ಹಾರುವನಹಳ್ಳಿಯ ಮಾರ್ಗದಯ್ಯ (ಆಂಜನೇಯ) ಸ್ವಾಮಿ ರಥೋತ್ಸವ

| Published : Mar 17 2025, 12:34 AM IST

ಹಾರುವನಹಳ್ಳಿಯ ಮಾರ್ಗದಯ್ಯ (ಆಂಜನೇಯ) ಸ್ವಾಮಿ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿ 50 ರಸ್ತೆಯ ಪಕ್ಕದಲ್ಲಿರುವ ಹಾರುವನಹಳ್ಳಿ ಗ್ರಾಮದ ಮಾರ್ಗದಯ್ಯ (ಆಂಜನೇಯ) ಸ್ವಾಮಿಯ ರಥೋತ್ಸವವು ಶುಕ್ರವಾರ ಸಂಜೆ ಸಡಗರ ಸಂಭ್ರಮದೊಂದಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿ 50 ರಸ್ತೆಯ ಪಕ್ಕದಲ್ಲಿರುವ ಹಾರುವನಹಳ್ಳಿ ಗ್ರಾಮದ ಮಾರ್ಗದಯ್ಯ (ಆಂಜನೇಯ) ಸ್ವಾಮಿಯ ರಥೋತ್ಸವವು ಶುಕ್ರವಾರ ಸಂಜೆ ಸಡಗರ ಸಂಭ್ರಮದೊಂದಿಗೆ ನಡೆಯಿತು.

ರಥೋತ್ಸವದ ಅಂಗವಾಗಿ ಬೆಳಗ್ಗೆ ಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಪೂಜಾ ವಿಧಿವಿಧಾನಗಳು ನಡೆದು, ಮಾರ್ಗದಯ್ಯ ಸ್ವಾಮಿ ಮತ್ತು ದೇವಸ್ಥಾನ ಹಾಗೂ ರಥೋತ್ಸವವನ್ನು ವಿವಿಧ ತರದ ಹೂಗಳಿಂದ ಆಲಂಕರಿಸಲಾಗಿತ್ತು.

ಸಂಜೆ ಮಂಗಳವಾಧ್ಯ, ಸಮಾಳ, ನಂದಿಕೋಲು, ಭಜನೆ, ಹಲಗೆ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ಮೆರವಣಿಗೆ ಮುಖಾಂತರ ಸ್ವಾಮಿಯನ್ನು ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಿದರು.

ನಂತರ ಮಾರ್ಗದಯ್ಯ ಸ್ವಾಮಿಯ ಪಟ ಹರಾಜು ಪ್ರಕ್ರಿಯೆ ನಡೆದಾಗ ಅಯ್ಯನಹಳ್ಳಿ ಶ್ರೀನಿವಾಸ್ 1 ಲಕ್ಷದ 10 ಸಾವಿರದ ಒಂದುನೂರ ಒಂದು ರೂಪಾಯಿಗೆ ಪಡೆದುಕೊಂಡು ಭಕ್ತಿ ಮೆರೆದರು.

ನಂತರ ಭಕ್ತರ ಜಯ ಘೋಷಣೆಯ ಮುಖಾಂತರ ಪಾದಗಟ್ಟೆಯವರೆಗೂ ರಥವು ಸಾಗಿ ಮತ್ತೆ ಮೊದಲಿದ್ದ ಸ್ಥಳಕ್ಕೆ ಬಂದು ತಲುಪಿತು.

ಈ ಸಂಧರ್ಭ ಹಗರಿ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ. ನೇಮಿರಾಜ್ ನಾಯ್ಕ್ ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಚಿಲಕನಹಟ್ಟಿ ಹಾಗೂ ಹಾರುವನಹಳ್ಳಿ ಗ್ರಾಮಗಳ ಹಿರಿಯ ಮುಖಂಡರು, ಮತ್ತು ಚಿಲಕನಹಟ್ಟಿ, ತಿಮ್ಮಾಲಾಪುರ, ಪೋತಲಕಟ್ಟೆ, ಡಣಾಯಕನಕೆರೆ, ದೇವಲಾಪುರ, ಮರಿಯಮ್ಮನಹಳ್ಳಿ, ಗೊಲ್ಲರಹಳ್ಳಿ, ಜಿ. ನಾಗಲಾಪುರ, ಬ್ಯಾಲಕುಂದಿ, ಗರಗ, ಗುಂಡಾ, ಗಾಳೆಮ್ಮನಗುಡಿ, ಹನುಮನಹಳ್ಳಿ, ಡಣಾಪುರ ಸೇರಿದಂತೆ ಇತರೆ ಊರುಗಳಿಂದ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ಮರಿಯಮ್ಮನಹಳ್ಳಿ ಪಟ್ಟಣದ ಪೋಲಿಸ್ ಠಾಣೆಯ ಪಿಎಸ್ಐ ಮೌನೇಶ್ ರಾಥೋಡ್ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಹಮ್ಮಿಕೊಂಡಿದ್ದರು.