ಪಿಎಸ್ಐ ಸುರೇಶ್‌ಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

| Published : Apr 04 2025, 12:45 AM IST

ಪಿಎಸ್ಐ ಸುರೇಶ್‌ಗೆ ಮುಖ್ಯಮಂತ್ರಿಗಳ ಚಿನ್ನದ ಪದಕ
Share this Article
  • FB
  • TW
  • Linkdin
  • Email

ಸಾರಾಂಶ

ಅರಸೀಕೆರೆ ತಾಲೂಕಿನ ಬಾಣಾವರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುರೇಶ್ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭಿಸಿದ್ದು, ಬಾಣಾವರ ಮುಸ್ಲಿಂ ಬಾಂಧವರು ಸುನ್ನಿ ಜಾಮಿಯಾ ಮಸೀದಿ ಆವರಣದಲ್ಲಿ ಅಭಿನಂದಿಸಿ ಗೌರವಿಸಿದರು. ಬಾಣಾವರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಒಬ್ಬರಿಗೆ ಸ್ವರ್ಣ ಪದಕ ಲಭಿಸಿರುವುದು ಬಾಣವರ ಜನತೆ ಸಂತಸ ಪಡುವ ವಿಷಯವಾಗಿದೆ. ಇವರ ಕಾರ್ಯದಕ್ಷತೆ ಹಾಗೂ ಕರ್ತವ್ಯ ನಿಷ್ಠೆ ಹೀಗೆ ಮುಂದುವರೆಯಲಿ ಹಾಗೂ ಇವರಿಗೆ ಇನ್ನೂ ಹೆಚ್ಚಿನ ಗೌರವಗಳು ಲಭಿಸಲಿ ಎಂದು ಆಶಿಸಿದರು.

ಅರಸೀಕೆರೆ: ತಾಲೂಕಿನ ಬಾಣಾವರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುರೇಶ್ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭಿಸಿದ್ದು, ಬಾಣಾವರ ಮುಸ್ಲಿಂ ಬಾಂಧವರು ಸುನ್ನಿ ಜಾಮಿಯಾ ಮಸೀದಿ ಆವರಣದಲ್ಲಿ ಅಭಿನಂದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಾಣಾವರ ಮುಸ್ಲಿಂ ಜನಾಥ ಕಮಿಟಿಯ ಅಧ್ಯಕ್ಷ ಸೈಯದ್ ರಹಿಂಸಾಬ್, ಬಾಣಾವರ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಸುರೇಶ್ ಕುಮಾರ್ ಕಾರ್ಯಕ್ಷಮತೆ ಮತ್ತು ಅವರ ಕರ್ತವ್ಯ ನಿಷ್ಠೆಯನ್ನು ಗೌರವಿಸಿ ಸರ್ಕಾರವು ಅವರಿಗೆ ದಿನದ ಪದಕ ನೀಡಿರುವುದು ಅತ್ಯಂತ ಶ್ಲಾಘನೀಯವಾಗಿದೆ ಹಾಗೂ ನಮ್ಮ ಬಾಣಾವರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಒಬ್ಬರಿಗೆ ಸ್ವರ್ಣ ಪದಕ ಲಭಿಸಿರುವುದು ಬಾಣವರ ಜನತೆ ಸಂತಸ ಪಡುವ ವಿಷಯವಾಗಿದೆ. ಇವರ ಕಾರ್ಯದಕ್ಷತೆ ಹಾಗೂ ಕರ್ತವ್ಯ ನಿಷ್ಠೆ ಹೀಗೆ ಮುಂದುವರೆಯಲಿ ಹಾಗೂ ಇವರಿಗೆ ಇನ್ನೂ ಹೆಚ್ಚಿನ ಗೌರವಗಳು ಲಭಿಸಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಮಸೀದಿಯ ಗುರುಗಳಾದ ಸರ್ಪರಾಜ್ ರಜಾ, ಸುನ್ನಿ ಮುಸ್ಲಿಂ ಜಮಾತ್ ಕಮಿಟಿಯ ಕಾರ್ಯದರ್ಶಿ ಶರ್ಫಾನ್, ಮಾಜಿ ಅಧ್ಯಕ್ಷರಾದ ಕೆಸಿ ಖಾದರ್ ಬಾಷಾ, ಸಾಬ್, ಶಫಿ, ಅಹಮದ್ ಸಾಬ್ ಹಾಗೂ ಮುಖಂಡರುಗಳಾದ ಮಹಮ್ಮದ್ ಇಲಿಯಾಸ್, ಗ್ರಾಮ ಪಂಚಾಯತ್ ಸದಸ್ಯ ಸಯ್ಯದ್ ಆಸಿಫ್, ಮಾಜಿ ವಕ್ ಬೋರ್ಡ್ ನಿರ್ದೇಶಕ ಆರಿಫ್ ಜಾನ್, ಬಾಣಾವರ ಗವಿ ಕಮಿಟಿ ಉಪಾಧ್ಯಕ್ಷ ಮೊಹಮದ್ ಇಬ್ರಾಹಿಂ ಸಾಬ್ ಹಾಗೂ ಜಮಾತ್ ಕಮಿಟಿಯ ಸದಸ್ಯ ಅಬ್ದುಲ್ ಗನೀ ಸಾಬ್ ಮುಖಂಡರುಗಳಾದ ಮಹಮ್ಮದ್ ಫಾಝಿಲ್, ಅಬ್ದುಲ್ ಜನಾಬ್ ಕುರೇಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು