ರಾಮನಾಥಪುರ ಜಾತ್ರೆಗೆ ಸಜ್ಜಾಗುತ್ತಿದೆ ತೇರು

| Published : Dec 06 2024, 08:58 AM IST

ಸಾರಾಂಶ

ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾ ರಥೋತ್ಸವ ಡಿ.7ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಸುಮಾರು 40 ಅಡಿ ಎತ್ತರದ ಸುಬ್ರಹ್ಮಣ್ಯಸ್ವಾಮಿ ತೇರನ್ನು ಕಾರ್ಮಿಕರು ಸಜ್ಜುಗೊಳಿಸುತ್ತಿದ್ದಾರೆ ಎಂದು ದೇವಾಲಯದ ದಿವಾನರಾದ ಬಾಬಣ್ಣ ಹಾಗೂ ಪಾರುಪತ್ತೇಗಾರ್ ರಮೇಶ್ ಭಟ್ ತಿಳಿಸಿದರು. ಡಿಸೆಂಬರ್ 7ರಂದು ಶನಿವಾರ ಹಗಲು 12 ಗಂಟೆಗೆ ಶ್ರೀ ಪ್ರಸನ್ನ ಶ್ರೀ ಸುಬ್ರಮಣ್ಯಸ್ವಾಮಿ ಮಹಾ ರಥೋತ್ಸವ ಸಂಭ್ರಮದಿಂದ ಅದ್ಧೂರಿಯಾಗಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಇಲ್ಲಿಯ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾ ರಥೋತ್ಸವ ಡಿ.7ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಸುಮಾರು 40 ಅಡಿ ಎತ್ತರದ ಸುಬ್ರಹ್ಮಣ್ಯಸ್ವಾಮಿ ತೇರನ್ನು ಕಾರ್ಮಿಕರು ಸಜ್ಜುಗೊಳಿಸುತ್ತಿದ್ದಾರೆ ಎಂದು ದೇವಾಲಯದ ದಿವಾನರಾದ ಬಾಬಣ್ಣ ಹಾಗೂ ಪಾರುಪತ್ತೇಗಾರ್ ರಮೇಶ್ ಭಟ್ ತಿಳಿಸಿದರು.

"ದಕ್ಷಿಣ ಕಾಶಿ " ಎಂದೇ ಪ್ರಖ್ಯಾತಿ ಪಡೆದರುವ ಕಾವೇರಿ ನದಿ ದಂಡೆಯಲ್ಲಿರುವ ರಾಮನಾಥಪುರದಲ್ಲಿ ಡಿಸೆಂಬರ್ 7ರಂದು ಶನಿವಾರ ಹಗಲು 12 ಗಂಟೆಗೆ ಶ್ರೀ ಪ್ರಸನ್ನ ಶ್ರೀ ಸುಬ್ರಮಣ್ಯಸ್ವಾಮಿ ಮಹಾ ರಥೋತ್ಸವ ಸಂಭ್ರಮದಿಂದ ಅದ್ಧೂರಿಯಾಗಿ ನಡೆಯಲಿದೆ. ಒಂದು ವಾರದಿಂದ ಪ್ರತಿ ದಿವಸ ಸಂಜೆ ಬೆಳಿಗ್ಗೆ ಬೆಳ್ಳಿ ಪಲ್ಲಕ್ಕಿ ಉತ್ಸವದ ಧಾರ್ಮಿಕ ಪೂಜಾ ಕೈಂಕರ್ಯ ಪ್ರಾರಂಭವಾಗಿವೆ.

ರಾಮನಾಥಪುರದಲ್ಲಿ ಎರಡು ತಿಂಗಳ ಕಾಲ ನಡೆಯುವ ಜಾತ್ರೆ ಹಿನ್ನೆಲೆಯಲ್ಲಿ ಈಗಾಗಲೇ ದೇವಸ್ಥಾನದ ಆವರಣದಲ್ಲಿ ಸಿಹಿ ತಿಂಡಿಗಳ ಗೂಡ ಅಂಗಡಿಗಳು ನಿರ್ಮಾಣವಾಗುತ್ತಿದ್ದು, ವರ್ತಕರು ತಿನಿಸುಗಳ ತಯಾರಿಕೆಯಲ್ಲಿ ತಲ್ಲಿರಲಿದ್ದಾರೆ. ಅಲ್ಲದೆ ಇನ್ನಿತರ ಮಾಲೀಕರು ವ್ಯಾಪಾರ, ವಹಿವಾಟು ನಡೆಸುವ ಸಲುವಾಗಿ ವಿವಿಧ ರೀತಿಯ ರಸ್ತೆಯ ಬದಿಯಲ್ಲಿ ಅಂಗಡಿಗಳನ್ನು ನಿರ್ಮಿಸುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಕ್ಕಳ ಆಟಿಕೆ ವ್ಯಾಪಾರಸ್ಥರು ಭರ್ಜರಿ ಅಂಗಡಿ ಮುಂಗಟ್ಟುಗಳನ್ನು ಸಿದ್ಧಗೊಳಿಸುತ್ತಿದ್ದಾರೆ.