ಕೆರಗೋಡು ಪ್ರಕರಣ ಖಂಡಿಸಿ ಹನುಮಾನ್ ಚಾಲೀಸ್ ಪಠಣ, ಪ್ರತಿಭಟನೆ

| Published : Feb 10 2024, 01:46 AM IST / Updated: Feb 10 2024, 04:55 PM IST

ಸಾರಾಂಶ

ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜವನ್ನು ತೆರವುಗೊಳಿಸಿರುವ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಶುಕ್ರವಾರ ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗದಳ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿ ಎದುರು ಹನುಮಾನ್ ಚಾಲಿಸ್ ಪಠಣ ಮಾಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಾಗರ: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜವನ್ನು ತೆರವುಗೊಳಿಸಿರುವ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಶುಕ್ರವಾರ ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗದಳ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿ ಎದುರು ಹನುಮಾನ್ ಚಾಲಿಸ್ ಪಠಣ ಮಾಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ಅಲ್ಲದೇ, ಉಪವಿಭಾಗಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಸಂಘ ಪರಿವಾರದ ಹಿರಿಯರಾದ ಅ.ಪು.ನಾರಾಯಣಪ್ಪ ಮಾತನಾಡಿ, ಗೋಹತ್ಯೆ ಸೇರಿದಂತೆ ಅನೇಕ ವಿಷಯಗಳಲ್ಲಿ ಈಗಿನ ಸರ್ಕಾರ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದೆ. 

ಕೇಂದ್ರ ಸರ್ಕಾರ ನಮ್ಮ ತೆರಿಗೆ ಹಣದ ಪಾಲನ್ನು ಕೊಡುತ್ತಿಲ್ಲವೆಂದು ನಮ್ಮ ತೆರಿಗೆ ನಮ್ಮ ಹಕ್ಕು ಹೇಳುತ್ತಾ ಪ್ರತಿಭಟಿಸುವವರು, ಹಿಂದೂ ದೇವಸ್ಥಾನದ ಹಣವನ್ನು ಹಿಂದೂಗಳಿಗೆ ಯಾಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

ಮಾತಿನಲ್ಲಿ ರಾಮ, ಕೃತಿಯಲ್ಲಿ ಬಾಬರ್ ಎನ್ನುವುದು ಸಿದ್ದರಾಮಯ್ಯನವರ ಕೆಲಸ. ರಾಮನ ವಿಚಾರದಲ್ಲಿ ಏನೆಲ್ಲ ಮಾಡಿದ್ದರು ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಹಿಂದೂಗಳನ್ನು ಹತ್ತಿಕ್ಕುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಬೇಕು ಎಂದರು.

ಬಜರಂಗದಳ ವಿಭಾಗ ಸಂಯೋಜಕ ರಾಜೇಶ್‌ಗೌಡ, ಪ್ರಮುಖರಾದ ಪ್ರವೀಣಕುಮಾರ್ ಮಾತನಾಡಿದರು. ಕೆ.ಎಚ್.ಸುದರ್ಶನ್, ಐ.ವಿ.ಹೆಗಡೆ, ಪ್ರತಿಮಾ ಜೋಗಿ, ಸಂತೋಷ್ ಶಿವಾಜಿ, ವ.ಶಂ. ರಾಮಚಂದ್ರ ಭಟ್, ಸುನೀಲ್ ರುದ್ರಪ್ಪ, ನವೀನ, ಮಂಜುಗೌಡ, ವಿಶಾಲ್ ಮೊದಲಾದವರು ಉಪಸ್ಥಿತರಿದ್ದರು.