ಸಂವಿಧಾನ ಬದಲಿಸುವ ಹುನ್ನಾರ ನಡೆದಿದ್ದು, ಅದಕ್ಕಾಗಿಯೇ ನರೇಂದ್ರ ಮೋದಿ ಅವರು ೪೦೦ ಸೀಟು ಕೇಳುತ್ತಿದ್ದಾರೆ. ಅವರು ಅಧಿಕಾರಕ್ಕೆ ಬಂದರೆ ಬಡವರಿಗೆ, ಮಹಿಳೆಯರಿಗೆ ಇರುವ ಸಾಮಾನ್ಯ ಹಕ್ಕು ತೆಗೆದು ಹಾಕುವುದೇ ಅವರ ಗುರಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು.ನಗರದದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಲ್ಲಿ ಎಲ್ಲರೂ ಸಮಾನರು. ಕೂಲಿ ಕಾರ್ಮಿಕ, ಸಾಮಾನ್ಯ ಮಹಿಳೆ, ಶಾಸಕ, ಸಂಸದ ಎಲ್ಲರೂ ಒಂದೇ ಅಂತಾ ಇದೆ. ಸಂವಿಧಾನ ಬದಲಿಸಲು ಹುನ್ನಾರ ನಡೆಸಿರುವ ಬಿಜೆಪಿಗೆ ಏನಾದ್ರು ನೀವು ವೋಟ್ ಮಾಡಿದ್ರೆ ನಿಮ್ಮ ಕಾಲಿಗೆ ನೀವೇ ಕೊಡಲಿ ಹಾಕಿಕೊಂಡಂತೆ. ದೀನ ದಲಿತರ ಹಕ್ಕು, ಸಮಾನತೆಯ ಹಕ್ಕು ನಿರ್ನಾಮ ಮಾಡುತ್ತಾರೆ. ನಿಮ್ಮ ಜುಟ್ಟು ಅದಾನಿ, ಅಂಬಾನಿ ಕೈಯಲ್ಲಿ ಇರುತ್ತದೆ ಎಂದು ಎಚ್ಚರಿಸಿದರು.ಈ ದೇಶದ ಒಟ್ಟು ಸಂಪತ್ತಿನಲ್ಲಿ ಶೇ.೪೦ ರಷ್ಟು ಶೇ.೧ರಷ್ಟು ಜನರ ಕೈಯಲ್ಲಿದೆ. ದುಡಿಯುವ ಜನರು ಶೇ.೯೦ರಷ್ಟು ಇದ್ದಾರೆ, ಇವರ ಬಳಿ ಶೇ.೧೦ರಷ್ಟು ಸಂಪತ್ತು ಇದೆ. ಎಲ್ಲದರ ಮೇಲು ಟ್ಯಾಕ್ಸ್, ಜಿಎಸ್‌ಟಿ ಹೀಗೆ ನಾನಾ ರೀತಿ ತೆರಿಗೆ ಬಡವರ ಮೇಲೆ ಮೋದಿ ಸರ್ಕಾರ ಹಾಕಿದೆ ಎಂದರು.ರೈತರ ಸಾಲ ಮನ್ನಾ ಮಾಡಿ ಅಂತಾ ಪ್ರತಿಭಟನೆ ಮಾಡಿ ೭೦ ರೈತರು ಮೃತಪಟ್ಟರು. ಆದರೆ ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡಲಿಲ್ಲ. ರೈತರ ಸಾಲಮನ್ನಾ ಮಾಡಿದ್ರೆ ದೇಶ ಬರ್ಬಾದ್ ಆಗುತ್ತೆ ಅಂತಾರೆ. ಅದಾನಿ, ಅಂಬಾನಿ ಅವರ ಸಾಲ ಯಾಕೆ ಇವರು ಮನ್ನಾ ಮಾಡಿದ್ರು? ಎಂದು ಪ್ರಶ್ನಿಸಿದ ಅವರು, ಈ ಬಾರಿ ಕಾಂಗ್ರೆಸ್ ಸರ್ಕಾರ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನಿಡಿದರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಧರ್ಮ, ಮಂದಿರದ ಹೆಸರಲ್ಲಿ ನಾವಯ ರಾಜಕೀಯ ಮಾಡುವುದಿಲ್ಲ, ಅಭಿವೃದ್ಧಿ ಮೇಲೆ ನಾವೂ ಜನರ ಬಳಿ ಮತ ಕೇಳುತ್ತೇವೆ. ಇದು ಕೇವಲ ಚುನಾವಣೆ ಅಲ್ಲ, ದೇಶ ಉಳಿಸುವ ಚುನಾವಣೆ ಇದಾಗಿದೆ. ಆನಂದಸ್ವಾಮಿ ಗಡ್ಡದೇವರಮಠ ಯುವಕರಿದ್ದಾರೆ. ಅವರಿಗೆ ಪಕ್ಷ ಟಿಕೆಟ್ ನೀಡಿದ್ದು, ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಬಿಜೆಪಿಯವರು ಪದೆ ಪದೇ ೭೦ ವರ್ಷದಲ್ಲಿ ಏನ್ ಮಾಡಿದ್ರು ಅಂತಾರೆ, ಅವರು ೧೦ ವರ್ಷದಲ್ಲಿ ಏನು ಮಾಡಿದ್ದಾರೆ? ಬಿಜೆಪಿಯವರು ಸಂವಿಧಾನದಲ್ಲಿರೋ ಮೀಸಲಾತಿ ತೆಗೆದು ಹಾಕ್ತೇನೆ ಅಂತಾರೆ. ಸಂವಿಧಾನ ಉಳಿಸಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಬಿಜೆಪಿ ಸರ್ಕಾರದಿಂದ ಬಡವರಿಗೆ ಅನ್ಯಾಯವಾಗಿದೆ. ಸಿದ್ದರಾಮಯ್ಯ ಗ್ಯಾರಂಟಿ ಯಾವುದೇ ಜಾತಿ, ಧರ್ಮ ನೋಡಿಲ್ಲ. ಇದನ್ನು ನೋಡಿ ಜನರಿಗೆ ಮತ ಹಾಕುವಂತೆ ಅರಿವು ಮೋಡಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಬಸವರಾಜ ಶಿವಣ್ಣವರ, ರುದ್ರಪ್ಪ ಲಮಾಣಿ, ಶ್ರೀನಿವಾಸ ಮಾನೆ, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಮುಖಂಡರಾದ ಎಂ.ಎಂ.ಹಿರೇಮಠ, ಎಸ್.ಎಫ್.ಎನ್. ಗಾಜೀಗೌಡ್ರ ಸೇರಿದಂತೆ ಇತರರು ಇದ್ದರು.