ಸಾರಾಂಶ
ಅಜ್ಜಂಪುರಚನ್ನಪುರ ಗ್ರಾಮದ ಸರ್ವೆ ನಂ. 82ರಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣಾ ಉದ್ದೇಶಕ್ಕೆ ಭೂಮಿ ಕಾಯ್ದಿರಿಸುವುದನ್ನು ವಿರೋಧಿಸಿ ಅಜ್ಜಂಪುರ ಗಾಂಧಿ ವೃತ್ತದಲ್ಲಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು.
ತಹಸೀಲ್ದಾರ್ ವಿನಾಯಕ ಸಾಗರ್ ಗೆ ಮನವಿ
ಕನ್ನಡಪ್ರಭ ವಾರ್ತೆ ಅಜ್ಜಂಪುರಚನ್ನಪುರ ಗ್ರಾಮದ ಸರ್ವೆ ನಂ. 82ರಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣಾ ಉದ್ದೇಶಕ್ಕೆ ಭೂಮಿ ಕಾಯ್ದಿರಿಸುವುದನ್ನು ವಿರೋಧಿಸಿ ಅಜ್ಜಂಪುರ ಗಾಂಧಿ ವೃತ್ತದಲ್ಲಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು.ಈ ಪ್ರತಿಭಟನೆಯಲ್ಲಿ ಗೋಮಾಳ ಸಂರಕ್ಷಣಾ ಸಮಿತಿ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ವಿವಿಧ ಸಂಘ-ಸಂಸ್ಥೆಗಳು, ಅಂಬೇಡ್ಕರ್ ಕಾಲೋನಿ ವಾಸಿಗಳು ಮೆರವಣಿಗೆ ಸಾಗಿ ಘೋಷಣೆ ಕೂಗುತ್ತಾ ತಹಸೀಲ್ದಾರ್ ವಿನಾಯಕ ಸಾಗರ್ ಅವರಿಗೆ ಮನವಿ ಅರ್ಪಿಸಲಾಯಿತು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ವಿನಾಯಕ್ ಸಾಗರ್ ಮಾತನಾಡಿ ಸುಪ್ರೀಂಕೋರ್ಟ್ ತಿಳಿಸಿರುವಂತೆ (ಹಸಿರು ನ್ಯಾಯಾಧಿಕರಣ) ಗ್ರಾಮದಿಂದ ಎರಡೂವರೆ ಕಿ.ಮೀ. ದೂರದಲ್ಲಿ ಸರ್ಕಾರಿ ಜಾಗದಲ್ಲಿ ಈ ಘಟಕ ಸ್ಥಾಪಿಸಬಹುದು. ಅದರಂತೆ ಕಾಮಗಾರಿ ಪ್ರಾರಂಭ ಮಾಡಿರುತ್ತಾರೆ. ನಿಮ್ಮ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಹಾಗೂ ಸಂಬಂಧ ಪಟ್ಟ ಇಲಾಖೆಗಳಿಗೆ ಕಳುಹಿಸಿ ಮರು ಪರಿಶೀಲನೆ ಮಾಡುತ್ತೇವೆ ಎಂದು ಸಮಜಾಯಿಸಿ ನೀಡಿದರು.ಸಿ ಈ.ಕುಮಾರಪ್ಪ ಗಿರಿಶಪ್ಪ ಸಿ.ಎಸ್ ಚಂದ್ರಪ್ಪ ,ಸಿ ಎಸ್ ಮಲ್ಲಪ್ಪ, ಜಿ ರವಿಕುಮಾರ್, ಸಿ ಕೆ ಸುರೇಶ್, ನಾಗಭೂಷಣ್ ಎನ್ ಸಿ, ಪೂಜ್ಯ ಶಿವಪ್ಪ ಆರ್, ಪಿ. ಪರಮೇಶ್ವರಪ್ಪ, ಚನ್ನಬಸಪ್ಪ ಆರ್, ಮಂಜುನಾಥ ಎಸ್, ಸಿದ್ದೇಗೌಡ ಸಿ.ಎಸ್, ಮಲ್ಲಿಕಾರ್ಜುನ್ ಸ್ವಾಮಿ ಸಿ.ಪಿ, ಮೊಹಮ್ಮದ್ ರಫಿಕ್, ಸಿ.ಬಿ ದಸ್ತಗಿರ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಫೋಟೊ: ಗೋಮಾಳ ಸಂರಕ್ಷಣಾ ಸಮಿತಿ ವಿವಿಧ ಸಂಘ-ಸಂಸ್ಥೆ, ಅಂಬೇಡ್ಕರ್ ಕಾಲೋನಿ ನಿವಾಸಿಗಳು ತಹಸೀಲ್ದಾರ್ ವಿನಾಯಕ ಸಾಗರ್ ಗೆ ಮನವಿ ಅರ್ಪಿಸಿದರು.