ವಯನಾಡಿಗೆ ತಲುಪಿಸಲು ವಿವಿಧ ಸಾಮಾಗ್ರಿ ಸಂಗ್ರಹ

| Published : Aug 21 2024, 01:47 AM IST

ಸಾರಾಂಶ

ಖಾಂಡ್ಯ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರಿಂದ ಸಮಾಜಮುಖಿ ಕಾರ್ಯ

ಖಾಂಡ್ಯ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರಿಂದ ಸಮಾಜಮುಖಿ ಕಾರ್ಯಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂತ್ರಸ್ಥರಾದ ಕುಟುಂಬಗಳಿಗೆ ನೀಡಲು ಖಾಂಡ್ಯ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರು ವಿವಿಧ ಸಾಮಾಗ್ರಿಗಳನ್ನು ಸಂಗ್ರಹಿಸಿದರು.

ಖಾಂಡ್ಯ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕ ರಘುಪತಿ ಹಾಗೂ ಇತರೆ ಸ್ವಯಂ ಸೇವಕರು ಬಾಸಾಪುರ ಸಿದ್ಧಾಪುರದ ಶ್ರೀ ರಸಸಿದ್ದೇಶ್ವರಸ್ವಾಮಿ, ಅನ್ನಪೂರ್ಣೇಶ್ವರಿ ದೇವಸ್ಥಾನ ಸೇರಿದಂತೆ ವಿವಿಧೆಡೆಯಿಂದ ಬಟ್ಟೆ ಹಾಗೂ ದಿನಸಿ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದು, ಸಾಮಗ್ರಿಗಳನ್ನು ಎನ್.ಆರ್.ಪುರದ ಸಮಾಜ ಸೇವಕಿ ಜುಬೇದಾ ಅವರಿಗೆ ಹಸ್ತಾಂತರಿಸಲಾಯಿತು.

ಈ ಕುರಿತು ಸಮಾಜ ಸೇವಕಿ ಜುಬೇದಾ ಮಾಹಿತಿ ನೀಡಿ, ಖಾಂಡ್ಯ ಶೌರ್ಯ ವಿಪತ್ತು ಘಟಕದವರು ಪ್ರಕೃತಿ ವಿಕೋಪದ ಸಂತ್ರಸ್ಥರಿಗಾಗಿ ಸ್ಪಂದಿಸಿದ್ದು, ಇವರು ನೀಡಿರುವ ಬಟ್ಟೆ ಹಾಗೂ ಇತರೆ ಸಾಮಾಗ್ರಿಗಳನ್ನು ಸೆ. 7,8ರಂದು ವಯನಾಡಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.

ಈ ಸಮಾಜಮುಖಿ ಕಾರ್ಯಕ್ಕೆ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್, ಜೇಸಿಐ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳು ಕೈ ಜೋಡಿಸಲಿವೆ. ವಯನಾಡಿನಲ್ಲಿ ಎನ್.ಆರ್.ಪುರದ ಜಾನ್ ಅವರು ಪ್ರಸ್ತುತ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದು, ಅವರೊಂದಿಗೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚಿಸಿ ಅಲ್ಲಿಗೆ ಅಗತ್ಯವಿರುವ ವಸ್ತುಗಳನ್ನು ತಲುಪಿಸುವ ಕಾರ್ಯ ಮಾಡಲಾಗುವುದು ಎಂದರು

ಈ ವೇಳೆ ಸ್ವಯಂ ಸೇವಕರಾದ ವಿ.ಸಿ.ರಘುಪತಿ ಬಿದರೆ, ರಾಕೇಶ್, ಸೌಮ್ಯ, ಕೌಶಲ್ಯ ಮತ್ತಿತರರು ಹಾಜರಿದ್ದರು.