ಸಾರಾಂಶ
ಶೃಂಗೇರಿ: ಶ್ರೀ ಶಾರದಾ ಪೀಠದ ಉಭಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥರು ಹಾಗೂ ಶ್ರೀ ವಿಧುಶೇಖರ ಭಾರತೀ ತೀರ್ಥರು ಭಾನುವಾರದಿಂದ ಚಾತುರ್ಮಾಸ ವ್ರತ ಕೈಗೊಂಡರು.
ಶೃಂಗೇರಿ: ಶ್ರೀ ಶಾರದಾ ಪೀಠದ ಉಭಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥರು ಹಾಗೂ ಶ್ರೀ ವಿಧುಶೇಖರ ಭಾರತೀ ತೀರ್ಥರು ಭಾನುವಾರದಿಂದ ಚಾತುರ್ಮಾಸ ವ್ರತ ಕೈಗೊಂಡರು.
ಜುಲೈ 21 ರಿಂದ ಸೆ.19 ರವರೆಗೆ ಚಾತುರ್ಮಾಸ ವ್ರತ ಕೈಗೊಳ್ಳಲಿದ್ದು, ಗುರುಪೂರ್ಣಿಮೆ ದಿನವಾದ ಭಾನುವಾರ ಶ್ರೀ ಮಠದ ನರಸಿಂಹವನದಲ್ಲಿನ ಶ್ರೀ ಗುರುನಿವಾಸದಲ್ಲಿ ವ್ಯಾಸಪೂಜೆ ಕೈಗೊಂಡು ಚಾತುರ್ಮಾಸ ಆರಂಬಿಸಿದರು. ಜಗದ್ಗುರು ಶ್ರೀ ಭಾರತೀ ತೀರ್ಥರು 50ನೇ ಚಾತುರ್ಮಾಸ, ಶ್ರೀ ವಿಧುಶೇಖರ ಭಾರತೀ ತೀರ್ಥರು 10ನೇ ಚಾತುರ್ಮಾಸ ವ್ರತ ಕೈಗೊಂಡರು.ಜುಲೈ 22 ರಂದು ಉತ್ತರ ಪೂಜೆ, ಆಗಸ್ಟ್ 5 ರಂದು ಶ್ರಾವಣ ಸೋಮವಾರ ಸಂಜೆ,ಆ.16 ರಂದು ಶ್ರೀ ವರಮಹಾಲಕ್ಷ್ಮಿ ವ್ರತ, ಆ 16 ರಂದು ಶ್ರೀ ಕೃಷ್ಣಜನ್ಮಾಷ್ಟಮಿ, ಸೆ 7 ರಂದು ವರಸಿದ್ದಿ ವಿನಾಯಕ ವ್ರತ, ಮಹಾಗಣಪತಿ ವ್ಯಾಕ್ಯಾರ್ಥ ಸಭೆ, ಸೆ 12 ರಂದು ಶ್ರೀ ಕೇದಾರೇಶ್ವರ ವ್ರತ, ಸೆ 14 ರಂದು ಶ್ರೀ ವಾಮನ ಜಯಂತಿ, ಸೆ 17 ರಂದು ಅನಂತಪದ್ಮನಾಭ ವ್ರತ ಹಾಗೂ ಉಮಾ ಮಹೇಶ್ವರ ವ್ರತ, ಸೆ 18 ರಂದು ಚಾತುರ್ಮಾಸ ವ್ರತ ಮುಕ್ತಾಯ ಹಾಗೂ ಸೆ 19 ರಂದು ಶ್ರೀ ಮಹಾಗಣಪತಿ ವ್ಯಾಕ್ಯಾರ್ಥ ಸಭೆ ಮುಕ್ತಾಯಗೊಳ್ಳಲಿದೆ.
21 ಶ್ರೀ ಚಿತ್ರ 4 -ಶೃಂಗೇರಿ ಶ್ರೀ ಶಾರದಾ ಪೀಠದ ಉಭಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥರು ಹಾಗೂ ವಿಧುಶೇಖರ ಭಾರತೀ ತೀರ್ಥರು ಚಾತುರ್ಮಾಸ ವ್ರತ ಕೈಗೊಂಡರು.