ಸಾರಾಂಶ
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಂಗಳವಾರ ಗೌರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಚನ್ನಗಿರಿ:ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಂಗಳವಾರ ಗೌರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.ಹಬ್ಬದ ನಿಮಿತ್ತವಾಗಿ ಮಂಗಳವಾರ ಬೆಳ್ಳಿಗ್ಗೆಯಿಂದಲೇ ಬಾಳೆ ಕಂದು, ಮಾವಿನ ಎಲೆಗಳಿಂದ ಮನೆಗಳನ್ನು ಸಿಂಗರಿಸಲಾಗಿತ್ತು. ಸಂಪ್ರದಾಯದಂತೆ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸುವಂತಹ ಮನೆಗಳಲ್ಲಿ ಶ್ರದ್ಧಾ -ಭಕ್ತಿಯಿಂದ ಗೌರಿ ಮೂರ್ತಿಯನ್ನು ತಂದು ಪೂಜಿಸಲಾಯಿತು.
ವೀರಶೈವ ಸಮಾಜದಿಂದ ಗೌರಿ ಪ್ರತಿಷ್ಠಾಪನೆ:ಶ್ರೀ ವೀರಶೈವ ಸಮಾಜದಿಂದ ಮಂಗಳವಾರ ಗೌರಿ ಹಬ್ಬದ ನಿಮಿತ್ತವಾಗಿ ಪಟ್ಟಣದ ಕುಂಬಾರ ಬೀದಿಯಲ್ಲಿನ ಶ್ರೀನಿವಾಸ್ ಅವರ ಮನೆಯಿಂದ ಶುದ್ಧವಾದ ಎರೇಮಣ್ಣಿನಲ್ಲಿ ತಯಾರಿಸಲಾದ ಶ್ರೀ ಗೌರಿ ಮೂರ್ತಿಯನ್ನು ಮುತ್ತೈದೆ ಮಹಿಳೆಯರು ಪೂಜೆ ಸಲ್ಲಿಸಿಕೊಂಡು ಮಂಗಳವಾದ್ಯದ ಮೂಲಕ ಪಟ್ಟಣದ ಶ್ರೀ ಗೌರಮ್ಮನ ದೇವಾಲಯಕ್ಕೆ ತಂದು ಪ್ರತಿಷ್ಠಾಪನೆ ಮಾಡಲಾಯಿತು.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಪ್ರಮುಖರಾದ ರಾಜಶೇಖರಯ್ಯ, ಎಲ್.ಎಂ.ಉಮಾಪತಿ, ಜ್ಯೋತಿ ಕೋರಿ ಕೊಟ್ರೇಶ್, ರೇಣುಕಾ, ಶ್ರೀನಿವಾಸ್, ಕಮಲಾಹರೀಶ್, ಲತಾ, ಮಮತಾ ಮಲ್ಲಿಕಾರ್ಜುನ್, ಪ್ರಭಪ್ರಕಾಶ್ ಸೇರಿದಂತೆ ಭಕ್ತಾದಿಗಳು ಹಾಜರಿದ್ದರು.