ದುಗ್ಗಳ ಸದಾನಂದಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಗುರುವಾರ ಮಚ್ಚಾರಂಡ, ಪಳಂಗಿಯಂಡ ವಿರುದ್ಧ 5-1ರಿಂದ, ಪುಲ್ಲಂಗಡ, ಕರಿನೆರವಂಡ ವಿರುದ್ಧ 5-2ರಿಂದ, ಇಟ್ಟೀರ, ಪೊನ್ನೋಲ್ತಂಡ ವಿರುದ್ದ 5-0ರಿಂದ, ಚಿಯಕಪೂವಂಡ- ನೆರ್ಪಂಡ ವಿರುದ್ದ 4-0 ರಿಂದ ಜಯಭೇರಿ ಬಾರಿಸಿದವು. ಉದಿಯಂಡ ಮತ್ತು ಕೇಚೆಟ್ಟೀರ ತಂಡಗಳ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು 1-1 ಅಂತರದ ಸಮಬಲ ಸಾಧಿಸಿದವು. ನಂತರ ಟೈ ಬ್ರೇಕರ್ ನಲ್ಲಿ ಉದಿಯಂಡ 4-3 ಅಂತರದಿಂದ ಗೆಲುವು ಸಾಧಿಸಿತು. ಚೋಳಂಡ ಮತ್ತು ಕಾಯಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಗೋಲು ಗಳಿಸಲಿಲ್ಲ. ನಂತರ ಟೈ ಬ್ರೇಕರ್ ನಲ್ಲಿ ಕಾಯಪಂಡ 3-1ರಿಂದ ಗೆಲುವು ಪಡೆಯಿತು. ಚೆಂಬಾಂಡ ಮತ್ತು ನಂದೇಟಿರ ತಂಡಗಳ ನಡುವೆಯೂ ಸಮಬಲದ ಹೋರಾಟ ನಡೆದು ಎರಡೂ ತಂಡಗಳು ಗೋಲು ಗಳಿಸಲಿಲ್ಲ. ನಂತರ ಟೈ ಬ್ರೇಕರ್ ನಲ್ಲಿ ನಂದೇಟಿರ 3-2 ಗೋಲುಗಳಿಂದ ಗೆಲುವು ಸಾಧಿಸಿತು. ಕಳ್ಳಿಚಂಡ ಮತ್ತು ಅಲ್ತಂಡ ತಂಡಗಳ ನಡುವೆಯೂ ಬಿರುಸಿನ ಆಟ ನಡೆಯಿತು. ಎರಡೂ ತಂಡಗಳು ಗೋಲು ಗಳಿಸಲಿಲ್ಲ. ನಂತರ ಟೈ ಬ್ರೇಕರ್ ನಲ್ಲಿ ಅಲ್ತಂಡ ಕಳ್ಳಿಚಂಡ ವಿರುದ್ಧ 4-3 ಅಂತರದ ಗೆಲುವು ಸಾಧಿಸಿತು.

ಉಳಿದಂತೆ ನಾಗಂಡ ಕಬ್ಬಚ್ಚೀರ ವಿರುದ್ಧ 2-0ರಿಂದ, ತೀತರಮಾಡ ಬಲ್ಯಾಟಂಡ ವಿರುದ್ದ 3-0ರಿಂದ, ಚೀಯಕ್ಪೂವಂಡ ನೆರ್ಪಂಡ ವಿರುದ್ದ 4-0ರಿಂದ, ಮೇರಿಯಂಡ ಅಪ್ಪಾರಂಡ ವಿರುದ್ಧ 2-1ರಿಂದ, ಅರೆಯಡ ಬೊಳಕಾರಂಡ ವಿರುದ್ಧ 4-2ರಿಂದ, ತೇಲಪಂಡ ನಾಳಿಯಂಡ ವಿರುದ್ದ 3-0ರಿಂದ, ಪರದಂಡ ಮುದ್ದಂಡ ವಿರುದ್ದ 3-0ರಿಂದ, ಕಾಂಡಂಡ ಚಾಮೇರ ವಿರುದ್ಧ 4-0ರಿಂದ, ಮಂದೇಯಂಡ ಅವರೆಮಾದಂಡ ವಿರುದ್ದ 2-0ರಿಂದ, ಪಾಲೆಕಂಡ ಕಾಳೆಯಂಡ ವಿರುದ್ದ 2-1ರಿಂದ, ಮುಕ್ಕಾಟಿರ (ಮೂವತ್ತೋಕ್ಲು) ಪೊರ್ಕೊಂಡ ವಿರುದ್ಧ 2-1ರಿಂದ ಜಯ ಗಳಿಸಿದವು. ಐಚಂಡ ವಾಂಚಿರ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿತು.

ಲಖ್ನೌನಲ್ಲಿ ನೆಲೆಸಿರುವ ವಿಂಗ್ ಕಮಾಂಡರ್ ಕಳ್ಳಿಚಂಡ ಬೋಪಣ್ಣ ಚೇನಂಡ ಹಾಕಿ ಕಪ್‌ನಲ್ಲಿ ತಮ್ಮ ಕುಟುಂಬದ ತಂಡದ ಪರವಾಗಿ ಆಟವಾಡಿರುವುದು ವಿಶೇಷ. ಇಂದಿನ ಪಂದ್ಯಗಳುಮೈದಾನ 19. ಕ್ಕೆ ಬೊಳ್ಳಚಂಡ v/s ಮಲ್ಲಮಾಡ

11ಕ್ಕೆ ಬಾಚಿನಾಡಂಡ v/s ಕಾರೇರ


12ಕ್ಕೆ ಪಂದ್ಯಂಡ v/s ಆದೆಂಗಡ

1ಕ್ಕೆ ಪಾಲೆಂಗಡ v/s ಕುಮ್ಮಂಡ

2ಕ್ಕೆ ಸನ್ನುವಂಡ v/s ಮಲ್ಲೆಂಗಡ

3 ಕ್ಕೆ ಕುಂದೀರ v/s ನಾಪನೆರವಂಡ

3.30- ಕ್ಕೆ ಚೀರಂಡ v/s ಮೂಕಚಂಡ

ಮೈದಾನ 2.

9ಕ್ಕೆ ನಂಬಿಯಪಂಡ v/s ಅಂಜಪರವಂಡ

10 ಕ್ಕೆ ಬೊಟ್ಟೋಳಂಡ v/s ಕೊಣಿಯಂಡ

11ಕ್ಕೆ ಕೋದೆಂಗಡ v/s ಕಂಬೇಯಂಡ

12ಕ್ಕೆ ಬೊಳ್ಳೇಪಂಡ v/s ಚೊಟ್ಟೇರ

1ಕ್ಕೆ ಕೊಂಡೀರ v/s ಶಾಂತೆಯಂಡ

2ಕ್ಕೆ ಪಾಡೆಯಂಡ v/s ಮತ್ರಂಡ

3 ಕ್ಕೆ ಪುಲ್ಲೇರ v/s ಮುಕ್ಕಾಟಿರ (ಹರಿಹರ) ಮೈದಾನ 39ಕ್ಕೆ ಕೈಬುಲಿರ v/s ಮುಕ್ಕಾಟಿರ (ಬೇತ್ರಿ)

10 ಕ್ಕೆ ಕಡೇಮಾಡ v/s ಕಾಳಿಮಡ

11ಕ್ಕೆ ಬೊಟ್ಟಂಗಡ v/s ಚೇಂದಂಡ

12ಕ್ಕೆ ಮುಕ್ಕಾಟಿರ(ಕಡಗದಾಳು) v/s ಮಾಳೇಟಿರ (ಕೆದಮಳ್ಳೂರ್

1. ಕ್ಕೆ ಪಟ್ಟಚೆರುವಾಳಂಡ v/s ಮೂಡೇರ

2. ಕ್ಕೆ ಅಮ್ಮಂಡ v/s ಮೇಕೇರಿರ

3. ಕ್ಕೆ ಮುಕ್ಕಾಟಿರ(ಬೋಂದ)