ಬಸವಣ್ಣ ವಚನಗಳ ಸಾರ ಅರಿತರೆ ಬದಲಾವಣೆ ಸಾಧ್ಯ: ಕೋರಿಸಂಗಯ್ಯ

| Published : May 13 2024, 12:02 AM IST

ಬಸವಣ್ಣ ವಚನಗಳ ಸಾರ ಅರಿತರೆ ಬದಲಾವಣೆ ಸಾಧ್ಯ: ಕೋರಿಸಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರ ವಚನಗಳ ಒಂದು ಸಾಲು ತಿಳಿದುಕೊಂಡರೂ ನಮ್ಮಲ್ಲಿ ತನ್ನಿಂದ ತಾನೇ ಸಾಕಷ್ಟು ಬದಲಾವಣೆ ಆಗುತ್ತದೆ

ಯಾದಗಿರಿ:

ಬಸವಣ್ಣನವರ ವಚನಗಳ ಸಾರವನ್ನು ನಡೆಯಲ್ಲಿಯೂ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಬದಲಾವಣೆ ಸಾಧ್ಯ ಎಂದು ವಲಯ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೋರಿಸಂಗಯ್ಯ ಗಡ್ಡದ ಹೇಳಿದರು.

ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬಸವಣ್ಣನವರ ವಚನಗಳ ಒಂದು ಸಾಲು ತಿಳಿದುಕೊಂಡರೂ ನಮ್ಮಲ್ಲಿ ತನ್ನಿಂದ ತಾನೇ ಸಾಕಷ್ಟು ಬದಲಾವಣೆ ಆಗುತ್ತದೆ ಎಂದರು.

ಗಿರಿಜಮ್ಮ ತಾಯಿ ಮಾತನಾಡಿ, ಜಗಕ್ಕೆ ಜ್ಯೋತಿಯಾಗಿ ಬೆಳಗಿದ ಬಸವೇಶ್ವರರು ಎಲ್ಲ ಸರ್ವರಿಗೂ ಮಾದರಿಯಾಗಿದ್ದಾರೆ. ಅವರ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯನ್ನು ತಿಳಿದುಕೊಂಡರೆ, ಯಾವ ಮನುಷ್ಯರೂ ದುಡಿಯದೇ ಊಟ ಮಾಡುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಬಸವೇಶ್ವರ ತೊಟ್ಟಿಲು ಕಾರ್ಯಕ್ರಮ ನಡೆಯಿತು. ಬಸಮ್ಮ ಹಳೇಪೂಜಾರಿ, ನೀಲಮ್ಮ ಬಂಡಿ, ನೀಲಮ್ಮ ಪಂಜಗಲ್ಲ, ಹನುಮವ್ವ ಆದಿ, ಚನ್ನಮ್ಮ ಉದ್ದನ, ರವಿಶಂಕರ ಅಡ್ಡಿ, ಬಸವರಾಜ ಅಂಗಡಿ, ಬಸನಗೌಡ ಬಿರಾದಾರ್ ಇತರರಿದ್ದರು.