ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ಕೆಂಪುಗುಡ್ಡೆಯಿಂದ ಪಂಜಿನಡ್ಕಕ್ಕೆ ಹೋಗುವ ಮುಖ್ಯ ರಸ್ತೆಯ ಚಡಾವು ಬಳಿಯ ಬೈಕ್ ಗ್ಯಾರೇಜ್ ಮಾಧವ ಪೂಜಾರಿ ಎಂಬವರ ಮನೆಯ ಎದುರು ಭಾಗದಲ್ಲಿ ಶುಕ್ರವಾರ ಮಧ್ಯರಾತ್ರಿ ಚಿರತೆ ಪತ್ತೆಯಾಗಿದೆ. ಮಧ್ಯರಾತ್ರಿ 12.05 ರಸುಮಾರಿಗೆ ಚಿರತೆ ಮಾಧವ ಪೂಜಾರಿ ರವರ ಗೇಟ್ ಬಳಿ ಬಂದು ವಾಪಸ್ ಹೋಗುವ ದೃಶ್ಯ ಅವರ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೂಲ್ಕಿ: ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ಕೆಂಪುಗುಡ್ಡೆಯಿಂದ ಪಂಜಿನಡ್ಕಕ್ಕೆ ಹೋಗುವ ಮುಖ್ಯ ರಸ್ತೆಯ ಚಡಾವು ಬಳಿಯ ಬೈಕ್ ಗ್ಯಾರೇಜ್ ಮಾಧವ ಪೂಜಾರಿ ಎಂಬವರ ಮನೆಯ ಎದುರು ಭಾಗದಲ್ಲಿ ಶುಕ್ರವಾರ ಮಧ್ಯರಾತ್ರಿ ಚಿರತೆ ಪತ್ತೆಯಾಗಿದೆ. ಮಧ್ಯರಾತ್ರಿ 12.05 ರಸುಮಾರಿಗೆ ಚಿರತೆ ಮಾಧವ ಪೂಜಾರಿ ರವರ ಗೇಟ್ ಬಳಿ ಬಂದು ವಾಪಸ್ ಹೋಗುವ ದೃಶ್ಯ ಅವರ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಿರತೆ ಕಂಡುಬಂದ ಹಿನ್ನೆಲೆಯಲ್ಲಿ ಈ ಪರಿಸರದ ಜನ ಭಯಭೀತರಾಗಿದ್ದಾರೆ. ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಲ್ಲಿಗುಡ್ಡೆ ಸದರ್ನ್ ಎಸ್ಟೇಟ್ ಬಳಿ ಚಿರತೆಯನ್ನು ನಾಯಿಯ ಮೇಲೆ ದಾಳಿ ಮಾಡಿದ ಘಟನೆ ಕೂಡ ನಡೆದಿದ್ದು ಮೂಲ್ಕಿ .ತಾಲೂಕು ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಹಿಡಿಯಲು ಕಾರ್ಯಾಚರಣೆ ನಡೆಸಬೇಕು ಎಂದು ಮಾಧವ ಪೂಜಾರಿ ಒತ್ತಾಯಿಸಿದ್ದಾರೆ.