ಸಾರಾಂಶ
ನಗರದ ಸೈನಿಕ ಶಾಲೆಯಲ್ಲಿ ನಡೆಯುತ್ತಿದ್ದ ಮತ ಎಣಿಕೆ ವೇಳೆ ಕೌಂಟಿಂಗ್ ಸುಪರ್ ವೈಸರ್ ಸಿದ್ದರಾಜ ದೊಡಮನಿಗೆ ಎಂಬುವವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ವಿಜಯಪುರ: ನಗರದ ಸೈನಿಕ ಶಾಲೆಯಲ್ಲಿ ನಡೆಯುತ್ತಿದ್ದ ಮತ ಎಣಿಕೆ ವೇಳೆ ಕೌಂಟಿಂಗ್ ಸುಪರ್ ವೈಸರ್ ಸಿದ್ದರಾಜ ದೊಡಮನಿಗೆ ಎಂಬುವವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಸಿದ್ದರಾಜ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಸ್ಥಳದಲ್ಲಿಯೇ ಇದ್ದ ಆಂಬ್ಯುಲೆನ್ಸ್ ಮೂಲಕ ಸೈನಿಕ ಶಾಲೆಯ ಆವರಣದಲ್ಲೇ ಸ್ಥಾಪಿಸಲಾಗಿರುವ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಇನ್ನೊಂದೆಡೆ ಮಧ್ಯಾಹ್ನ 3ಗಂಟೆ ವೇಳೆಗೆ ಕೌಂಟಿಂಗ್ ಮುಕ್ತಾಯದ ಹಂತಕ್ಕೆ ಬಂದಿದ್ದ ವೇಳೆ ಮತ ಎಣಿಕೆ ಕೇಂದ್ರದಲ್ಲೇ ಬಸವರಾಜ ವಾಲಿಕಾರ ಎಂಬುವವರು ತಲೆಸುತ್ತು ಬಂದು ಬಿದ್ದರು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳು ಆಂಬ್ಯುಲೆನ್ಸ್ ಕರೆಸಿ ಆತನನ್ನು ಮತ ಎಣಿಕೆ ಕೇಂದ್ರದ ಬಳಿ ಇದ್ದ ಹೆಲ್ತ್ ಸೆಂಟರ್‌ಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.