ಚನ್ನಪಟ್ಟಣ: ರಸ್ತೆ ಅಪಘಾತದಲ್ಲಿ ವೃದ್ಧ ದಂಪತಿ ಸಾವುChannapatna: Elderly couple dies in road accident

| Published : Sep 10 2025, 01:03 AM IST

ಸಾರಾಂಶ

ಇವರ ಮಗ ಪವನ್‌ಗೆ ಗಾಯವಾಗಿದೆ. ಇವರು ಕೊಡಗಿಗೆ ಹೋಗಿ ಹಿಂದಿರುಗುವಾಗ ತಾಲೂಕಿನ ದೇವರಹೊಸಹಳ್ಳಿ ಗ್ರಾಮದ ಬಳಿ ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ಇವರ ಕಾರಿನ ಮುಂದೆ ಹೋಗುತ್ತಿದ್ದ ಗೂಡ್ಸ್ ವಾಹನದ ಟಯರ್ ಕಳಚಿಕೊಂಡು ಇವರ ಕಾರಿಗೆ ಡಿಕ್ಕಿ ಹೊಡೆದಿದೆ.

ಚನ್ನಪಟ್ಟಣ: ಗೂಡ್ಸ್ ವಾಹನದ ಟಯರ್ ಕಳಚಿಕೊಂಡು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಸಂಭವಿಸಿದ ಅಪಘಾತದಲ್ಲಿ ವೃದ್ಧ ದಂಪತಿಗಳು ಮೃತಪಟ್ಟು, ಒಬ್ಬರಿಗೆ ಗಾಯವಾಗಿರುವ ಘಟನೆ ತಾಲೂಕಿನ ದೇವರಹೊಸಹಳ್ಳಿ ಗ್ರಾಮದ ಬಳಿ ಬೆಂ- ಮೈ ಎಕ್ಸ್‌ಪ್ರೆಸ್ ವೇನಲ್ಲಿ ನಡೆದಿದೆ. ಬೆಂಗಳೂರಿನ ಬಾಗಲುಗಂಟೆಯ ಮುನಿಕೊಂಡಪ್ಪ ಲೇಔಟ್ ನಿವಾಸಿ ಸೋಮಯ್ಯ(೭೨), ಸರಸ್ವತಿ (೬೭) ಮೃತ ದಂಪತಿ. ಇವರ ಮಗ ಪವನ್‌ಗೆ ಗಾಯವಾಗಿದೆ. ಇವರು ಕೊಡಗಿಗೆ ಹೋಗಿ ಹಿಂದಿರುಗುವಾಗ ತಾಲೂಕಿನ ದೇವರಹೊಸಹಳ್ಳಿ ಗ್ರಾಮದ ಬಳಿ ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ಇವರ ಕಾರಿನ ಮುಂದೆ ಹೋಗುತ್ತಿದ್ದ ಗೂಡ್ಸ್ ವಾಹನದ ಟಯರ್ ಕಳಚಿಕೊಂಡು ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ ಕಾರು ಗೂಡ್ಸ್ ವಾಹನಕ್ಕೆ ಹಾಗೂ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸೋಮಯ್ಯ ಸ್ಥಳದಲ್ಲೇ ಮೃತಪಟ್ಟರೆ, ಸರಸ್ವತಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ಸಂಬಂಧ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.