ಚಿಕ್ಕಬಳ್ಳಾಪುರ ಜಿಲ್ಲೆ 11 ನೇ ಸ್ಥಾನಕ್ಕೆ ಜಿಗಿತ

| Published : Apr 09 2025, 12:32 AM IST

ಸಾರಾಂಶ

ಈ ಭಾರಿಯೂ ಹೆಣ್ಣು ಮಕ್ಕಳೆ ಮೊದಲ ಸ್ಥಾನದಲ್ಲಿದ್ದಾರೆ. ಪರೀಕ್ಷೆಯಲ್ಲಿ ಶೇ 75.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಜಿಲ್ಲೆಯಾದ್ಯಂತ 6,114 ವಿದ್ಯಾರ್ಥಿಗಳು, 7189 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಒಟ್ಟು13300 ವಿದ್ಯಾರ್ಥಿಗಳಲ್ಲಿ 9553 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇವರಲ್ಲಿ 4241 ವಿದ್ಯಾರ್ಥಿಗಳು,5312 ಪಾಸಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ 18 ನೇ ಸ್ಥಾನದಿಂದ 11 ನೇ ಸ್ಥಾನಕ್ಕೆ ಜಿಗಿದಿದೆ. ಜಿಲ್ಲೆಯಲ್ಲಿ 97 ಮಂದಿ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಅವರಲ್ಲಿ ನಾಲ್ಕನೇ ಮತ್ತು ಐದನೇ ರ್‍ಯಾಂಕ್‌ ಬಿಜಿಎಸ್ ಪಿಯು ಕಾಲೇಜು ಪಡೆದುಕೊಂಡಿದೆ.

ಈ ಭಾರಿಯೂ ಹೆಣ್ಣು ಮಕ್ಕಳೆ ಮೊದಲ ಸ್ಥಾನದಲ್ಲಿದ್ದಾರೆ. ಪರೀಕ್ಷೆಯಲ್ಲಿ ಶೇ 75.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಜಿಲ್ಲೆಯಾದ್ಯಂತ 6,114 ವಿದ್ಯಾರ್ಥಿಗಳು, 7189 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಒಟ್ಟು13300 ವಿದ್ಯಾರ್ಥಿಗಳಲ್ಲಿ 9553 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇವರಲ್ಲಿ 4241 ವಿದ್ಯಾರ್ಥಿಗಳು,5312 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.ಕಲಾ ವಿಭಾಗದಲ್ಲಿ 1457 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು, 594 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ವಾಣಿಜ್ಯ ವಿಭಾಗದಲ್ಲಿ 5461 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು, 3805ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 6385 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು, 5154 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಬಿಜಿಎಸ್‌ಗೆ ಶೇ.100ರಷ್ಟು ಫಲಿತಾಂಶ

ನಗರದ ಹೊರವಲಯದ ಅಗಲಗುರ್ಕಿಯ ಬಿ.ಜಿ.ಎಸ್. ಪಿ.ಯು. ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಫಲಿತಾಂಶವು ಶೇ 100 ರಷ್ಟು ಬಂದಿದ್ದು,ವಿಜ್ಞಾನ ವಿಭಾಗದಲ್ಲಿ ಯಶಸ್‌ಗೌಡ. ಎನ್‌.600ಕ್ಕೆ 596 ಅಂಕಗಳನ್ನು ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸಚಿನ್‌. ಪಿ. 600 ಕ್ಕೆ 595 ಅಂಕಗಳನ್ನು ಪಡೆದು ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದಾರೆ. ಒಟ್ಟು 550 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು 981 ವಿದ್ಯಾರ್ಥಿಗ ಳು ಪರೀಕ್ಷೆಯನ್ನುಬರೆದಿದ್ದು, ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಳೆದ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಪಿಯುಸಿ ಫಲಿತಾಂಶದಲ್ಲಿ 18 ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ 7 ಸ್ಥಾನ ಜಿಗಿದಿರುವ ಜಿಲ್ಲೆ 11ನೇ ಸ್ಥಾನ ಪಡೆದಿದೆ. ಇದರಿಂದ ಹೆಚ್ಚು ಒತ್ತಡದಲ್ಲಿದ್ದ ಶಿಕ್ಷಣ ಇಲಾಖೆ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದೆ. ಪೂರಕ ಪರೀಕ್ಷೆಗೆ ಸಿದ್ಧತೆ

ಉಳಿದಂತೆ ಇಂದಿನ ಫಲಿತಾಂಶ ಕೊನೆಯಲ್ಲ. ಶೀಘ್ರದಲ್ಲಿಯೇ ಸರ್ಕಾರ ಪೂರಕ ಪರೀಕ್ಷೆ ನಡೆಸಲಿದ್ದು, ಈ ಪೂರಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮತ್ತೆ ಉತ್ತೀರ್ಣರಾಗಿ ತಮ್ಮ ಶೈಕ್ಷಣಿಕ ಜೀವನ ಮುಂದುವರಿಸಬಹುದಾಗಿದೆ ಎಂದು ಪಿಯು ಶಿಕ್ಷಣ ಇಳಾಖೆಯ ಉಪ ನಿರ್ಧೇಶಕ ಮರಿಸ್ವಾಮಿ ತಿಳಿಸಿದ್ದಾರೆ.

ಯಾವುದೇ ಮಕ್ಕಳು ದುಡುಕದೆ ಪೂರಕ ಪರೀಕ್ಷೆಗೆ ಸಿದ್ಧರಾಗಿ, ಅಲ್ಲದೆ ವಿಷಯಗಳು ಕಡಿಮೆ ಇರುವ ಕಾರಣ ಹೆಚ್ಚಿನ ಸಮಯ ವ್ಯಾಸಂಗಕ್ಕೆ ಮೀಸಲಿಟ್ಟು ಅಭ್ಯಾಸ ಮಾಡಿದರೆ ತಪ್ಪದೇ ನೀವು ಜಯಶೀಲರಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಯಾವುದೇ ವಿದ್ಯಾರ್ಥಿ ಇಂದಿನ ಫಲಿತಾಂಶದಲ್ಲಿ ಅನುತ್ತೀರ್ಣರಾದ ಕಾರಣಕ್ಕೆ ದುಡುಕುವುದು ಬೇಡ. ಪೂರಕ ಪರೀಕ್ಷೆಗೆ ಸಿದ್ಧರಾಗುವಂತೆ ಅವರು ಸಲಹೆ ನೀಡಿದ್ದಾರೆ.

ಸಿಕೆಬಿ-3 ಯಶಸ್‌ಗೌಡ. ವಿಜ್ಞಾನ: 596 ಅಂಕ).

ಸಿಕೆಬಿ-4 ಸಚಿನ್‌ (ವಾಣಿಜ್ಯ: 595 ಅಂಕ).