ಮೋದಿ ಪ್ರಧಾನಿಯಾದರೆ ದೇಶ ಬಿಡುವೆ ಎಂದಿದ್ದ ಗೌಡರು: ಚೆಲುವರಾಯಸ್ವಾಮಿ

| Published : Jan 25 2024, 02:01 AM IST

ಮೋದಿ ಪ್ರಧಾನಿಯಾದರೆ ದೇಶ ಬಿಡುವೆ ಎಂದಿದ್ದ ಗೌಡರು: ಚೆಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ದೇಶವನ್ನೇ ಬಿಡುವುದಾಗಿ ಹೇಳಿದ್ದ ದೇವೇಗೌಡರು ಇಂದು ಬಿಜೆಪಿ ಜೊತೆಯೇ ಮೈತ್ರಿ ಬೆಳೆಸುತ್ತಿರುವುದು ನೋಡಿ ಅತ್ಯಂತ ಬೇಸರವಾಗುತ್ತಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.

ಮಂಡ್ಯ/ಮದ್ದೂರು: ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎನ್ನುವಷ್ಟು ಕಠೋರವಾದ ಜಾತ್ಯತೀತ ಸಿದ್ಧಾಂತವನ್ನು ಪಾಲಿಸಿದ್ದ ದೇವೇಗೌಡರು ಇಂದು ಬಿಜೆಪಿಯನ್ನು ಬೆಂಲಿಸುತ್ತಿದ್ದಾರೆಂದರೆ ನಮಗೆ ನೋವಾಗುತ್ತಿದೆ.

ಅವರ ಇಂದಿನ ಸ್ಥಿತಿಗೆ ಮಕ್ಕಳೇ ಕಾರಣ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಆರೋಪಿಸಿದರು.

ದೇವೇಗೌಡರ ಇಂದಿನ ನಿಲುವು ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ. ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಹಲವು ದಶಕಗಳಿಂದ ರಾಜಕಾರಣ ಮಾಡಿದ ದೇವೇಗೌಡರನ್ನು ಆ ಪಕ್ಷದ ನಾಯಕರು, ಅವರ ಮಕ್ಕಳು ಈ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎಂದು ಛೇಡಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯ ನಾಯಕರು ದೇವೇಗೌಡರ ಕುಟುಂಬದವರನ್ನು ಪ್ರೀತಿಯಿಂದ ಕರೆಯುತ್ತಿದ್ದಾರೆ. ಅದನ್ನು ಬೇಡ ಎನ್ನಲು ನಾವ್ಯಾರು ಎಂದು ಪ್ರಶ್ನಿಸಿದರು.