ಕೇಂದ್ರ ಸರಕಾರವು ಉದ್ಯೋಗ ಖಾತ್ರಿ ಯೋಜನೆಗೆ ಕೆಲವು ಬದಲಾವಣೆಗಳ ಬದಲಿಗೆ ಯೋಜನೆಯ ಸ್ವರೂಪ ಬದಲಾಯಿಸಲು ಹೊರಟಿರುವುದು ಸರಿಯಲ್ಲ ಎಂದು ನಾದೂರು ಗ್ರಾ ಪಂ ಅಧ್ಯಕ್ಷೆ ತುಳಸಿ ಮಧುಸೂದನ್ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ
ಕೇಂದ್ರ ಸರಕಾರವು ಉದ್ಯೋಗ ಖಾತ್ರಿ ಯೋಜನೆಗೆ ಕೆಲವು ಬದಲಾವಣೆಗಳ ಬದಲಿಗೆ ಯೋಜನೆಯ ಸ್ವರೂಪ ಬದಲಾಯಿಸಲು ಹೊರಟಿರುವುದು ಸರಿಯಲ್ಲ ಎಂದು ನಾದೂರು ಗ್ರಾ ಪಂ ಅಧ್ಯಕ್ಷೆ ತುಳಸಿ ಮಧುಸೂದನ್ ಹೇಳಿದರು.ಅವರು ಶಿರಾ ತಾಲೂಕಿನ ನಾದೂರು ಗ್ರಾ.ಪಂ. ಆವರಣದಲ್ಲಿ ಹಮ್ಮಿಕೊಂಡಿದ್ದ ವಿಬಿ ಜಿ ರಾಮ್ ಜಿ ಯೋಜನೆಯ ಗ್ರಾಮಸಭೆಯಲ್ಲಿ ಮಾತನಾಡಿದರು. ಮನರೇಗಾ ಯೋಜನೆಯಲ್ಲಿ ಬರ, ನೆರೆ ಸಂದರ್ಭದಲ್ಲಿ ೧೦೦ ದಿನದ ಬದಲಿಗೆ ೧೫೦ ದಿನಗಳಿಗೆ ಏರಿಕೆ ಅಡಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗುತ್ತಿತ್ತು. ಇದೀಗ ೧೨೫ ದಿನಕ್ಕೆ ಉದ್ಯೋಗ ಕೊಡಲಾಗುತ್ತದೆ. ಅಲ್ಲದೆ ೧೫ ದಿನದೊಳಗೆ ವೇತನ ಖಾತ್ರಿ ಮಾಡುತ್ತೇವೆ ಎನ್ನುವುದು ಒಪ್ಪಲಾಗದು. ಅಲ್ಲದೆ ೨೦೨೫-೨೬ಸಾಲಿನ ಸಾಮಾಗ್ರಿ ವೆಚ್ಚವನ್ನು ಬಿಡುಗಡೆ ಮಾಡದೆ ೬೦:೪೦ ಅನುಪಾತದಲ್ಲಿ ಕೊಡಲಾಗುವುದು ಎನ್ನುತ್ತಾರೆ. ಇದರಿಂದ ಸಾಕಷ್ಟು ತೊಂದರೆ ಎದುರಾಗಿದೆ ಅಲ್ಲದೇ ಎರಡು ತಿಂಗಳ ಅವಧಿಯಲ್ಲಿ ಪ್ರಸಕ್ತ ಅರ್ಥಿಕ ವರ್ಷ ಕೊನೆಯಾಗುತ್ತದೆ. ಅದರೂ ೧೫ನೇ ಹಣಕಾಸು ಯೋಜನೆಯ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದರು.
ವಿಬಿ ಜಿ ರಾಮ್ ಯೋಜನೆಯ ಸ್ವಯಂ ಸೇವಾ ಸಂಘ ಪ್ರತಿನಿಧಿ ಸೋಮಕುಮಾರ್ ಮಾತನಾಡಿ ಯೋಜನೆ ಹೊಸದಾಗಿ ರೂಪುಗೊಂಡಿದ್ದು ಹಂತಹಂತವಾಗಿ ಮಾರ್ಪಾಡು ಆಗುತ್ತಿದೆ. ಈಗಲೇ ಸಂಶಯ ವ್ಯಕ್ತಪಡಿಸುವುದು ಸರಿಯಲ್ಲ ,ಕೇಂದ್ರ ಸರ್ಕಾರದ ಸಶಕ್ತ ಮಾರ್ಗಸೂಚಿ ಅನ್ವಯ ಯೋಜನೆ ಜಾರಿಯಾಗುವುದು ಎಂದರು.ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಪಾರ್ವತಮ್ಮ, ಮೇಘಶ್ರೀ ನವೀನ್, ಮೆಹರ್ ತಾಜ್ ಬಾಬು, ಭುತರಾಜ್, ಅಶೋಕ ಸೇರಿದಂತೆ ಹಲವರು ಹಾಜರಿದ್ದರು.