ಸಾರಾಂಶ
ಕನ್ನಡಪ್ರಭ ವಾರ್ತೆ ಹಾರೂಗೇರಿ
ಚದುರಂಗ ಆಟ ಮನಸನ್ನು ಶಾಂತ ಮತ್ತು ಜಾಗ್ರತವಾಗಿರುವಂತೆ ಮಾಡುತ್ತದೆ ಎಂದು ರಾಯಬಾಗ ತಹಸೀಲ್ದಾರ್ ಸುರೇಶ ಮುಂಜೆ ಹೇಳಿದರು.ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ಶಿವಶಕ್ತಿ ಸಭಾಭವನದಲ್ಲಿ ನಡೆದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ರಾಯಬಾಗ ಹಾಗೂ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆ ಮತ್ತು ಜೆ.ಬಿ.ಪಾಟೀಲ ಪ್ರೌಢಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ 2025-26ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ನಡೆದ ರಾಯಬಾಗ ತಾಲೂಕು ಮಟ್ಟದ ಚದುರಂಗ ಸ್ಫರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಚದುರಂಗ ಆಟ ಶಾರೀರಿಕ ಹಾಗೂ ಮನಸನ್ನು ಒಂದುಗೂಡಿಸುತ್ತದೆ ಮತ್ತು ಆಲೋಚನಾ ಶಕ್ತಿಯನ್ನು ವೃದ್ಧಿಸುತ್ತದೆ ಎಂದರು.ಅಂತಾರಾಷ್ತ್ರೀಯ ಚದುರಂಗ ಕ್ರೀಡಾ ಆಟಗಾರತಿ ಕು.ಶ್ರೇಯಾ ಹಿಪ್ಪರಗಿ ಚದುರಂಗ ಆಟದಲ್ಲಿ ಶ್ರದ್ಧೆ ಮತ್ತು ಜಾಣತನ ಪ್ರಾಮಾಣಿಕತೆ ಮತ್ತು ತುರ್ತು ನಿರ್ಣಯ ಕ್ಷಮತೆಯನ್ನು ಹೆಚ್ಚಿಸುತ್ತದೆ. ಅದು ಇದ್ದಾಗ ಮಾತ್ರ ಯಶಸ್ಸನ್ನು ಗಳಿಸಬಹುದು ಎಂದರು.ಮಹಾವೀರ ಜಿರಗಿಹಾಳೆ ಮಾತನಾಡಿ, ಸ್ಫರ್ಧೆಗಳಲ್ಲಿ ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಮತ್ತು ಪ್ರಾಮಾಣಿಕ ಪ್ರಯತ್ನ ಇದ್ದರೇ ನಮ್ಮ ಜೀವನದಲ್ಲಿ ಸೋಲು ಅನ್ನುವುದು ನಮ್ಮ ಹತ್ತಿರ ಸುಳಿಯಲು ಸಾಧ್ಯವಿಲ್ಲ ಎಂದರು.
ಚದುರಂಗ ಸ್ಪರ್ಧೆಯ ತೀರ್ಪುಗಾರರಾಗಿ (ಆರ್ಬಿಟರ್) ಮೈಸೂರಿನ ಅಭಿಲಾಷಗೌಡ, ಮೂರ್ತಿ ಮಹೆಂದ್ರ ವಗ್ಗನ್ನವರ, ಶಿವಾನಂದ ಸೈದಾಪುರ, ಸಂತೋಷ ತಮದಡ್ಡಿ, ಎಸ್.ಎನ್.ಬುರ್ಲಟ್ಟಿ, ಕಾರ್ಯ ನಿರ್ವಹಿಸಿದರೂ ಐದು ರೌಂಡ್‌ಗಳಲ್ಲಿ ಆಟವನ್ನು ಆಡಿಸಲಾಯಿತು. 125 ಮಕ್ಕಳು ಭಾಗವಹಿಸಿದ್ದರು. ಇದರಲ್ಲಿ ವಿಜೇತರಾದ ಪ್ರತಿ ವಿಭಾಗಕ್ಕೆ 5 ಮಕ್ಕಳಂತೆ ಒಟ್ಟು 20 ಮಕ್ಕಳು ಜಿಲ್ಲಾ ಹಂತದ ಕ್ರೀಡಾಕೂಟಕ್ಕೆ ಆಯ್ಕೆಯಾದರು.ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಿ.ಎಸ್.ಡಿಗ್ರಜ್, ಡಾ.ಬಸವರಾಜ್ ಹೊಸಪೇಟೆ, ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆ ಮತ್ತು ಜೆ.ಬಿ.ಪಾಟೀಲ ಪ್ರೌಢಶಾಲೆಗಳ ಅಧ್ಯಕ್ಷ ಪ್ರಕಾಶ ಜಿ. ಪ್ಯಾಟಿ, ಹಾರೂಗೇರಿ ಪುರಸಭೆ ಅಧ್ಯಕ್ಷ ವಸಂತ ಲಾಳಿ, ಹಾರೂಗೇರಿ ಪುರಸಭೆ ಸದಸ್ಯ ವಿನಾಯಕ ಮುಡಸಿ, ಸರದಾರ ಜಮಾದರ, ಬಿ.ಆರ್.ಅಂದಾನಿ, ಮುತ್ತು ಬನಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಸಂತೋಷ ತಮದಡ್ಡಿ ವಂದಿಸಿದರು.