ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಕೈಗಡ ಸಾಲ ಪಡೆದು ಮರುಪಾವತಿಗಾಗಿ ನೀಡಿದ್ದ ಚೆಕ್ ಬೌನ್ಸ್ ಆದ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಬನಹಟ್ಟಿ ನ್ಯಾಯಾಲಯವು ಆರೋಪಿಗೆ ₹2.10 ಲಕ್ಷ ದಂಡ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ 6 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕೈಗಡ ಸಾಲ ಪಡೆದು ಮರುಪಾವತಿಗಾಗಿ ನೀಡಿದ್ದ ಚೆಕ್ ಬೌನ್ಸ್ ಆದ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಬನಹಟ್ಟಿ ನ್ಯಾಯಾಲಯವು ಆರೋಪಿಗೆ ₹2.10 ಲಕ್ಷ ದಂಡ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ 6 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಹನಗಂಡಿ ಗ್ರಾಮದ ದಯಾನಂದ ಸಂಗಳಿ ಅವರಿಂದ ತೇರದಾಳದ ವಿಶ್ವನಾಥ ಸದಾಶಿವ ಹಟ್ಟೆನ್ನವರ ಅವರು 30-06-2019ರಂದು ₹2 ಲಕ್ಷ ಕೈಗಡ ಸಾಲ ಪಡೆದಿದ್ದರು. ಸಾಲದ ಹಣವನ್ನು ಮರುಪಾವತಿಸುವ ಭರವಸೆಯೊಂದಿಗೆ ನೀಡಿದ್ದ ಚೆಕ್ ಬೌನ್ಸ್ ಆದ ಹಿನ್ನೆಲೆಯಲ್ಲಿ, ದಯಾನಂದ ಸಂಗಳಿ ಅವರು ಬನಹಟ್ಟಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಕುರಿತು ಸನ್ 2021ರಲ್ಲಿ ಸಿ.ಸಿ. ನಂ.225/2021ರಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, 02-09-2026ರಂದು ಆರೋಪ ಸಾಬೀತಾಗಿದೆಯೆಂದು ತೀರ್ಮಾನಿಸಿ, ಆರೋಪಿಗೆ ₹2.10 ಲಕ್ಷ ದಂಡ ವಿಧಿಸಿದೆ. ವಿಧಿಸಲಾದ ದಂಡದ ಮೊತ್ತದಲ್ಲಿ ₹2 ಲಕ್ಷ ಗಳನ್ನು ದೂರುದಾರರಿಗೆ ಪರಿಹಾರವಾಗಿ ಹಾಗೂ ₹10 ಸಾವಿರಗಳನ್ನು ಸರ್ಕಾರಕ್ಕೆ ದಂಡವಾಗಿ ಪಾವತಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ದೂರುದಾರರ ಪರವಾಗಿ ನ್ಯಾಯವಾದಿ ಬಸವರಾಜ ಪುಟಾಣಿ ಅವರು ವಕಾಲತ್ತು ವಹಿಸಿದ್ದರು.