ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಇಲ್ಲಿನ ಟಿಎಪಿಸಿಎಂಎಸ್‌ನಲ್ಲಿ ನಡೆದಿರುವ ಆಡಳಿತದಲ್ಲಿ ವಿಫಲತೆ, ಬೈಲಾ ಮತ್ತು ಉಪ ನಿಯಮಗಳ ಉಲ್ಲಂಘನೆ ಕುರಿತು ಹಿರಿಯ ಅಧಿಕಾರಿಗಳಿಗೆ ದೂರುದಾರರೊಬ್ಬರ ಮನವಿ ಮೇರೆಗೆ ಅರ್ಜಿ ಉಲ್ಲೇಖಿಸಿದ ಹಿರಿಯ ಅಧಿಕಾರಿಗಳು ಚಿಕ್ಕಮಗಳೂರಿನ ಸಹಕಾರಿ ಇಲಾಖೆ ಉಪನಿಬಂಧಕರಿಗೆ ಈ ಸಂಬಂಧ ತನಿಖೆ ಕೈಗೊಳ್ಳುವಂತೆ ಪತ್ರ ಬರೆದು ವಿವಾದಕ್ಕೀಡಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪುರಸಭೆ ಮಾಜಿ ಸದಸ್ಯರಾದ ಸಿ.ಬಸವರಾಜು ಅವರು ಕೊಳ್ಳೇಗಾಲ ಟಿಎಪಿಸಿಎಂಎಸ್‌ನಲ್ಲಿ ಆಡಳಿತ ವಿಫಲತೆ, ಸ್ವಜನಪಕ್ಷಪಾತ, ಬೈಲಾ ಮತ್ತು ಉಪನಿಯಗಳನ್ನು ಉಲ್ಲಂಘನೆ ಮಾಡಲಾಗಿದ್ದು ತನಿಖೆ ನಡೆಸುವಂತ 3 ಪುಟಗಳ ದೂರೊಂದನ್ನು ಸಹಕಾರ ಸಚಿವರು, ರಾಜ್ಯ ಸಹಕಾರಿ ಅಧಿಕಾರವನ್ನು ಒಳಗೊಂಡಂತೆ ದೂರನ್ನು 2024ರ ಫೆಬ್ರವರಿ 24ರಂದು ಸಲ್ಲಿಸಿದ್ದರು. ದೂರಿಗೆ ಸಂಬಂಧಿಸಿದಂತೆ ಸಹಕಾರಿ ಸಚಿವರು ಹಿರಿಯ ಅಧಿಕಾರಿಗಳಿಗೆ ಅರ್ಜಿ ವರ್ಗಾಯಿಸಿದ ಹಿನ್ನೆಲೆ ಹಿರಿಯ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜು ದೂರಿನ ಹಿನ್ನೆಲೆ ತನಿಖೆ ನಡೆಸುವಂತೆ ಚಿಕ್ಕಮಗಳೂರಿನ ಸಹಕಾರ ಇಲಾಖೆಯ ಉಪನಿಬಂಧಕರಿಗೆ ಮಾ.15ರಂದು ಅರ್ಜಿ ವರ್ಗಾಯಿಸಿದ್ದರು. ಇದನ್ನ ಮನಗಂಡು ಪ್ರಶ್ನಿಸಿದ ದೂರುದಾರರು ಜಿಲ್ಲೆಯ ಸಹಕಾರ ಅಧಿಕಾರಿಗಳಿಗೆ ತನಿಖೆಗೆ ವರ್ಗಾಯಿಸಬೇಕಿತ್ತು, ಚಿಕ್ಕಮಗಳೂರಿನ ಅಧಿಕಾರಿಗಳಿಗೆ ಏಕೆ ವರ್ಗಾಯಿಸಲಾಗಿದೆ.? ತನಿಖೆ ಹಂತ ಎಲ್ಲಿತನಕ ಬಂದಿದೆ ಎಂದು ಪತ್ರ ಬರೆದ ಬಳಿಕ ಚಿಕ್ಕಮಗಳೂರಿನ ಸಹಕಾರಿ ಅಧಿಕಾರಿಗಳಿಗೆ ದೂರಿನ ಪ್ರತಿ ತಪ್ಪಿ ಇಲ್ಲಿಗೆ ಬಂದಿದ್ದು ದೂರುದಾರರ ಕೋರಿಕೆ ಮೇರೆಗೆ ಚಾ.ನಗರ ಸಹಕಾರಿ ಅಧಿಕಾರಿಗಳಿಗೆ ವರ್ಗಾಯಿಸಲಾಗಿದೆ ಎಂದು ಅರ್ಜಿ ಹಸ್ತಾಂತರಿಸಿದ ಬಳಿಕ ಸಹಕಾರಿ ಅಧಿಕಾರಿಗಳು ತಾಲೂಕು ಸಿಡಿಒಗೆ ಪ್ರಕರಣ ವರ್ಗಾಯಿಸಿದ್ದಾರೆ. ಈ ಹಿನ್ನೆಲೆ ತಾಲೂಕು ಸಿಡಿಒ ತನಿಖೆಯನ್ನು ನಡೆಸುತ್ತಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.3 ಪುಟಗಳ ದೂರಿನಲ್ಲೇನಿದೆ?:ಬಸವರಾಜು ಅವರು ಸಲ್ಲಿಸಿರುವ ದೂರಿನಲ್ಲಿ ಸಂಘದ ಚಟುವಟಿಕೆಯನ್ನು ಕೇವಲ ಒಂದು ಪೆಟ್ರೋಲ್ ಬಂಕ್‌ಗೆ ಸೀಮಿತಿಗೊಳಿಸಲಾಗಿದ್ದು ಸಂಘದ ಉಪನಿಯಮ, ಉದ್ದೇಶಗಳನ್ನು ಕಾರ್ಯರೂಪುಗೊಳಿಸಲು ವಿಫಲರಾಗಿದ್ದು, ತಾಲೂಕಿನ ರೈತಾಪಿ ವರ್ಗಕ್ಕೆ ಬೆಳೆದ ಬೆಳೆಗಳಿಗೆ ಹೆಚ್ಚಿನ ದರ ಸಿಗದಂತೆ ಮತ್ತು ಶೇಖರಣೆ ಮಾಡಲು ಸೌಲಭ್ಯ ಸಿಗದಂತೆ ಮಾಡಿರುತ್ತಾರೆ. ಸಂಘದ ಸರ್ಕಾರಿ ಗೋದಾಮುಗಳನ್ನು, ಅಂಗಡಿಗಳಲ್ಲಿ ರೈತಾಪಿ ವರ್ಗಕ್ಕೆ ಗೊಬ್ಬರ, ಬೀಜ ಶೇಖರಣೆಗೆ ಅವಕಾಶ ನೀಡದಂತೆ ಸಂಘದ ಬೈಲಾ ಉಪನಿಯಮಗಳನ್ನು ಉಲ್ಲಂಘಿಸುವ ಮೂಲಕ ಸಂಘ ಮಳಿಗೆಗಳನ್ನು ವರ್ಕ್‌ಶಾಪ್, ಕಟಿಂಗ್ ಶಾಪ್, ಜನರಲ್ ಸ್ಟೋರ್, ಜೆರಾಕ್ಸ್ ಅಂಗಡಿಗಳಿಗೆ ಖಾಸಗಿಯವರಿಗೆ ಬಾಡಿಗೆ ನೀಡಿ ಉದ್ದೇಶಿದ ಬೈಲಾಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.
ಸಂಘದಲ್ಲಿ 5 ವರ್ಷಗಳ ಕಾಲ ಆಡಿಟ್ ಮಾಡಿಸದೆ ಮರೆಮಾಚಿ ತಾತ್ಕಾಲಿಕ ತನಿಖೆಗಳಂತೆ ವಾರ್ಷಿಕ ಮಹಾಸಭೆ ನಡೆಸಿ, ಸಹಕಾರಿ ಕಾನೂನು ಕಾಯ್ದೆ 29ಸಿಯನ್ನು ಉಲ್ಲಂಘಿಸಿರುತ್ತಾರೆ. ಸಂಘಕ್ಕೆ ಆಡಳಿತ ಮಂಡಳಿ ಸಿಬ್ಬಂದಿ, ತಾತ್ಕಾಲಿಕ ನೌಕರರನ್ನು ನಿಯಮ ಉಲ್ಲಂಘಿಸಿ ನೇಮಕಮಾಡಿಕೊಂಡಿದ್ದು ಇದರಲ್ಲೂ ಸಹಾ ನಿಯಮ 27ಸಿಯನ್ನು ಉಲ್ಲಂಘಿಸಲಾಗಿದೆ ಎಂದು ದೂರಲಾಗಿದೆ.ಪೆಟ್ರೋಲ್ ಬಂಕ್ ಬಾಯ್ (ಡಿಗ್ರೂಫ್) ನೌಕರರನ ಮಹದೇವಸ್ವಾಮಿ ಎಂಬವರನ್ನು ನಿಯಮ ಉಲ್ಲಂಘಿಸಿ ನೇರವಾಗಿ ಕಂಪ್ಯೂಟರ್ ಸಿಬ್ಬಂದಿ ಮಹದೇವಸ್ವಾಮಿ ಮೂಲಕ ಬಹುಕೋಟಿ ಹಗರಣ ನಡೆಸಲು ಕಾರಣರಾಗಿರುತ್ತಾರೆ, ಈತನ ಕರ್ತವ್ಯ ಲೋಪದ ಕುರಿತು ಹಿಂದಿನ ಆಹಾರ ಇಲಾಖೆಯ ಉಪನಿರ್ದೇಶಕರೇ ಕರ್ತವ್ಯಲೋಪದ ಬಗ್ಗೆ ನೋಟೀಸ್ ನೀಡಿರುತ್ತಾರೆ, ಅಲ್ಲದೆ ಈತನ ನೇಮಕಾತಿಯಲ್ಲಿ ಮೀಸಲಾತಿ ಮತ್ತು ರೋಸ್ಟರ್ ಪದ್ದತಿ ಅನುಸರಿಸದೆ ನಿಯಮ ಉಲ್ಲಂಘನೆಯಾಗಿದೆ.
ಸಂಘದ ಬೈಲಾ ಮತ್ತು ಉಪನಿಯಮದಂತೆ ಸಂಘದಿಂದ ನೀಡುತ್ತಿರುವ ಉತ್ಪನ್ನವನ್ನು ಸರಿಯಾಗಿ ನಿರ್ವಹಣೆ ಮಾಡದೆ ಸುಸ್ತಿದಾರರಾಗಿರುವ ಸಂಘದ ಸದಸ್ಯ ರಾಜಗೋಪಾಲ್ ಅವರಿಗೆ ಸಂಘದ ಆಡಳಿತ ಮಂಡಳಿ, ಪ್ರಬಾರ ಕಾರ್ಯದರ್ಶಿ ಲಿಂಗರಾಜು, ಚುನಾವಣಾಧಿಕಾರಿ ಪದ್ಮನಾಭ ಇವರ ಸಹಕಾರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದು ಈಗ ಅವರು ಜಯಶೀಲರಾಗಿ ನಿರ್ದೇಶಕರಾದ ಮೇಲೆ ಈ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು ಸಂಘದಲ್ಲಿ ಅವ್ಯವಹಾರ ಈಗಲೂ ಮುಂದುವರೆದಿದ್ದು ಕಾನೂನು ಬಾಹಿರ ಚಟುವಟಿಕೆ ಸ್ವಜನ ಪಕ್ಷಪಾತಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ದೂರಲಾಗಿದೆ.ಸರ್ಕಾರಿ ಅನುಧಾನ ₹2 ಕೋಟಿ ಪಡೆಯಲು ವಿಫಲ: ದೂರುಅದೇ ರೀತಿಯಲ್ಲಿ ಸರ್ಕಾರದಿಂದ ಸಂಘಕ್ಕೆ ಬರಬೇಕಾದ ₹2ಲಕ್ಷ ಸಹಾಯಧನವನ್ನು ಇತರೆ ಬಿಲ್ಲುಗಳ ಮೊತ್ತ 2 ಕೋಟಿಗೂ ಅಧಿಕ ಹಣವನ್ನು (2009ರಿಂದ 2019ರತನಕ) 8 ವರ್ಷಗಳು ಕಳೆದಿದ್ದರೂ ಅದನ್ನ ಪಡೆಯಲು ವಿಫಲರಾಗಿದ್ದಾರೆ. ಕೋಟಿಗಟ್ಟಲೆ ಹಣ ದುರುಪಯೋಗ ಪ್ರಕರಣವನ್ನು ಇಬ್ಬರು ಸಿಡಿಒಗಳು ತನಿಖೆ ನಡೆಸಿದ್ದು ಇದರಲ್ಲೂ ಗೊಂದಲ ಸೃಷ್ಟಿಸಿರುತ್ತಾರೆ. ವಿಚಾರಣೆ ವೇಳೆ ಸರ್ಕಾರದಿಂದ ನೇಮಕಗೊಂಡ ನಾಮಿನಿ ಮತ್ತು ಬ್ಯಾಂಕ್ ಮೂಲಕ ನೇಮಕಗೊಂಡ ನಾಮಿಗಳನ್ನು ವಿಚಾರಣೆ ವೇಳೆ ಕೈಬಿಟ್ಟು ಕೆಲ ನಿರ್ದೇಶಕರನ್ನು ಮಾತ್ರ ತನಿಖೆ ನಡೆಸಿ ಅನೇಕ ವಾಸ್ತವ ವಿಚಾರವನ್ನು ಮರೆಮಾಚಲಾಗಿದೆ. ಆರೋಪಿಗಳನ್ನು ಕೈಬಿಟ್ಟು ಸತ್ಯ ಮರೆಮಾಚಲಾಗಿದ್ದು ಬಹುಕೋಟಿ ಹಗರಣವನ್ನು ಕೇವಲ ಕೋಟಿಗಳಿಗೆ ಸೀಮಿತಗೊಳಿಸಲಾಗಿದೆ. ಕೆಲವರನ್ನು ಮರೆಮಾಚಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಮಹಾಸಭೆಯ ನಿರ್ಣಯಗಳನ್ನು ಮರೆಮಾಚಿ ಸುಳ್ಳು ವರದಿ ಬರೆದು ಸ್ವಜನ ಪಕ್ಷಪಾತ ಎಸಗಲಾಗಿದೆ.
ಬಹುಕೋಟಿ ಹಗರಣದ ಕಿಂಗ್‌ಪಿನ್ 4 ವರ್ಷ ಮುಂದುವರಿಕೆ:ಸಂಸ್ಥೆಯಲ್ಲಿನ ಬಹುಕೋಟಿ ಹಗರಣದ ಪ್ರಮುಖ ಆರೋಪಿ ಪ್ರಭಾರಿ ಕಾರ್ಯದರ್ಶಿ ಪ್ಲೋರಿನಾ ಅವರು ಆರೋಪಿ ಎಂದು ತಿಳಿದಿದ್ದರೂ ಸಹಾ 4 ವರುಷಗಳ ಕಾಲ ಈಗಿನ ಆಡಳಿತ ಮಂಡಳಿ ಹುದ್ದೆಯಲ್ಲಿ ಮುಂದುವರೆಸಿಕೊಂಡು ಬಂದಿದ್ದು ಮಹಾಸಭೆಯಲ್ಲಿ ಚರ್ಚೆಗೆ ಮನವಿ ಸಲ್ಲಿಸುತ್ತಿದ್ದಂತೆ ಅವರನ್ನು ಅಮಾನತು ಮಾಡಲಾಗಿದೆ. ಈಕೆಯಿಂದ ಸಂಘದ ಲೆಕ್ಕ ಪತ್ರಗಳ ಬದಲಾವಣೆ ಮಾಡಿಸಿ ಹಗರಣದ ದಿಕ್ಕುತಪ್ಪಿಸಲು ಅನುಕೂಲ ಮಾಡಿಕೊಡುವ ಮೂಲಕ ಸಂಘದ ಬೈಲಾ ಮತ್ತು ಉಪನಿಯಮಗಳನ್ನು ಉಲ್ಲಂಘಿಸಲಾಗಿದೆ. ನೌಕರ ಕೃಷ್ಣಶೆಟ್ಟಿ ನೇಮಕಾತಿ ವಿಚಾರದಲ್ಲೂ ಸಭೆಯಲ್ಲಿ ಒಪ್ಪಿ ನಂತರ ಉದ್ದೇಶ ಬದಲಾಯಿ ವಾರ್ಷಿಕ ಸಭೆಗೆ ಅವಮಾನಿಸಿರುತ್ತಾರೆ.ಇಲ್ಲಿನ ಕೋಟಿ ಕೋಟಿ ಹಗರಣದಲ್ಲಿ ಬ್ಯಾಂಕ್ ನಾಮಿನಿ ನಿರ್ದೇಶಕರಾಗಿರುವ ಕಾರಣ ಸಂಸ್ಥೆಯನ್ನು ಸೂಪರ್ ಸೀಡ್ ಮಾಡಲಿಲ್ಲ, ಇದೆ ಹರಗಣಕ್ಕೆ ಸಂಬಂಧಿಸಿದಂತೆ ಯಳಂದೂರು ಸಂಸ್ಥೆ ಸೂಪರ್ ಸೀಡ್ ಮಾಡಲಾಗಿತ್ತು, ಕಳೆದ 8-10 ವರ್ಷಗಳಿಂದ ಸಂಘಕ್ಕೆ ಭೇಟಿ ನೀಡಿ ಅಲ್ಲಿವ ವಹಿವಾಟು ಪುಸ್ತಕ ಪರಿಶೀಲಿಸಿಲ್ಲ, ಹರಗಣ ನಡೆದು4 ವರ್ಷಗಳ ಬಳಿಕ ಹಿಂದಿನ ಪ್ರಭಾರಿ ಕಾರ್ಯದರ್ಶಿಯನ್ನು ಅಮಾನತುಗೊಳಿಸಿ ಲೋಪ ಎಸಗಲಾಗಿದ್ದು ಈ ಸಂಬಂಧ ಕ್ರಮಕೈಗೊಳ್ಳಬೇಕು. ಕ್ರಮಕೈಗೊಳ್ಳದ ಪಕ್ಷದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಬೇಕಾಗುತ್ತದೆ ಎಂದು ಬಸವರಾಜು ದೂರಿನಲ್ಲಿ ವಿವರ ನೀಡಿದ್ದಾರೆ.