ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾನುವಾರ ಚೇನಂಡ ಮತ್ತು ಮಂದನೆರವಂಡ ತಂಡಗಳ ನಡುವಿನ ಪಂದ್ಯ ವೀಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು.
ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾನುವಾರ ಚೇನಂಡ ಮತ್ತು ಮಂದನೆರವಂಡ ತಂಡಗಳ ನಡುವಿನ ಪಂದ್ಯ ವೀಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು.
ಚೇನಂಡ ಮಂದನೆರವಂಡ ವಿರುದ್ಧ 5-0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಚೇನಂಡ ತಂಡದ ಆಟಗಾರರಾದ ಧ್ಯಾನ್ ಬೆಳ್ಳಿಯಪ್ಪ-2, ಸಚಿನ್ ಬೆಳ್ಳಿಯಪ್ಪ-1, ಚಮನ್ -1, ಮತ್ತು ದಿನೇಶ್ ತಿಮ್ಮಯ್ಯ-1 ಗೋಲು ದಾಖಲಿಸಿ ತಂಡಕ್ಕೆ ಭರ್ಜರಿ ಜಯ ತಂದು ಕೊಟ್ಟರು. ಜೇನಂಡ ತಂಡದ ಬಿರುಸಿನ ಆಟದ ಮುಂದೆ ಮಂದನೆರವಂಡ ತಂಡದ ಆಟಗಾರರು ಪ್ರಬಲ ಹೋರಾಟ ನಡೆಸಿದರೂ ಯಾವುದೇ ಗೋಲು ಗಳಿಸಲು ವಿಫಲರಾದರು.ಮನೆಯ ಪಂಡ ಮತ್ತು ಮಾಪಂಗಡ ತಂಡಗಳ ನಡುವೆ ನಡೆದ ಪಂದ್ಯವು ರೋಚಕವಾಗಿತ್ತು. ಎರಡು ತಂಡಗಳು ನಿಗದಿತ ಅವಧಿಯಲ್ಲಿ 1-1ಅಂತರದ ಮುನ್ನಡೆ ಸಾಧಿಸಿದವು ನಂತರ ಟೈ ಬ್ರೇಕರ್ ನಲ್ಲಿ ಮನೆಯ ಪಂಡ ತಂಡ ಮಾಪಂಗಡ ವಿರುದ್ಧ 3-4 ಅಂತರದಿಂದ ಜಯ ಸಾಧಿಸಿತು.ಉಳಿದ ಪಂದ್ಯಗಳಲ್ಲಿ ಕೈಬುಲಿನ ಬೋಳ್ಳೆರ ವಿರುದ್ಧ 1-0 ಅಂತರದಿಂದ, ಅಚ್ಚಪಂಡ ಪೊನ್ನಚಂಡ ವಿರುದ್ಧ 3 -2 ಅಂತರದಿಂದ, ಕಂಬಿರಂಡ ಅಲ್ಲುಮಾಡ ವಿರುದ್ಧ 5-0 ಅಂತರದಿಂದ, ಕೊಂಡಿರ ಬೇರೆರ ವಿರುದ್ಧ 2-1ರಿಂದ, ಮುಕ್ಕಾಟಿರ ( ಕಡಗದಾಳು ) ಬಾರಿಯಂಡ ವಿರುದ್ಧ 3-2 ರಿಂದ , ಅಲಮೇಂಗಡ ಕರ್ತ ಮಾಡ ವಿರುದ್ಧ 5-0 ಅಂತರದಿಂದ , ಮಾಲೇಟಿರ(ಕೆದಮುಳ್ಳೂರು ) ಅಲ್ಮಚಂಡ ವಿರುದ್ಧ 6-0 ಅಂತರದಿಂದ, ಚಂದುರ ವಲ್ಲಂಡ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿ ಮುನ್ನಡೆ ಗಳಿಸಿತು .ಕುಟ್ಟಂಡ (ಅಮ್ಮತ್ತಿ) ಮತ್ತು ಕರ್ತಮಾಡ (ಬಿರುನಾಣಿ) ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಎರಡೂ ತಂಡಗಳು ನಿಗದಿತ ಅವಧಿಯಲ್ಲಿ ಯಾವುದೇ ಗೋಲು ಗಳಿಸಲಿಲ್ಲ. ನಂತರ ಟೈ ಬ್ರೇಕರ್ ನಲ್ಲಿ ಕರ್ತಮಾಡ (ಬಿರುನಾಣಿ) ತಂಡವು 4-3 ಅಂತರದಿಂದ ಗೆಲುವು ಸಾಧಿಸಿತು.ನಾಯಕಂಡ ಮತ್ತು ಮಲ್ಚಿರ ತಂಡಗಳು ಗೆಲುವಿಗಾಗಿ ಸೆಣೆಸಾಟ ನಡೆಸಿದವು. ಎರಡೂ ತಂಡಗಳು 2-2 ಅಂತರದ ಸಮಬಲ ಸಾಧಿಸಿದವು. ನಂತರ ಟೈ ಬ್ರೇಕರ್ ನಲ್ಲಿ ನಾಯಕಂಡ 5 -4 ಅಂತರದಿಂದ ಮಲ್ಟಿರ ವಿರುದ್ಧ ಗೆಲುವು ಸಾಧಿಸಿತು. ಚೊಟ್ಟೆಯಂಡಮಾಡ ಮತ್ತು ಚೆರಿಯಪಂಡ ತಂಡಗಳ ನಡುವೆಯೂ ಸಮಬಲದ ಹೋರಾಟ ನಡೆಯಿತು. ಎರಡೂ ತಂಡಗಳು 1-1 ಗೋಲು ಗಳಿಸಿದವು .ನಂತರ ಟೈ ಬ್ರೇಕರ್ ನಲ್ಲಿ ಚೊಟ್ಟೆಯಂಡಮಾಡ ಗೆಲುವು ಸಾಧಿಸಿತು ಮಳವಂಡ ಮತ್ತು ಬೊಳ್ಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಳವಂಡ 2-1 ರಿಂದ ಗೆಲವು ಸಾಧಿಸಿತು.ಇಂದಿನ ಪಂದ್ಯಗಳು:
ಮೈದಾನ 18.30 ಕ್ಕೆ ನೆರವಂಡ v/s ಕಾಂಗೀರ 9.30 ಕ್ಕೆ ಮಾಚಿಮಂಡ v/s ಕೆಟೋಳಿರ10.30 ಕ್ಕೆ ಅಪ್ಪುಮಣಿಯಂಡ v/s ಅಪ್ಪನೆರವಂಡ 11.30 ಕ್ಕೆ ಚೇಂದ್ರಿಮಾಡ(ಬಲ್ಯಮನೆ) v/s ನಂಬುಡುಮಾಡ12.30 ಕ್ಕೆ ಮೇಚಿಯಂಡ v/s ಕೋಡಿರ 1.30ಕ್ಕೆ ಬಿದ್ದಂಡ v/s ಕೈಪಟ್ಟೀರ
ಮೈದಾನ 29 ಕ್ಕೆ ಕೋದಂಡ v/s ಮೂವೇರ 10ಕ್ಕೆ ಬಟ್ಟೀರ v/s ಮೇಚಂಡ 11ಕ್ಕೆ ಚೆರುವಾಳಂಡ v/s ಮಚ್ಚಮಾಡ 12ಕ್ಕೆ ಪಟ್ಟಡ v/s ಬಲ್ಲಚಂಡ 1ಕ್ಕೆ ಉದ್ದಿನಾಡಂಡ v/s ಅಮ್ಮಾಟಂಡ 2ಕ್ಕೆ ಕರವಟ್ಟೀರ v/s ಚೋಕಿರ