ಸಾರಾಂಶ
ಜಿಲ್ಲಾದ್ಯಂತ 10,61,674 ಮಂದಿ ಮತದಾರರು ಇದ್ದು, ಇದರಲ್ಲಿ 5,22,817 ಪುರುಷ ಮತದಾರರು, 5,38,767 ಮಹಿಳಾ ಮತದಾರರು ಮತ್ತು 90ಮಂದಿ ಇತರರು ಇದ್ದಾರೆ. ಅಲ್ಲದೆ ವಿಶೇಷ ಪರಿಷ್ಕರಣೆ ವೇಳೆ ಒಟ್ಟು 11,688 ಮತದಾರರು ಹೆಚ್ಚಾಗಿದ್ದಾರೆ. 85ವರ್ಷ ದಾಟಿದ ಒಟ್ಟು 12697 ಮಂದಿ ಹಿರಿಯ ಮತದಾರರಿದ್ದಾರೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚುನಾವಣಾ ಆಯೋಗದ ಆದೇಶದಂತೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2025 ಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಡಳಿತ ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಪುರಷರಿಗಿಂತ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ.ಜಿಲ್ಲೆಯ 5 ಕ್ಷೇತ್ರಗಳ ವಿಧಾನಸಭಾ ಕ್ಷೇತ್ರಗಳ ಆರು ತಾಲ್ಲೂಕುಗಳಲ್ಲಿನ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಂತರ ಕರಡು ಪಟ್ಟಿ ಪ್ರಕಟಿಸಲಾಗಿದ್ದು, ಜಿಲ್ಲಾದ್ಯಂತ 10,61,674 ಮಂದಿ ಮತದಾರರು ಇದ್ದು, ಇದರಲ್ಲಿ 5,22,817 ಪುರುಷ ಮತದಾರರು, 5,38,767 ಮಹಿಳಾ ಮತದಾರರು ಮತ್ತು 90ಮಂದಿ ಇತರರು ಇದ್ದಾರೆ. ಅಲ್ಲದೆ ವಿಶೇಷ ಪರಿಷ್ಕರಣೆ ವೇಳೆ ಒಟ್ಟು 11,688 ಮತದಾರರು ಹೆಚ್ಚಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಲೂಕುವಾರು ಮತಪಟ್ಟಿಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 1,03,466 ಪುರುಷ ಮತದಾರರು,1,07,184 ಮಹಿಳಾ ಮತದಾರರು ಮತ್ತು 4 ಮಂದಿ ಇತರರು ಇದ್ದಾರೆ.
ಬಾಗೇಪಲ್ಲಿ ಕ್ಷೇತ್ರದಲ್ಲಿ 1,00,532 ಪುರುಷ ಮತದಾರರು,1,03,129 ಮಹಿಳಾ ಮತದಾರರು ಮತ್ತು 27 ಮಂದಿ ಇತರರು ಇದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 1,03,164 ಪುರುಷ ಮತದಾರರು,1,07,115 ಮಹಿಳಾ ಮತದಾರರು ಮತ್ತು 13 ಮಂದಿ ಇತರರು ಇದ್ದಾರೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ 1,02,759 ಪುರುಷ ಮತದಾರರು,1,04,278 ಮಹಿಳಾ ಮತದಾರರು ಮತ್ತು 8 ಮಂದಿ ಇತರರು ಇದ್ದಾರೆ. ಚಿಂತಾಮಣಿ ಕ್ಷೇತ್ರದಲ್ಲಿ 1,12,896 ಪುರುಷ ಮತದಾರರು,1,17,068 ಮಹಿಳಾ ಮತದಾರರು ಮತ್ತು 39 ಮಂದಿ ಇತರರು ಇದ್ದಾರೆಂದರು.17132 ವಿಶೇಷಚೇತನರು
ಒಟ್ಟು 17132 ವಿಶೇಷ ಚೇತನ ಮತದಾರರಿದ್ದು, ಅವರಲ್ಲಿ10067 ಪುರುಷ ಮತದಾರರು,7065 ಮಹಿಳಾ ಮತದಾರರು ಇದ್ದಾರೆ. 85ವರ್ಷ ದಾಟಿದ ಒಟ್ಟು 12697 ಹಿರಿಯ ಮತದಾರರಿದ್ದು, ಅವರಲ್ಲಿ5587 ಪುರುಷ ಮತದಾರರು, 7110 ಮಹಿಳಾ ಮತದಾರರು ಇದ್ದಾರೆಂದರು.ಸುದ್ದಿಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಚುನಾವಣಾ ತಹಸೀಲ್ದಾರ್ ಕೆ.ಶ್ವೇತಾ, ವಾರ್ತಾ ಮತ್ತು ಸಂಪರ್ಕಇಲಾಖೆಯ ಸಹಾಯಕ ನಿರ್ಧೇಶಕ ಜುಂಜಣ್ಣ, ರಾಜಕೀಯ ಪಕ್ಷಗಳಿಂದ ಮಧುಸೂಧನ್, ಬಿ.ಎನ್.ಮುನಿಕೃಷ್ಣಪ್ಪ, ಲಕ್ಷ್ಮೀನಾರಾಯಣಗುಪ್ತ, ಮತ್ತಿತರರು ಇದ್ದರು.