ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ ವತಿಯಿಂದ ಕೌಶಲ್ಯ ತರಬೇತಿ ಕಾರ್ಯಾಗಾರ ನಡೆಯಿತು. ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ಕಾರುಗುಂದ ಗೌಡ ಸಮಾಜದಲ್ಲಿ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರು ವಿವಿಧ ರೀತಿಯ ಕರಕುಶಲ ನೇಯ್ಗೆ ಮುಂತಾದ ತರಬೇತಿಯನ್ನು ಸಾಂಕೇತಿಕವಾಗಿ ನೀಡಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ ವತಿಯಿಂದ ಕೌಶಲ್ಯ ತರಬೇತಿ ಕಾರ್ಯಾಗಾರ ನಡೆಯಿತು. ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ಕಾರುಗುಂದ ಗೌಡ ಸಮಾಜದಲ್ಲಿ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರು ವಿವಿಧ ರೀತಿಯ ಕರಕುಶಲ ನೇಯ್ಗೆ ಮುಂತಾದ ತರಬೇತಿಯನ್ನು ಸಾಂಕೇತಿಕವಾಗಿ ನೀಡಿದರು.ತುಳಸಿ ಮೋಹನ್ ಮಾತನಾಡಿ, ಮುಂದಿನ ದಿನಗಳಲ್ಲಿ ಒಕ್ಕೂಟದ ಸದಸ್ಯರು, ಸ್ಥಳೀಯರು ಹಾಗೂ ಕಲಾಸಕ್ತರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ರೀತಿಯ ತರಬೇತಿ ನೀಡಲಾಗುವುದು ಹಾಗೂ ಮಹಿಳಾ ಒಕ್ಕೂಟ ವತಿಯಿಂದ ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅನುಕೂಲವಾಗುವಂತೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಕೊಡಪಾಲು ತೀರ್ಥ ಗಣಪತಿ, ಕೇಕಡ ಪೂಜಾ ನಾಗೇಂದ್ರ, ಕೂಡ ಕಂಡಿಸೋನಿ, ಸುದೀಪ್, ಬೈಚನಾ, ಸ್ವಾತಿ ಮಂದಪ್ಪ ವೈರ್ ಬ್ಯಾಗ್ ಹೆಣೆಯುವುದು, ಉಲ್ಲನ್ ನಿಂದ ಶಾಲು, ಮಫ್ಲರ್, ಕೊಡೆ, ಗ್ಲೌಸ್ ಇತ್ಯಾದಿಗಳನ್ನು ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.ಒಕ್ಕೂಟದ ಸದಸ್ಯರು ಹಾಗೂ ಕಾರುಗುಂದ ಗೌಡ ಯುವ ವೇದಿಕೆ ಅಧ್ಯಕ್ಷ ಪ್ರದೀಪ್ ಪಾರೆಮಜಲು, ಉಪಾಧ್ಯಕ್ಷ ದಾಯನ ಪುರ್ಸಿನ್ , ಕಾರ್ಯದರ್ಶಿ ಕೇಟೋಳಿ ಯಶವಂತ್ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಣ್ಣೆಚ್ಚಿ ಬೋಜಮ್ಮ ಕುಶಾಲಪ್ಪ ಪ್ರಾರ್ಥಿಸಿ, ಕೂಡಕಂಡಿ ಸವಿತಾ ಬಾಪೂಜಿ ಸರ್ವರನ್ನು ಸ್ವಾಗತಿಸಿದರು. ಪೊಡನೋಳನ ಪವಿತ್ರ ಗಿರೀಶ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ ವಂದಿಸಿದರು.