ಮೀಟರ್ ನಾಟ್ ರೇಕಾರ್ಡಿಂಗ್ ಪ್ರಕರಣ: ನಾಲ್ಕೂವರೆ ವರ್ಷದ ಬಳಿಕ ಹಣ ಪಾವತಿಗೆ ಚೆಸ್ಕಾಂ ನೋಟಿಸ್

| Published : Jun 12 2024, 12:30 AM IST

ಮೀಟರ್ ನಾಟ್ ರೇಕಾರ್ಡಿಂಗ್ ಪ್ರಕರಣ: ನಾಲ್ಕೂವರೆ ವರ್ಷದ ಬಳಿಕ ಹಣ ಪಾವತಿಗೆ ಚೆಸ್ಕಾಂ ನೋಟಿಸ್
Share this Article
  • FB
  • TW
  • Linkdin
  • Email

ಸಾರಾಂಶ

ಮೀಟರ್ ನಾಟ್ ರೇಕಾರ್ಡಿಂಗ್ ಪ್ರಕರಣದಲ್ಲಿ ಬಾಕಿ ವಸೂಲಿಗೆ ಕೊಳ್ಳೇಗಾಲ ಚೆಸ್ಕಾಂ ಇಲಾಖೆ ನಾಲ್ಕೂವರೆ ವರ್ಷದ ಬಳಿಕ ಎಚ್ಚೆತ್ತಿದ್ದು ಇಬ್ಬರು ಗ್ರಾಹಕರಿಗೆ 2019ರ ಜನವರಿಯಿಂದ ಡಿಸೆಂಬರ್ ತನಕ ವ್ಯತ್ಯಾಸವಾಗಿದ್ದು ಹಣ ಪಾವತಿಸುವಂತೆ ನೋಟಿಸ್ ನೀಡುವ ಮೂಲಕ ನಗೆಪಾಟಲಿಗೀಡಾಗಿದೆ.

ಮೀಟರ್ ಸ್ಥಗಿತಗೊಂಡ 8ದಿನದೊಳಗೆ ಮೀಟರ್ ಬದಲಿಸಿ ಹಳೇ ಬಾಕಿ ಪಡೆಯಬೇಕೆಂಬ ನಿಯಮ ಉಲ್ಲಂಘನೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮೀಟರ್ ನಾಟ್ ರೇಕಾರ್ಡಿಂಗ್ ಪ್ರಕರಣದಲ್ಲಿ ಬಾಕಿ ವಸೂಲಿಗೆ ಕೊಳ್ಳೇಗಾಲ ಚೆಸ್ಕಾಂ ಇಲಾಖೆ ನಾಲ್ಕೂವರೆ ವರ್ಷದ ಬಳಿಕ ಎಚ್ಚೆತ್ತಿದ್ದುಇಬ್ಬರು ಗ್ರಾಹಕರಿಗೆ 2019ರ ಜನವರಿಯಿಂದ ಡಿಸೆಂಬರ್ ತನಕ ವ್ಯತ್ಯಾಸವಾಗಿದ್ದು ಹಣ ಪಾವತಿಸುವಂತೆ ನೋಟಿಸ್ ನೀಡುವ ಮೂಲಕ ನಗೆಪಾಟಲಿಗೀಡಾಗಿದೆ.ಕೊಳ್ಳೇಗಾಲ ಪಟ್ಟಣದ ವಿದ್ಯುತ್ ಬಳಕೆದಾರ ರಾಜು ಅವರಿಗೆ ಜನವರಿ 2019ರಿಂದ ಡಿಸೆಂಬರ್ ತನಕ ಆರ್ ಆರ್ ಸಂಖ್ಯೆ 8226487806ನಲ್ಲಿ ಆಡಿಟ್ ಶಾರ್ಟ್‌ ಕ್ಲೈಮ್ ಮೊತ್ತ ಜನವರಿ 2019ರಿಂದ ಡಿಸೆಂಬರ್ 2019ರತನಕ 3893 ರು. ಗಳು ಬಾಕಿ ಇದ್ದು ನೋಟಿಸ್ ಪಡೆದ 30 ದಿನದೊಳಗೆ ಪಾವತಿಗೆ ಕ್ರಮವಹಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ನೀಡಿರುವ ನೋಟಿಸ್ ನಲ್ಲಿ ಎಚ್ಚರಿಸಿದ್ದಾರೆ.ಅದೇ ರೀತಿಯಲ್ಲಿ ಸುರೇಂದ್ರ ಗುಪ್ತ ಎಂಬ ಮತ್ತೋರ್ವ ಗ್ರಾಹಕರಿಗೂ ಸಹ ಎಇಎಚ್ ಸಂಖ್ಯೆ 1735 ಆರ್ ಆರ್ ಸಂಖ್ಯೆಯಲ್ಲಿ ಜನವರಿ 2019ರಿಂದ ಡಿಸೆಂಬರ್ 2019ರತನಕ 9893 ರು.ಗಳ ಶಾರ್ಟ್‌ ಕ್ಲೈಮ್ ಆಗಿದ್ದು ತಂತ್ರಾಂಶದಲ್ಲಿ ಬಳಕೆ ಹಿನ್ನೆಲೆ ನಿಗಮದ ನಿಯಮಾನುಸಾರ ಬಾಕಿ ಮೊತ್ತವನ್ನು 1ತಿಂಗಳೊಳಗೆ ಪಾವತಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ಕ್ರಮಕೈಗೊಳ್ಳುವ ಎಚ್ಚರಿಕೆಯ ನೋಟಿಸ್ ನೀಡಲಾಗಿದೆ. ಇಬ್ಬರು ಗ್ರಾಹಕರಿಗೂ ಆಡಿಟ್ ಶಾರ್ಟ್‌ ಕ್ಲೈಮ್ ಎಂದು ಉಲ್ಲೇಖಿಸುವ ಮೂಲಕ ನಾಲ್ಕೂವರೆ ವಷ೯ದ ಬಳಿಕ ಬಾಕಿ ಪಾವತಿಗೆ ಸೂಚಿಸಿರುವುದು ನಾನಾ ಚರ್ಚೆಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಈ ಬೆಳವಣಿಗೆಯ ಖಂಡಿಸಿ ವಿದ್ಯುತ್ ಟೌನ್ ಬಳಕೆದಾರರ ಸಂಘಕ್ಕೆ ಗ್ರಾಹಕರು ಸಹ ದೂರು ನೀಡಿದ್ದಾರೆ.

ವಿದ್ಯುತ್ ಬಳಕೆದಾರರ ಸಂಘ ಖಂಡನೆ, ದೂರು ನಾಲ್ಕೂವರೆ ವರ್ಷದ ಬಳಿಕ ಇಬ್ಬರು ಗ್ರಾಹಕರಿಗೆ ಶಾರ್ಟ್‌ ಕ್ಲೈಮ್ ಎಂದು ಹಳೇ ಬಾಕಿ ನೀಡಿ ಎಂದು ನೋಟಿಸ್‌ ನೀಡಿರುವುದು ಹಾಸ್ಯಾಸ್ಪದ ಮಾತ್ರವಲ್ಲ, ಇದರಲ್ಲಿ ಚೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಬೇಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದು ವಿದ್ಯುತ್ ಬಳಕೆದಾರರ ಸಂಘದ ಕಾರ್ಯದರ್ಶಿ ಸುಂದರರಾಜು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ಅವರು ಹಿರಿಯ ಅಧಿಕಾರಿಗಳಿಗೂ ಲಿಖಿತ ದೂರು ನೀಡಿದ್ದು ಮೀಟರ್ ದುರಸ್ತಿಗೊಂಡರೆ (ನಾಟ್ ರೇಕಾರ್ಡಿಂಗ್) 1 ವಾರದೊಳಗೆ ಗ್ರಾಹಕರ ಮೀಟರ್ ಬದಲಿಸಿ ಹೊಸ ಮೀಟರ್ ಅಳವಡಿಸಬೇಕು, ವ್ಯತ್ಯಾಸದ ಹಣವನ್ನು ಅಂದಾಜು ಮೊತ್ತದಲ್ಲಿ 6 ತಿಂಗಳೊಳಗೆ ಪಡೆಯಬೇಕು, ಕೆಇಅರ್ ಸಿ 56-2 ನಿಯಮದ ಪ್ರಕಾರ 2 ವರುಷವಾದ ಬಳಿಕ ಹಳೆ ಬಾಕಿ ಹಣ ಕೇಳುವಂತಿಲ್ಲ, ಹೀಗಿದ್ದರೂ ನಾಲ್ಕೂವರೆ ವಷ೯ದ ಬಳಿಕ ನೊಟೀಸ್ ನೀಡಿರುವುದು ಸರಿಯಲ್ಲ, ಈ ಹಿನ್ನೆಲೆ ಹಿರಿಯ ಅಧಿಕಾರಿಗಳು ಪರಿಶೀಲಿಸಿ ಕ್ರಮವಹಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ