ಪ್ರತಿ ತಿಂಗಳು ಪಹಣಿ ಪರಿಶೀಲಿಸಿ: ಜೋಶಿ ಕರೆ

| Published : Nov 10 2024, 01:32 AM IST

ಸಾರಾಂಶ

ಈಗಿನ ಸರ್ಕಾರದಲ್ಲಿ ಯಾರದ್ದು ಯಾವ ಜಮೀನು ವಕ್ಫ್ ಆಸ್ತಿ ಎಂದಾಗುತ್ತದೋ ಗೊತ್ತಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಪ್ರತಿ ತಿಂಗಳು ತಮ್ಮ ಜಮೀನು, ನಿವೇಶನ, ಮನೆಯ ಪಹಣಿ ತೆಗೆದು ನೋಡುತ್ತಿರಬೇಕು.

ಹುಬ್ಬಳ್ಳಿ:

ಎಲ್ಲೇ ಆಗಲಿ ವಕ್ಫ್ ಆಸ್ತಿ ಮಾಡಲು ಬಂದರೆ ಅವರನ್ನು ಓಡಿಸಿ ಎಂದು ಜನರಿಗೆ ಕರೆ ಕೊಟ್ಟಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಈ ಕಾಂಗ್ರೆಸ್‌ ಸರ್ಕಾರ ಇರುವವರೆಗೂ ಪ್ರತಿ ತಿಂಗಳು ಪಹಣಿ ಪರಿಶೀಲನೆ ಮಾಡುತ್ತೀರಿ ಎಂದು ಸಲಹೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಯಾರೇ ಆಗಲಿ, ಯಾವುದೇ ವಕ್ಫ್ ಆಸ್ತಿ ಮಾಡಲೆಂದು ಬಂದರೆ ಅಲ್ಲಿನ ಜನರೆಲ್ಲಾ ಸೇರಿ ಓಡಿಸಬೇಕು ಎಂದು ಹೇಳಿದರು.

ಈಗಿನ ಸರ್ಕಾರದಲ್ಲಿ ಯಾರದ್ದು ಯಾವ ಜಮೀನು ವಕ್ಫ್ ಆಸ್ತಿ ಎಂದಾಗುತ್ತದೋ ಗೊತ್ತಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಪ್ರತಿ ತಿಂಗಳು ತಮ್ಮ ಜಮೀನು, ನಿವೇಶನ, ಮನೆಯ ಪಹಣಿ ತೆಗೆದು ನೋಡುತ್ತಿರಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೋಗೋವ ವರೆಗೆ ಮತ್ತು ಲೋಕಸಭೆಯಲ್ಲಿನ ವಕ್ಫ್ ತಿದ್ದುಪಡಿ ಮಸೂದೆ ಪಾಸಾಗುವರೆಗೂ ಆಗಾಗ ಎಲ್ಲರೂ ಪಹಣಿ ಪರಿಶೀಲಿಸುತ್ತಿರಬೇಕು ಎಂದು ಸಲಹೆ ನೀಡಿದರು. ಕಾಂಗ್ರೆಸ್‌ನವರು ಮಹಾನ್ ಕಳ್ಳರಿದ್ದಾರೆ. ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆ ತಲುಪಿದ್ದಾರೆ. ಯಾವುದೇ ಸಂದರ್ಭದಲ್ಲಿ ನಿಮ್ಮ ಆಸ್ತಿಯನ್ನು ವಕ್ಫ್ ಮೂಲಕ ಕಬಳಿಸಬಹುದು, ಎಚ್ಚರ ವಹಿಸಿ ಎಂದರು.