ದುರಸ್ತಿಯಾಗದ ಚಿಕ್ಕಮಲ್ಲಿಗವಾಡ-ಕೆಎಚ್‌ಬಿ ಸಂಪರ್ಕ ರಸ್ತೆ

| Published : Oct 30 2025, 02:00 AM IST

ದುರಸ್ತಿಯಾಗದ ಚಿಕ್ಕಮಲ್ಲಿಗವಾಡ-ಕೆಎಚ್‌ಬಿ ಸಂಪರ್ಕ ರಸ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮೀಪದ ಚಿಕ್ಕಮಲ್ಲಿಗವಾಡ ರಸ್ತೆಯಿಂದ ಕೆಎಚ್‌ಬಿ ಬಡಾವಣೆ ಹೋಗುವ ರಸ್ತೆಯ ದುರಸ್ತಿಯು ಆರು ತಿಂಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸ್ಥಳೀಯರಿಗೆ ತೀವ್ರ ಸಮಸ್ಯೆ ತಂದೊಡ್ಡಿದೆ.

ಧಾರವಾಡ: ಸಮೀಪದ ಚಿಕ್ಕಮಲ್ಲಿಗವಾಡ ರಸ್ತೆಯಿಂದ ಕೆಎಚ್‌ಬಿ ಬಡಾವಣೆ ಹೋಗುವ ರಸ್ತೆಯ ದುರಸ್ತಿಯು ಆರು ತಿಂಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸ್ಥಳೀಯರಿಗೆ ತೀವ್ರ ಸಮಸ್ಯೆ ತಂದೊಡ್ಡಿದೆ.

ಚಿಕ್ಕಮಲ್ಲಿಗವಾಡ-ಹಿರೇಮಲ್ಲಿಗವಾಡ ಹಾಗೂ ಕೆ.ಎಚ್‌.ಬಿ.ಯಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಅಲ್ಲಿಯ ಹೈಕೋರ್ಟ್, ಕೈಗಾರಿಕಾ ಪ್ರದೇಶ, ಐಐಟಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಹೋಗಲು ಇದೊಂದೇ ಸಂಪರ್ಕ ರಸ್ತೆ. ದುರಂತದ ಸಂಗತಿ ಏನೆಂದರೆ, ರಸ್ತೆ ಒಂದು ಬದಿ ಗಟಾರು ನಿರ್ಮಿಸಲು ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ. ಇನ್ನೊಂದೆಡೆ ಮಣ್ಣಿನ ಗುಡ್ಡೆ ನಿರ್ಮಿಸಿದ್ದು, ನಾಲ್ಕು ಚಕ್ರವಲ್ಲ, ಬೈಕ್‌ಗಳು ಸಹ ಹೋಗದ ಸ್ಥಿತಿ ಉಂಟಾಗಿದೆ. ಸಣ್ಣ ಸೇತುವೆ ನಿರ್ಮಿಸುತ್ತಿದ್ದು ಅದು ಸಹ ಅವೈಜ್ಞಾನಿಕವಾಗಿದೆ ಎಂದು ಆರೋಪಿಸುವ ಚಿಕ್ಕಮಲ್ಲಿಗವಾಡದ ಪರಮೇಶ ಅಂಗಡಿ ಹಾಗೂ ಗ್ರಾಮಸ್ಥರು, ಈ ಬಗ್ಗೆ ಪಿಡಿಒ ಸುನೀಲ ಕಾಂಬ್ಳೆ, ನೋಡೋಣ, ಮಾಡೋಣ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಗುರು ನಗರ, ಕೆಎಚ್‌ಬಿ ಕಾಲೋನಿ ಮತ್ತು ಹಿರೇಮಲ್ಲಿಗವಾಡಕ್ಕೆ ಬಸ್ ರಸ್ತೆ ಮೂಲಕವೇ ಹೋಗಬೇಕು. ಈ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಆರು ತಿಂಗಳಿಂದ ಬಸ್‌ ಬಂದಿಲ್ಲ. ಈಗ ಮಳೆ ಬರುತ್ತಿದ್ದು ಬೈಕ್‌ ಸವಾರರು ಹೋಗಲು ಪರದಾಡಬೇಕಿದೆ. ಕೂಡಲೇ ಈ ರಸ್ತೆ ಕಾಮಗಾರಿ ಮುಕ್ತಾಯಗೊಳಿಸದೇ ಇದ್ದಲ್ಲಿ ಚಿಕ್ಕಮಲ್ಲಿಗವಾಡದ ಮುಖ್ಯ ರಸ್ತೆ ಬಂದ್‌ ಮಾಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು.