ಮಹಾಶಿವರಾತ್ರಿಯ ಅಂಗವಾಗಿ ಕಾಶಿಪುರ ಉತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಉತ್ಸವದ ಅಂಗವಾಗಿ ಮುಖ್ಯ ರಸ್ತೆಯಿಂದ ದೇವಾಲಯದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ಧ್ವಜಗಳು, ಭಜನೆ, ವೇದಘೋಷ ಮತ್ತು ನಾದಸ್ವರಗಳೊಂದಿಗೆ ಸಾಗಿದ ಶೋಭಾಯಾತ್ರೆ ಭಕ್ತರಲ್ಲಿ ಭಕ್ತಿ ಸಂಭ್ರಮವನ್ನು ಮೂಡಿಸಿತು. ಶೋಭಾಯಾತ್ರೆಯಲ್ಲಿ ರಾಷ್ಟ್ರೀಯ ಸ್ಯಂಸೇವಕ ಸಂಘ (ಆರ್‌ಎಸ್‌ಎಸ್) ಜೇಷ್ಠ ಪ್ರಚಾರಕರಾದ ಸೀತಾರಾಮ ಕೆದಿಲಾಯರು ಭಾಗವಹಿಸಿದ್ದು ವಿಶೇಷವಾಗಿತ್ತು.
ಹಾಸನ: ಮಹಾಶಿವರಾತ್ರಿಯ ಅಂಗವಾಗಿ ಕಾಶಿಪುರ ಉತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.
ಉತ್ಸವಕ್ಕೆ ಪೂರ್ವಭಾವಿಯಾಗಿ ಸ್ಥಳೀಯರು ಮತ್ತು ವೇದಭಾರತೀ ಸದಸ್ಯರು ಒಟ್ಟಾಗಿ ಶ್ರಮದಾನ ನಡೆಸಿ ದೇವಾಲಯ ಮತ್ತು ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸಿ ಸಜ್ಜುಗೊಳಿಸಿದರು. ಈ ಕಾರ್ಯದಲ್ಲಿ ಯುವಕರು, ಹಿರಿಯರು, ಮಹಿಳೆಯರು ಸಹ ಸಕ್ರಿಯವಾಗಿ ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಕೈಜೋಡಿಸಿದರು.
ಉತ್ಸವದ ಅಂಗವಾಗಿ ಮುಖ್ಯ ರಸ್ತೆಯಿಂದ ದೇವಾಲಯದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ಧ್ವಜಗಳು, ಭಜನೆ, ವೇದಘೋಷ ಮತ್ತು ನಾದಸ್ವರಗಳೊಂದಿಗೆ ಸಾಗಿದ ಶೋಭಾಯಾತ್ರೆ ಭಕ್ತರಲ್ಲಿ ಭಕ್ತಿ ಸಂಭ್ರಮವನ್ನು ಮೂಡಿಸಿತು. ಶೋಭಾಯಾತ್ರೆಯಲ್ಲಿ ರಾಷ್ಟ್ರೀಯ ಸ್ಯಂಸೇವಕ ಸಂಘ (ಆರ್‌ಎಸ್‌ಎಸ್) ಜೇಷ್ಠ ಪ್ರಚಾರಕರಾದ ಸೀತಾರಾಮ ಕೆದಿಲಾಯರು ಭಾಗವಹಿಸಿದ್ದು ವಿಶೇಷವಾಗಿತ್ತು.
ಇದೇ ವೇಳೆ ಪತಂಜಲಿ ಪರಿವಾರದ ರಾಜ್ಯ ಸಮಿತಿ ಸದಸ್ಯರು ಪರಮೇಶ್, ರಾಜ್ಯ ಯಜ್ಞ ಪ್ರಭಾರಿ ಹರಿಹರಪುರ ಶ್ರೀಧರ್, ಶಾರದ, ವೇಧ ಭಾರತೀ ಕಾರ್ಯದರ್ಶಿ ನಟರಾಜು, ಪವಿತ್ರ, ಸಾಹಿತಿ ಡಾ. ಶ್ರೀವತ್ಸ. ಎಸ್ ವಟಿ, ಉಮಮಹೇಶ್ವರ ಗುರೂಜಿ ಇತರರು ಪಾಲ್ಗೊಂಡಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.