ಸರಗೂರಿನಲ್ಲಿ ವಿಜೃಂಭಣೆಯ ಶ್ರೀ ಚಿಕ್ಕದೇವಮ್ಮನವರ ವರ್ಧಂತಿ ಪಲ್ಲಕ್ಕಿ ಉತ್ಸವ

| Published : Feb 15 2024, 01:16 AM IST

ಸರಗೂರಿನಲ್ಲಿ ವಿಜೃಂಭಣೆಯ ಶ್ರೀ ಚಿಕ್ಕದೇವಮ್ಮನವರ ವರ್ಧಂತಿ ಪಲ್ಲಕ್ಕಿ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗ್ಗೆ ಕಪಿಲಾ ನದಿಗೆ ತೆರಳಿ ಗಂಗೆಪೂಜೆ ನಡೆಸಿ ಚಿಕ್ಕದೇವಮ್ಮನವರ ಉತ್ಸವ ಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕಸಿ, ಪಲ್ಲಕ್ಕಿ ಮೇಲೆ ಅಮ್ಮನವರನ್ನು ಕೂರಿಸಿ ಪೂರ್ಣ ಕುಂಭ ಕಳಸದೊಂದಿಗೆ ಪಟ್ಟಣದ ಪ್ರಮುಖ ರಸ್ತೆ ಮುಖಾಂತರ ಮಂಗಳವಾದ್ಯ, ಎತ್ತುಗಳ ಮೆರವಣಿಗೆ, ಸತ್ತಿಗೆ, ಬ್ಯಾಂಡ್ ಸೆಟ್, ಚಂಡೆ, ವೀರಗಾಸೆ ಕುಣಿತ ಹಾಗೂ ಕಲಾತಂಡಗಳ ಜೊತೆಯಲ್ಲಿ ಮೆರವಣಿಗೆ ನಡೆಯಿತು, ಉತ್ಸವವು ದೇವಾಲಯಕ್ಕೆ ತಲುಪಿನಂತರ ವಿಶೇಷ ಪೂಜೆ ನಡೆಸಿ ಮಹಾಮಂಗಳಾರತಿ ಮಾಡಿ ಪ್ರಸಾದ ವಿನಿಯೋಗ ಮಾಡಲಾಯಿತು.

ನ್ನಡಪ್ರಭ ವಾರ್ತೆ ಸರಗೂರು

ಪಟ್ಟಣದಲ್ಲಿ ಬುಧವಾರ ನಾಯಕ ಸಮಾಜದಿಂದ ಶ್ರೀ ಚಿಕ್ಕದೇವಮ್ಮನವರ 47ನೇ ವರ್ಷದ ಪೂಜಾ ಮಹೋತ್ಸವ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಚಿಕ್ಕದೇವಮ್ಮ ನವರ ಹಬ್ಬವನ್ನು 5 ದಿನಗಳ ತನಕ ಕಳೆದ 46 ವರ್ಷದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪಟ್ಟಣವನ್ನು ತಳಿರು ತೋರಣ ರಂಗೋಲಿ ಬಿಡಿಸಿ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನೂತನವಾಗಿ ನವೀಕರಣಗೊಂಡಿರುವ ದೇವಾಲಯದಲ್ಲಿ ಬೆಳಗಿನ ಜಾವದಿಂದ ಹೋಮ ಹವನ ನಡೆಸಿ ಗಣಪತಿ ಹೋಮ ಪುಣ್ಯಾಹ, ಕಳಸ ಪ್ರತಿಷ್ಠಾಪನೆ, ನವಗ್ರಹ ಹೋಮ, ದುರ್ಗಹೋಮ, ಕುಂಕುಮಾರ್ಚನೆ ಪೂಜಾ ಕೈಂಕರ್ಯಗಳು ಜರುಗಿದವು.

ಬೆಳಗ್ಗೆ ಕಪಿಲಾ ನದಿಗೆ ತೆರಳಿ ಗಂಗೆಪೂಜೆ ನಡೆಸಿ ಚಿಕ್ಕದೇವಮ್ಮನವರ ಉತ್ಸವ ಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕಸಿ, ಪಲ್ಲಕ್ಕಿ ಮೇಲೆ ಅಮ್ಮನವರನ್ನು ಕೂರಿಸಿ ಪೂರ್ಣ ಕುಂಭ ಕಳಸದೊಂದಿಗೆ ಪಟ್ಟಣದ ಪ್ರಮುಖ ರಸ್ತೆ ಮುಖಾಂತರ ಮಂಗಳವಾದ್ಯ, ಎತ್ತುಗಳ ಮೆರವಣಿಗೆ, ಸತ್ತಿಗೆ, ಬ್ಯಾಂಡ್ ಸೆಟ್, ಚಂಡೆ, ವೀರಗಾಸೆ ಕುಣಿತ ಹಾಗೂ ಕಲಾತಂಡಗಳ ಜೊತೆಯಲ್ಲಿ ಮೆರವಣಿಗೆ ನಡೆಯಿತು, ಉತ್ಸವವು ದೇವಾಲಯಕ್ಕೆ ತಲುಪಿನಂತರ ವಿಶೇಷ ಪೂಜೆ ನಡೆಸಿ ಮಹಾಮಂಗಳಾರತಿ ಮಾಡಿ ಪ್ರಸಾದ ವಿನಿಯೋಗ ಮಾಡಲಾಯಿತು.

ಮೆರವಣೆಗೆಯಲ್ಲಿ ಹೆಣ್ಣು ಮಕ್ಕಳು 101 ಪೂರ್ಣ ಕಳಸ ಹೊತ್ತು ಹರಕೆ ತೀರಿಸಿದರು. ಭಕ್ತಾದಿಗಳು ದಾರಿ ಉದ್ದಕ್ಕೂ, ಮಜ್ಜಿಗೆ, ಪಾನಕ, ಕೋಸುಂಬರಿ ವಿತರಿಸಿದರು. ಉತ್ಸವ ಮೆರವಣಿಗೆಯಲ್ಲಿ ನಾಯಕ ಸಮಾಜದ ಯಜಮಾನರು ಮುಖಂಡರು ಹಾಗೂ ನಾಯಕ ಸಮಾಜದ ವಿವಿಧ ಸಂಘ ಸಂಸ್ಥೆಗಳು, ಮಹಿಳಾ ಸಂಘದವರು ಭಾಗವಹಿಸಿದ್ದರು. ಪೂಜಾ ಕೃಕಾರ್ಯವನ್ನು ಪುರೋಹಿತ್ ಹರೀಶ್, ಸುಕೃತ್ ನೆರವೇರಿಸಿದರು,

ಚಿಕ್ಕದೇವಮ್ಮನವರ ಪಲ್ಲಕ್ಕಿ ಉತ್ಸವ ನೋಡಲು ಸರಗೂರು ಅಕ್ಕ ಪಕ್ಕದ ಗ್ರಾಮಗಳಿಂದ ಭಕ್ತರು ಅಗಮಿಸಿ ತಾಯಿಯ ದರ್ಶನ ಪಡೆದು ಪುನೀತರಾದರು.