ಮಾಜಿ ಶಾಸಕ ಜಯಣ್ಣ ನಿಧನಕ್ಕೆ ಸಿಎಂ ಸಂತಾಪ

| Published : Dec 11 2024, 12:45 AM IST

ಮಾಜಿ ಶಾಸಕ ಜಯಣ್ಣ ನಿಧನಕ್ಕೆ ಸಿಎಂ ಸಂತಾಪ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಶಾಸಕ, ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಎಸ್.ಎಂ.ಕೃಷ್ಣ ಅವರ ಸಾವಿನ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಜಯಣ್ಣ ಅವರ ಸಾವಿನ ಸುದ್ದಿ ಆಘಾತ ತಂದಿದೆ. ಜಯಣ್ಣ ನನ್ನ ಆತ್ಮೀಯರು. ನಮ್ಮ ನಡುವೆ ದೀರ್ಘಕಾಲದ ಒಡನಾಟವಿತ್ತು

ಚಾಮರಾಜನಗರ: ಮಾಜಿ ಶಾಸಕ, ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಎಸ್.ಎಂ.ಕೃಷ್ಣ ಅವರ ಸಾವಿನ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಜಯಣ್ಣ ಅವರ ಸಾವಿನ ಸುದ್ದಿ ಆಘಾತ ತಂದಿದೆ. ಜಯಣ್ಣ ನನ್ನ ಆತ್ಮೀಯರು. ನಮ್ಮ ನಡುವೆ ದೀರ್ಘಕಾಲದ ಒಡನಾಟವಿತ್ತು. ಇವರು 1994 ರಲ್ಲಿ ಜೆಡಿಎಸ್ ನಿಂದ ಹಾಗೂ 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಪಕ್ಷ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡಿದ ಜಯಣ್ಣ ಜನಾನುರಾಗಿ ಶಾಸಕರಾಗಿದ್ದರು. ಜನರ ಕಷ್ಟಗಳಿಗೆ ಸದಾ ಮಿಡಿಯುತ್ತಿದ್ದರು.

ಡಿ. ಏಳರಂದು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜೊತೆಗಿದ್ದರು. ಅವರ ಮನೆಯಲ್ಲಿಯೇ ಊಟ ಮಾಡಿ ಬಂದಿದ್ದನ್ನು ಸ್ಮರಿಸಿದರು. ಮುಖ್ಯಮಂತ್ರಿಗಳು, ಜಯಣ್ಣ ಅವರ ಸಾವು ವೈಯಕ್ತಿಕವಾಗಿ ಆಘಾತ ತಂದಿದೆ. ಅವರ ನಿಧನದಿಂದ ಜನಪ್ರಿಯ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ.

ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಅಜಾತಶತ್ರು, ಸೌಮ್ಯವಾದಿ ಮಾಜಿ ಶಾಸಕ ಜಯಣ್ಣ ಇನ್ನಿಲ್ಲ

ದೇವರಾಜು ಕಪ್ಪಸೋಗೆ

ಕನ್ನಡಪ್ರಭ ವಾರ್ತೆ ಚಾಮರಾಜನಗರಅಜಾತಶತ್ರು, ಸೌಮ್ಯವಾದಿ ‌ಕೊಳ್ಳೇಗಾಲದ ಮಾಜಿ ಶಾಸಕ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ ಅವರು ಹೃದಯಘಾತದಿಂದ ಮಂಗಳವಾರ ನಿಧನರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಶಾಸಕ ಜಯಣ್ಣ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. ಕಳೆದ 7 ರಂದು ಸಿದ್ದರಾಮಯ್ಯ ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ ಜಯಣ್ಣ ಅವರ ಮನೆಯಲ್ಲಿ ಊಟ ಮಾಡಿ ತೆರಳಿದ್ದರು ಮತ್ತು ನೂತನ ಮನೆಯ ನಾಮಫಲಕ ಅನಾವರಣ ಮಾಡಿದ್ದರು.ಇದೇ 12 ರಂದು ಕೊಳ್ಳೇಗಾಲದಲ್ಲಿ ನೂತನವಾಗಿ ನಿರ್ಮಿಸಿದ್ದ ಮನೆಯ ಗೃಹ ಪ್ರವೇಶವಿತ್ತು. ಗೃಹ ಪ್ರವೇಶಕ್ಕೂ ಮುನ್ನವೇ ಮನೆಯಲ್ಲಿ ಗಾಢ ಮೌನ ಆವರಿಸಿದೆ. ಸ್ವಗ್ರಾಮವಾದ ಮಾಂಬಳ್ಳಿಯಲ್ಲಿ ಬುಧವಾರದಂದು ಜಯಣ್ಣ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.ಎರಡು ಬಾರಿ ಶಾಸಕ ಅವಿವಾಹಿತರಾಗಿದ್ದ ಎಸ್. ಜಯಣ್ಣ ಅವರಿಗೆ 72 ವರ್ಷ ವಯಸ್ಸಾಗಿತ್ತು.‌ 1994ರಲ್ಲಿ ಮೊದಲ ಬಾರಿಗೆ ಜನತಾದಳದಿಂದ ಶಾಸಕರಾಗಿ ವಿದಾನಸಭಾ ಪ್ರವೇಶಿಸಿದ್ದರು ನಂತರ 1999, 2004 ಮತ್ತು2009ರ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು ಮತ್ತು 2013 ರಲ್ಲಿ ಕೊಳ್ಳೇಗಾಲದಿಂದ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾಗಿದ್ದರು. 2008, 2018 ಮತ್ತು 2023 ಕಾಂಗ್ರೆಸ್‌ ಟಿಕೆಟ್‌ ತಪ್ಪಿದ್ದರೂ ಪಕ್ಷ ನಿಷ್ಠೆ ಪ್ರದರ್ಶಿಸಿದ್ದರು. ಇದರಿಂದಾಗಿ ಈ ಬಾರಿ ಸಿದ್ದರಾಮಯ್ಯ ಸರ್ಕಾರದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷಗಿರಿ ಒಲಿದಿತ್ತು. ಕಾಡಿದ್ದ ಅನಾರೋಗ್ಯಮಾಜಿ ಶಾಸಕ ಎಸ್‌. ಜಯಣ್ಣ ಅವರು 2013ರಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದರು. ಇದರಿಂದಾಗಿ 2018 ಮತ್ತು 2023 ಕಾಂಗ್ರೆಸ್‌ ಟಿಕೆಟ್‌ ತಪ್ಪಿ ಹೋಗಿತ್ತು. ಅನಾರೋಗ್ಯದ ನಡುವೆಯೂ ಕ್ಷೇತ್ರ ಪ್ರವಾಸ ಮಾಡುತ್ತಿದ್ದರು. ಟಿಕೆಟ್‌ಗಾಗಿ ಪ್ರಯತ್ನ ಮಾಡುತ್ತಲೇ ಇದ್ದರು. ಹೆಚ್ಚಿನ ಓಡಾಟ ಸಾಧ್ಯವಾಗದ ಹಿನ್ನೆಲೆಯಲ್ಲಿ ಕಳೆದ ಎರಡು ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಲಾಗಿತ್ತು. ಮಾಂಬಳ್ಳಿಯ ಎರಡನೇ ಶಾಸಕಯಳಂದೂರು ತಾಲೂಕಿನ ಮಾಂಬಳ್ಳಿಯಲ್ಲಿ ಪುಟ್ಟನಂಜಮ್ಮಮತ್ತು ಸಣ್ಣಯ್ಯ ಅವರ ಪುತ್ರರಾಗಿ 1952 ಸೆ.9ರಂದು ಜನಿಸಿದ ಜಯಣ್ಣ ಅವರು ಎಂ ಎ ಪದವಿಧರರಾಗಿ ರಾಜಕೀಯ ಪ್ರವೇಶ ಮಾಡುವ ಮೂಲಕ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಮಾಂಬಳ್ಳಿ ಗ್ರಾಮದಿಂದ ಮಾಜಿ ಶಾಸಕಿ ಕೆಂಪಮ್ಮ ಅವರ ಬಳಿಕ ವಿಧಾನಸಭಾ ಪ್ರವೇಶಿಸಿದ ಎರಡನೇ ಶಾಸಕರಾಗಿದ್ದರು.