ಕೌಶಲ್ಯಾಭಿವೃದ್ಧಿ, ಪ್ರಾಯೋಗಿಕ ತರಬೇತಿಗಳು ಇಂದಿನ ಶಿಕ್ಷಣದಲ್ಲಿ ಅಗತ್ಯ:ಪ್ರೊ.ಬಿ.ವಿ. ಸಾಂಬಶಿವಯ್ಯ

| Published : May 29 2024, 01:44 AM IST

ಕೌಶಲ್ಯಾಭಿವೃದ್ಧಿ, ಪ್ರಾಯೋಗಿಕ ತರಬೇತಿಗಳು ಇಂದಿನ ಶಿಕ್ಷಣದಲ್ಲಿ ಅಗತ್ಯ:ಪ್ರೊ.ಬಿ.ವಿ. ಸಾಂಬಶಿವಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಆಹಾರ ಉತ್ಪಾದನಾ ಉದ್ಯಮದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅದರಲ್ಲಿ ಹಜರ್ಡ್ ಅನಾಲಿಸಿಸ್ ಕ್ರಿಟಿಕಲ್ ಕಂಟ್ರೋಲ್ ಪಾಯಿಂಟ್ ಕೂಡ ಮಹತ್ವದ್ದು. ಇದರ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ಅಗತ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕೌಶಲ್ಯಾಭಿವೃದ್ಧಿ ಮತ್ತು ಪ್ರಾಯೋಗಿಕ ತರಬೇತಿಗಳು ಇಂದಿನ ಶಿಕ್ಷಣದಲ್ಲಿ ಅಗತ್ಯವಾಗಿವೆ. ಇವು ಉದ್ಯೋಗದ ಭವಿಷ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ತಿಳಿಸಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಹಾರ ಸಂಸ್ಕರಣೆ ಮತ್ತು ಎಂಜಿನಿಯರಿಂಗ್ ವಿಭಾಗವು ಹಜರ್ಡ್ ಅನಾಲಿಸಿಸ್ ಕ್ರಿಟಿಕಲ್ ಕಂಟ್ರೋಲ್ ಪಾಯಿಂಟ್ (ಎಚ್‌ಎಸಿಸಿಪಿ) ಹಂತ 4 ಮತ್ತು ಐಎಸ್‌ಒ 22000:2018 ಕುರಿತು ಆಯೋಜಿಸಿದ್ದ ಎರಡು ದಿನಗಳ ಕಾರ್ಯಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಆಹಾರ ಉತ್ಪಾದನಾ ಉದ್ಯಮದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅದರಲ್ಲಿ ಹಜರ್ಡ್ ಅನಾಲಿಸಿಸ್ ಕ್ರಿಟಿಕಲ್ ಕಂಟ್ರೋಲ್ ಪಾಯಿಂಟ್ ಕೂಡ ಮಹತ್ವದ್ದು. ಇದರ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಈ ಕಾರ್ಯಗಾರದಲ್ಲಿ ಮೈಸೂರು ವಿವಿ ಮತ್ತು ಬೆಂಗಳೂರು ವಿವಿ ವಿವಿಧ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿಭಾಗದ ಒಟ್ಟು 40 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ಡಾ.ಟಿ.ವಿ. ಲತಾ, ಮುಖ್ಯ ಕಾರ್ಯನಿರ್ವಾಹಕ ತರಬೇತುದಾರ ಮ್ಯಾಮೆ ಬಾಜೊ ಇದ್ದರು. ಸಹಾಯಕ ಪ್ರಾಧ್ಯಾಪಕಿ ಎಸ್. ಸಂಧ್ಯಾ ನಿರೂಪಿಸಿದರು.