ಶೃಂಗೇರಿಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಹಿಂದಿನಿಂದಲೂ ಶೃಂಗೇರಿ ಪೀಠದ ನಂಟಿದೆ. ಗೌಡರ ಪತ್ನಿ ಚೆನ್ನಮ್ಮ ಶ್ರೀ ಶಾರದಾ ಪೀಠದ ಅನನ್ಯ ಭಕ್ತೆ.ದೇವೇಗೌಡರು ಶೃಂಗೇರಿ ಪೀಠಕ್ಕೆ ಆಗಾಗ ಭೇಟಿ ನೀಡಿ,ಶ್ರೀ ಶಾರದಾಂಬೆ ದರ್ಶನ, ಜಗದ್ಗುರುಗಳ ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದರು. ಆಗ ಜೊತೆಯಲ್ಲಿ ಚೆನ್ನಮ್ಮ ಕೂಡ ಇರುತ್ತಿದ್ದರು.
ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಶೃಂಗೇರಿ ಪೀಠದ ನಂಟು
ಕನ್ನಡಪ್ರಭ ವಾರ್ತೆ ಶೃಂಗೇರಿಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಹಿಂದಿನಿಂದಲೂ ಶೃಂಗೇರಿ ಪೀಠದ ನಂಟಿದೆ. ಗೌಡರ ಪತ್ನಿ ಚೆನ್ನಮ್ಮ ಶ್ರೀ ಶಾರದಾ ಪೀಠದ ಅನನ್ಯ ಭಕ್ತೆ.ದೇವೇಗೌಡರು ಶೃಂಗೇರಿ ಪೀಠಕ್ಕೆ ಆಗಾಗ ಭೇಟಿ ನೀಡಿ,ಶ್ರೀ ಶಾರದಾಂಬೆ ದರ್ಶನ, ಜಗದ್ಗುರುಗಳ ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದರು. ಆಗ ಜೊತೆಯಲ್ಲಿ ಚೆನ್ನಮ್ಮ ಕೂಡ ಇರುತ್ತಿದ್ದರು.
2018 ರ ವಿಧಾನಸಭೆ ಚುನಾವಣೆಗೆ ಮೊದಲು ಗೌಡರ ಕುಟುಂಬ ಶೃಂಗೇರಿಯಲ್ಲಿ ಜನವರಿಯಲ್ಲಿ ಅತಿರುದ್ರ ಮಹಾಯಾಗ ನಡೆಸಿತ್ತು. ಸುಮಾರು 11 ದಿನಗಳ ಕಾಲ ಈ ಮಹಾಯಾಗ ನಡೆದು ಜನವರಿ 14 ರ ಸಂಕ್ರಾಂತಿಯಂದು ಪೂರ್ಣಾಹುತಿ ನೆರವೇರಿತ್ತು. ಆವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪತ್ನಿ ಚೆನ್ನಮ್ಮ, ಮಾಜಿ ಸಿ ಎಂ ಕುಮಾರಸ್ವಾಮಿ,ಅನಿತಾ ಕುಮಾರ ಸ್ವಾಮಿ,ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ,ನಿಖಿಲ್ ಕುಮಾರ ಸ್ವಾಮಿ, ಪ್ರಜ್ವಲ್ ರೇವಣ್ಣ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.ದೇವೇಗೌಡರೊಂದಿಗೆ ಚೆನ್ನಮ್ಮ ಶ್ರೀ ಶಾರದಾಂಬೆ ದೇಗುಲದಲ್ಲಿ ಶ್ರೀ ಶಾರದಾಂಬೆ ದರ್ಶನ, ಶ್ರೀ ಶಂಕರಾಚಾರ್ಯ , ಶ್ರೀ ತೋರಣಗಣಪತಿ, ಶ್ರೀ ಶಕ್ತಿಗಣಪತಿ,ಶ್ರೀ ವಿದ್ಯಾಶಂಕರ,ಶ್ರೀ ತೋರಣಗಣಪತಿ ದೇವಾಲಯಗಳಿಗೂ ಭೇಟಿ ನೀಡಿದ್ದರು. ಪಟ್ಟಣದ ಬೆಟ್ಟದ ಶ್ರೀ ಮಲಹಾನಿಕರೇಶ್ವರ ದೇವಾಲಯ, ಪಟ್ಟಣದ ಶ್ರೀ ಕಾಳಿಕಾಂಬಾ ದೇವಾಲಯ, ವಿದ್ಯಾರಣ್ಯಪುರ ಪಂಚಾಯಿತಿ ದುರ್ಗಾದೇವಸ್ಥಾನದ ಶ್ರೀ ಹರಾವರಿ ದುರ್ಬಾಂಬಾ ದೇವಾಲಯಗಳಿಗೂ ತೆರಳಿ ದೇವಿ ದರ್ಶನ ಪಡೆದಿದ್ದರು.
2020 ರಲ್ಲಿ ಗೌಡರ ಕುಟುಂಬ ಶೃಂಗೇರಿಯಲ್ಲಿ ಮತ್ತೆ ಸಹಸ್ರ ಚಂಡಿಕಾಯಾಗ ನಡೆಸಿದಾಗಲೂ ಪೂರ್ಣಾಹುತಿ ಸಂದರ್ಭದಲ್ಲಿ ಚೆನ್ನಮ್ಮ ಅವರು ಭಾಗಿಯಾಗಿದ್ದರು .ಈ ಸಂದರ್ಭದಲ್ಲೂ ಶ್ರೀ ಶಾರದಾಂಬೆ, ಸುತ್ತ ಮುತ್ತಲ ಎಲ್ಲಾ ದೇವಾಲಯಗಳಿಗೂ ತೆರಳಿ ದೇವರ ದರ್ಶನ ಪಡೆದಿದ್ದರು. ಗೌಡರು ಶೃಂಗೇರಿಗೆ ಬಂದಾಗ ಕೆಲವೊಮ್ಮೆ ಚೆನ್ನಮ್ಮ ಕೂಡ ಇರುತ್ತಿದ್ದರು. ದೇಗುಲಗಳಲ್ಲಿ ದೇವರ ದರ್ಶನ ವೇಳೆಯಲ್ಲಿ ಗೌಡರಿಗಿಂತ ಮುಂದಿರುತ್ತಿದ್ದರು.19 ಶ್ರೀ ಚಿತ್ರ 5-
ಶೃಂಗೇರಿ ಶಾರದಾ ಪೀಠಕ್ಕೆ ದೇವೆಗೌಡರು ಭೇಟಿ ನೀಡಿದ ಸಂದರ್ಭದಲ್ಲಿ ಜೊತೆಗೆ ಚೆನ್ನಮ್ಮ(ಸಂಗ್ರಹ ಚಿತ್ರ)19 ಶ್ರೀ ಚಿತ್ರ 6-
ಶೃಂಗೇರಿಯಲ್ಲಿ ಗೌಡರ ಕುಟುಂಬ 2018 ರಲ್ಲಿ ಅತಿರುದ್ರ ಮಹಾಯಾಗ ನಡೆಸಿದ ಸಂದರ್ಭದಲ್ಲಿ ನಡೆದ ಪೂರ್ಣಾಹುತಿಯಲ್ಲಿ ಕುಟುಂಬದೊಂದಿಗೆ ಚೆನ್ನಮ್ಮ.19 ಶ್ರೀ ಚಿತ್ರ 7