ವರದಿಗಾರರ ಕೂಟದಲ್ಲಿ ಚೆಸ್, ಕೇರಂ ಸ್ಪರ್ಧೆಗಳು

| Published : Sep 11 2024, 01:04 AM IST

ಸಾರಾಂಶ

ಗಣೇಶ್ ಚತುರ್ಥಿ ಹಿನ್ನಲೆ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಆಯೋಜನೆ ಮಾಡಿದ್ದ ''ಮನರಂಜನೆಗಾಗಿ ಆಟ''ಕ್ಕೆ ತೆರೆಬಿದ್ದಿದೆ. ಚೆಸ್ ಮತ್ತು ಕೇರಂ ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಿದ್ದು, ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಪಟ್ಟರು.

- ಚೆಸ್‌-ಅನಿಲ್ ಪ್ರಥಮ, ಕೇರಂ-ಮಧು ನಾಗರಾಜ, ಯೋಗರಾಜ್ ತಂಡ ಪ್ರಥಮ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ ಗಣೇಶ್ ಚತುರ್ಥಿ ಹಿನ್ನಲೆ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಆಯೋಜನೆ ಮಾಡಿದ್ದ ''''ಮನರಂಜನೆಗಾಗಿ ಆಟ''''ಕ್ಕೆ ತೆರೆಬಿದ್ದಿದೆ. ಚೆಸ್ ಮತ್ತು ಕೇರಂ ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಿದ್ದು, ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಪಟ್ಟರು.

ಮನರಂಜನೆಗಾಗಿ ಆಟಕ್ಕೆ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್, ಹಿರಿಯ ವರದಿಗಾರ ತಾರಾನಾಥ್ ಕೇರಂ ಆಟ ಆಡುವ ಮೂಲಕ ಕ್ರೀಡೆಗೆ ಚಾಲನೆ ನೀಡಿದರು.

ಚೇಸ್ ಸ್ಪರ್ಧೆಯಲ್ಲಿ ಅನಿಲ್ ಕುಮಾರ ಪ್ರಥಮ ಸ್ಥಾನ, ಮಲ್ಲಿಕಾರ್ಜುನ ಕೈದಾಳೆ ದ್ವಿತೀಯ, ನಿಂಗಪ್ಪ ತೃತೀಯ ಸ್ಥಾನ ಪಡೆದರು. ಕೇರಂ ಸ್ಪರ್ಧೆಯಲ್ಲಿ ಮಧು ನಾಗರಾಜ್ ಕುಂದವಾಡ, ಯೋಗರಾಜ್ ತಂಡ ಪ್ರಥಮ ಸ್ಥಾನ, ಡಾ.ಮಂಜುನಾಥ ಮತ್ತು ಮಲ್ಲಿಕಾರ್ಜುನ ಕೈದಾಳೆ ದ್ವೀತಿಯ ಸ್ಥಾನ, ಸಂಜು, ಮಹಾದೇವ ಅವರು ತೃತೀಯ ಸ್ಥಾನ ಪಡೆದರು.

ಈ ಸಂದರ್ಭ ಕೂಟದ ಸುರೇಶ್ ಕುಣಿಬೆಳಕೆರೆ, ಕೆ.ಜೈಮುನಿ, ಪವನ್ ಐರಣಿ, ಮಹೇಶ್ ಕಾಶಿಪುರ, ಅಣ್ಣಪ್ಪ ಬಿ., ಪುನೀತ್ ಆಪ್ತಿ, ಅಜಯ್, ಶಿವರಾಜ ಈಳಿಗೇರ್, ರಮೇಶ್, ಮಹದೇವ್ ಪೂಜಾರ್, ಶ್ಯಾಮ್, ಜಯಪ್ಪ ಉಪಸ್ಥಿತರಿದ್ದರು.

- - - -8ಕೆಡಿವಿಜಿ30ಃ:

ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಗಣೇಶ ಹಬ್ಬದ ಅಂಗವಾಗಿ ನಡೆದ ಕೇರಂ, ಚೆಸ್ ಪಂದ್ಯಾವಳಿಗೆ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್, ಹಿರಿಯ ಪತ್ರಕರ್ತ ತಾರಾನಾಥ ಚಾಲನೆ ನೀಡಿದರು.